Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗಾಯಕ ವಿಜಯ್ ಪ್ರಕಾಶ್ ಮೆಚ್ಚಿದ 'ಆರಾಮ್ಸೆ' ಹಾಡು
ಕನ್ನಡದಲ್ಲಿ ಆಲ್ಬಮ್ ಹಾಡುಗಳ ಟ್ರೆಂಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯುವ ಪ್ರತಿಭೆಗಳು ತಮ್ಮ ಟ್ಯಾಲೆಂಟ್ ಪ್ರದರ್ಶಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿಸಿಕೊಳ್ಳುತ್ತಿದ್ದಾರೆ. ನಟನೆ, ನಿರ್ದೇಶನ, ಗಾಯನ ಅಥವಾ ಇನ್ನಿತರ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುವ ಉದ್ದೇಶದಿಂದ ಇಂತಹ ಆಲ್ಬಮ್ ಹಾಡುಗಳು ಹುಟ್ಟಿಕೊಳ್ಳುತ್ತಿವೆ.
ಹೀಗೆ, ಚಿತ್ರರಂಗದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಕನಸು ಹೊತ್ತು ಬಂದಿರುವ ಅಭಿಷೇಕ್ ಮಠದ್ 'ಆರಾಮ್ಸೆ' ಎಂಬ ಹಾಡೊಂದನ್ನು ರಚಿಸಿ ಸದ್ದು ಮಾಡ್ತಿದ್ದಾರೆ. ಸಿದ್ಧು ರಾಜ್ ಗೀತೆ ರಚನೆ ಮಾಡಿರುವ ಈ ಹಾಡನ್ನು ಕೊರಿಯೋಗ್ರಫಿ ಮಾಡಿ, ನಿರ್ದೇಶಿಸಿ ಹಾಗೂ ನಟಿಸಿರುವುದು ಅಭಿಷೇಕ್ ಮಠದ್.
ಸೋಶಿಯಲ್
ಮೀಡಿಯಾದಲ್ಲಿ
ಟ್ರೆಂಡ್
ಸೃಷ್ಟಿಸಿದ
'ಓ
ಬೇಬಿ,
ಐ
ಲವ್
ಯೂ'
ಸೆಪ್ಟೆಂಬರ್ 23 ರಂದು ಕ್ರೈಸ್ಟಲ್ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಯುವ ಸಂಗೀತ ಪ್ರೇಮಿಗಳ ಮನಸ್ಸು ಗೆದ್ದಿದೆ. ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಆಗಿ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ 'ಅರಾಮ್ಸೆ' ಹವಾ ಸ್ವಲ್ಪ ಜೋರಾಗಿಯೇ ಇದೆ.
ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡಿನ ಮೇಕಿಂಗ್ ಕುರಿತು ವಿಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಅಭಿಷೇಕ್ ಮಠದ್ ಒಬ್ಬ ಕನಸುಗಾರ, ತನ್ನ ಜೀವನದಲ್ಲಿ ಕಂಡಂತ ಸೋಲು-ಗೆಲುವುಗಳನ್ನು ಆರಾಮ್ಸೆ ಹಾಡಿನಲ್ಲಿ ಬಿಂಬಿಸಿದ್ದಾರೆ. ಒಳ್ಳೆಯ ನಟ, ಡ್ಯಾನ್ಸರ್. ಈ ಹಾಡಿನಲ್ಲಿ ಒಂದು ಜರ್ನಿ ಇದೆ. ಬಹಳ ಚೆನ್ನಾಗಿ ಬಂದಿದೆ, ನಿಮ್ಮೆಲ್ಲರ ಆಶೀರ್ವಾದ, ಸಹಕಾರ ಬೇಕು, ಅಭಿಷೇಕ್ ಅವರಿಗೆ ಅಭಿನಂದನೆಗಳು. ಜನ ಇಷ್ಟಪಟ್ಟಿದ್ದಾರೆ'' ಎಂದು ಶುಭಕೋರಿದ್ದಾರೆ.
ಯೂಟ್ಯೂಬ್‌ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಇದುವರೆಗೂ 40 ಸಾವಿರ ವೀಕ್ಷಣೆ ಕಂಡಿದೆ. ಈ ಹಾಡಿಗೆ ಸ್ವತಃ ಅಭಿಷೇಕ್ ಮಠದ್ ಬಂಡವಾಳ ಹಾಕಿದ್ದಾರೆ.

ಯಾರು ಈ ಅಭಿಷೇಕ್ ಮಠದ್?
ದಾವಣಗೆರೆ ಮೂಲದ ಅಭಿಷೇಕ್ ಮಠದ್ ಓರ್ವ ಡ್ಯಾನ್ಸರ್. ಕಂಪ್ಯೂಟರ್ ಅಪ್ಲಿಕೇಶನ್ ಪದವಿ ಮುಗಿಸಿರುವ ಅಭಿಷೇಕ್ ಮುಂಬೈ ಹಾಗೂ ಇತರೆ ಕಡೆ ಖಾಸಗಿ ಕಂಪನಿಗಳಲ್ಲಿ ಕೆಲಸ ಸಹ ಮಾಡಿದ್ದಾರೆ. ನಂತರ ಆ ಕೆಲಸ ಬಿಟ್ಟು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಉದ್ದೇಶದಿಂದ ಸುಮಾರು ಹತ್ತು ವರ್ಷ ಡ್ಯಾನ್ಸ್ ಕ್ಲಾಸ್ ಮಾಡಿದ್ದರು, ಜೊತೆಗೆ ಕಲಾವಿದ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಡ್ಯಾನ್ಸ್ ಕೊರಿಯೋಗ್ರಫರ್ ಆಗ್ಬೇಕು, ಒಬ್ಬ ನಟ ಆಗ್ಬೇಕು ಎಂಬ ಆಸೆಯಿಂದ ಅಭಿಷೇಕ್ ಮಠದ್ ಬೆಂಗಳೂರಿಗೆ ಬಂದರು.
ನೂರಾರು ಕನಸುಗಳೊಂದಿಗೆ ಹಲವು ರೀತಿ ಪ್ರಯತ್ನಗಳಿಗೆ ಕೈ ಹಾಕಿದರೂ ಯಾವುದೇ ಕೈಗೂಡಲಿಲ್ಲ. ಸತತವಾಗಿ ಹಿನ್ನಡೆ. ಬಹಳ ಡ್ಯಾನ್ಸ್ ಶೋಗಳಲ್ಲಿ ಆಡಿಷನ್ ಕೊಟ್ಟರೂ ಯಾವುದೋ ಕಾರಣಕ್ಕೆ ರಿಜೆಕ್ಟ್ ಆಗುತ್ತಿದ್ದರು. ಆದರೂ ಧೃತಿಗೆಡದ ಅಭಿಷೇಕ್ ಇತರರ ಮ್ಯೂಸಿಕ್ ಆಲ್ಬಂಗಳಲ್ಲಿ ಕೆಲಸ ಮಾಡಲು ಶುರು ಮಾಡಿದರು. ನಟನೆ, ಪ್ರೊಡಕ್ಷನ್ ಹೀಗೆ ಪ್ರತಿಯೊಂದು ವಿಭಾಗದಲ್ಲೂ ತೊಡಗಿಕೊಂಡರು.
ಬಿಗ್ ಬಾಸ್ ಗೌತಮಿ ಗೌಡ ಕಾಣಿಸಿಕೊಂಡಿದ್ದ 'ದಿಲ್ ಕಿ ಬಾತ್' ಹಾಗೂ ಚಂದನ್ ಶೆಟ್ಟಿ ಅವರ 'ಟಕೀಲಾ' ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ದಿಗಂತ್ ಅವರಿಗೆ ಹಾಡೊಂದನ್ನು ಕೊರಿಯೋಗ್ರಫಿ ಮಾಡಿದ್ದರು. ಅದಿತಿ ಪ್ರಭುದೇವ ಹೆಜ್ಜೆ ಹಾಕಿದ್ದ 'ಪರ್ಫೆಕ್ಟ್ ಗರ್ಲ್' ಹಾಡನ್ನು ಕೊರಿಯೋಗ್ರಫಿ ಮಾಡಿ ಡೈರೆಕ್ಟ್ ಮಾಡಿದ್ದರು. 'ಬಡಪಾಯಿ ಕುಡುಕ' ಎಂಬ ಮ್ಯೂಸಿಕ್ ವಿಡಿಯೋದಲ್ಲಿ ನಟಿಸಿ, ಕೊರಿಯೋಗ್ರಫಿ ಮಾಡಿದರು. ಈ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದರು. ಇದರ ಜೊತೆಗೆ ಕೆಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದಾರೆ. ಕೆಲವು ಚಿತ್ರಗಳ ಮಾತುಕತೆಯೂ ನಡೆಯುತ್ತಿದೆ ಎಂಬ ಮಾಹಿತಿ ಸಹ ಹಂಚಿಕೊಂಡಿದ್ದಾರೆ.