Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮದುವೆ ಸಂಭ್ರಮದಲ್ಲಿ ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ
ಖ್ಯಾತ ಗಾಯಕ ಉದ್ದಿತ್ ನಾರಾಯಣ್ ಪುತ್ರ, ಪ್ರಸಿದ್ಧ ನಿರೂಪಕ ಆದಿತ್ಯ ನಾರಾಯಣ್ ಮದುವೆ ಸಂಭ್ರಮದಲ್ಲಿದ್ದಾರೆ. ಆದಿತ್ಯ ಬಹುಕಾಲದ ಗೆಳತಿ ಶ್ವೇತಾ ಅಗರ್ವಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು ಡಿಸೆಂಬರ್ 1ರಂದು ಮುಂಬೈನಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ ಆದಿತ್ಯ, ಶ್ವೇತಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ.
ಈಗಾಗಲೇ ಆದಿತ್ಯ ಮತ್ತು ಶ್ವೇತಾ ಮನೆಯಲ್ಲಿ ಮದುವೆ ಪೂರ್ವ ಶಾಸ್ತ್ರಗಳು ನಡೆಯುತ್ತಿದ್ದು, ಶಾಸ್ತ್ರಗಳ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಂಗೀತ ಸಮಾರಂಭ, ಮೆಹಂದಿ ಶಾಸ್ತ್ರ ಸೇರಿದಂತೆ ಅನೇಕ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದ್ದು, ಆದಿತ್ಯ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮುಂದೆ ಓದಿ...
ಯುವ ಗಾಯಕನ ವಿವಾಹ: ಮೋದಿ-ಅಮಿತಾಬ್ ಗೆ ಆಹ್ವಾನ

ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ
ಆದಿತ್ಯ ಮತ್ತು ಶ್ವೇತಾ ಮದುವೆ ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಡೆಯಲಿದೆ. ಕೊರೊನಾ ಕಾರಣ ತೀರ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಇಂಗ್ಲಿಷ್ ವೆಬ್ ಪೋರ್ಟಲ್ ಜೊತೆ ಮಾತನಾಡಿದ್ದ ಆದಿತ್ಯ, ಡಿಸೆಂಬರ್ 1ರಂದು ಮದುವೆ. ಕೊರೊನಾ ವೈರಸ್ ಪರಿಣಾಮ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಮದುವೆಯಲ್ಲಿ 50 ಕ್ಕು ಹೆಚ್ಚು ಮಂದಿ ಭಾಗಿಯಾಗುವ ಹಾಗಿಲ್ಲ. 50ಕ್ಕೂ ಹೆಚ್ಚು ಜನಕ್ಕೆ ಅನುಮತಿ ಇಲ್ಲ' ಎಂದು ಹೇಳಿದ್ದಾರೆ.

ಮದುವೆ ಫೋಟೋಗಳು ವೈರಲ್
ಆದಿತ್ಯ ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಜೋಡಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಆದಿತ್ಯ ಮತ್ತು ಶ್ವೇತಾ ಜೋಡಿಯ ಜೊತೆ ಆದಿತ್ಯ ತಂದೆ ಖ್ಯಾತ ಗಾಯಕ ಉದಿತ್ ನಾರಾಯಣ್ ದಂಪತಿ ಸಹ ಫೋಟೋಗೆ ಪೋಸ್ ನೀಡಿದ್ದಾರೆ.
ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ 'ಮಹಾಭಾರತ' ಧಾರಾವಾಹಿಯ ಅರ್ಜುನ

ಅಭಿಮಾನಿಗಳು ಮತ್ತು ಗಣ್ಯರ ವಿಶ್
ಆದಿತ್ಯ ಶೇರ್ ಮಾಡಿರುವ ಫೋಟೋಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಕಾಮೆಂಟ್ಸ್ ಮಾಡಿ ಶುಭಕೋರುತ್ತಿದ್ದಾರೆ. ಇತ್ತೀಚಿಗೆ ಹಸೆಮಣೆ ಏರಿದ ನೇಹಾ ಕಕ್ಕರ್, ನಿಯಾ ಶರ್ಮಾ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.

ಇತ್ತೀಚಿಗಷ್ಟೆ ಮದುವೆ ವಿಚಾರ ಬಹಿರಂಗ ಪಡಿಸಿದ್ದ ಆದಿತ್ಯ
ಇಂಡಿಯನ್ ಐಡಲ್ ನ ನಿರೂಪಕ ಆದಿತ್ಯ ಮತ್ತು ಶ್ವೇತಾ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ವಿಕ್ರಮ್ ಭಟ್ ಅವರ ಶಾಪಿಟ್ ಚಿತ್ರದ ಸಮಯದಿಂದ ಪ್ರಾರಂಭವಾದ ಇಬ್ಬರ ಸ್ನೇಹ ಬಳಿಕ ಪ್ರೀತಿಗೆ ತಿರುಗಿ ಇದೀಗ ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರು ಹಸೆಮಣೆ ಏರುತ್ತಿದ್ದಾರೆ. ಇಬ್ಬರ ಪ್ರೀತಿಯ ವಿಚಾರ ಅನೇಕ ಬಾರಿ ಸದ್ದು ಮಾಡಿದ್ದರು, ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಕೊನೆಯದಾಗಿ ಕಳೆದ ತಿಂಗಳು ಇಬ್ಬರು ಮದುವೆ ಆಗುತ್ತಿರುವುದಾಗಿ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.