For Quick Alerts
  ALLOW NOTIFICATIONS  
  For Daily Alerts

  'ಹರ್ ಘರ್ ತಿರಂಗಾ' ಅಭಿಯಾನಕ್ಕೆ ವಿಶೇಷ ಗೀತೆ: ಯಾರೆಲ್ಲಾ ಇದ್ದಾರೆ ಗೊತ್ತಾ?

  |

  ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಅಭಿಯಾನಕ್ಕೆ ಮತ್ತಷ್ಟು ಶಕ್ತಿ ತುಂಬಲು 'ಹರ್ ಘರ್ ತಿರಂಗಾ' ಅನ್ನುವ ದೇಶಭಕ್ತಿ ಗೀತೆ ಸಿದ್ಧವಾಗಿದೆ.

  ಮನ್ ಕೀ ಬಾತ್‍ನ 91ನೇ ಸರಣಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಐತಿಹಾಸಿಕ ಮತ್ತು ಶ್ರೀಮಂತ ಪರಂಪರೆಯ ಕ್ಷಣಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಅಭಿಯಾನ ಕೂಡ ನಡೆಯುತ್ತಿದೆ. ಇದರ ಹಿನ್ನೆಲೆಯಲ್ಲಿ ನಮ್ಮ ದೇಶಕ್ಕೆ ಗೌರವ ಸೂಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 13 ಮತ್ತು 15ರ ನಡುವೆ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಅಥವಾ ಪ್ರದರ್ಶಿಸಲು ಕರೆ ನೀಡಿದ್ದಾರೆ.

  ನಮ್ಮ ತಿರಂಗ ಭರವಸೆಯ ಸಂಕೇತ: ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಎಂದ ಯಶ್!ನಮ್ಮ ತಿರಂಗ ಭರವಸೆಯ ಸಂಕೇತ: ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಎಂದ ಯಶ್!

  ಇನ್ನು ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್‌ಗೆ ರಾಷ್ಟ್ರಧ್ವಜದ ಚಿತ್ರ ಬಳಸಲು ಪ್ರಧಾನಿ ಮೋದಿ ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಜನ ಈ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಸೇರಿದಂತೆ ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಡಿಸ್‌ಪ್ಲೇನಲ್ಲಿ ರಾಷ್ಟ್ರಧ್ವಜದ ಚಿತ್ರ ಹಾಕಿಕೊಳ್ಳುತ್ತಿದ್ದಾರೆ. ಇದೀಗ 'ಹರ್ ಘರ್ ತಿರಂಗಾ' ಅನ್ನುವ ಗೀತೆ ಬಿಡುಗಡೆಯಾಗಿ ಅಭಿಯಾನಕ್ಕೆ ಮತ್ತಷ್ಟು ಹುರುಪು ತಂದಿದೆ.

  ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ ಸಾಧಕರು

  ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಭಾಷೆಗಳು, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆಯನ್ನು ಹಾಡಿನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಡಿನುದ್ದಕ್ಕೂ ನೋಡಬಹುದು. ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರು ಪ್ರಧಾನವಾಗಿ ಕಾಣಿಕೊಂಡಿದ್ದಾರೆ.

   ಸೋನು, ಆಶಾ ಭೋಂಸ್ಲೆ ಗಾಯನ

  ಸೋನು, ಆಶಾ ಭೋಂಸ್ಲೆ ಗಾಯನ

  ದೇಶಭಕ್ತಿ ಉಕ್ಕಿಸುವ 'ಹರ್ ಘರ್ ತಿರಂಗಾ' ಹಾಡನ್ನು ಪ್ರಧಾನವಾಗಿ ಸೋನು ನಿಗಮ್ ಹಾಗೂ ಆಶಾ ಭೋಂಸ್ಲೆ ಹಾಡಿದ್ದಾರೆ. ಇನ್ನುಳಿದಂತೆ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಆಯಾ ಭಾಷೆಯಲ್ಲಿ ಆಯಾ ಭಾಷೆಯ ಸಾಧಕರು 'ಮನೆ ಮನೆಗೂ ತ್ರಿವರ್ಣ' ಎಂದು ಹಾಡಿದ್ದಾರೆ.

   ಗೀತೆಯಲ್ಲಿ ಪ್ರಭಾಸ್, ಬಿಗ್‌ಬಿ, ಕಪಿಲ್ ದೇವ್

  ಗೀತೆಯಲ್ಲಿ ಪ್ರಭಾಸ್, ಬಿಗ್‌ಬಿ, ಕಪಿಲ್ ದೇವ್

  ದೇವಿಶ್ರೀ ಪ್ರಸಾದ್ ಕಂಪೋಸ್ ಮಾಡಿರುವ 'ಹರ್ ಘರ್ ತಿರಂಗಾ' ಗೀತೆಯಲ್ಲಿ ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರದ ತಾರೆಯರನ್ನು ಹೆಚ್ಚು ನೋಡಬಹುದು. ಸಿನಿಮಾ ತಾರೆಯರಾದ ಅಮಿತಾಬ್‌ ಬಚ್ಚನ್, ಪ್ರಭಾಸ್, ಕೀರ್ತಿ ಸುರೇಶ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ, ಕ್ರೀಡಾ ಕ್ಷೇತ್ರದ ನೀರಜ್ ಚೋಪ್ರಾ, ಕೆ.ಎಲ್ ರಾಹುಲ್, ಕಪಿಲ್ ದೇವ್, ವಿರಾಟ್ ಕೊಹ್ಲಿ, ಪಿ. ವಿ ಸಿಂಧು ಸೇರಿದಂತೆ ಹಲವರು 'ಹರ್ ಘರ್ ತಿರಂಗಾ' ಎಂದು ಹಾಡಿದ್ದಾರೆ.

   ಸದ್ದು ಮಾಡ್ತಿದೆ 'ಹರ್ ಘರ್ ತಿರಂಗಾ'

  ಸದ್ದು ಮಾಡ್ತಿದೆ 'ಹರ್ ಘರ್ ತಿರಂಗಾ'

  ದೇಶದ ವಿವಿಧ ಸ್ಮಾರಕಗಳು, ಕಲೆ, ಸಂಸ್ಕೃತಿಯ ಪರಿಚಯ ಮಾಡಿಸುವ ವಿಡಿಯೋಗಳನ್ನು ಸೇರಿಸಿ ಬಹಳ ಸೊಗಸಾಗಿ ಹಾಡನ್ನು ಕಟ್ಟಿಕೊಡಲಾಗಿದೆ. ಸದ್ಯ 'ಹರ್ ಘರ್ ತಿರಂಗಾ' ಸಾಂಗ್ ಸಖತ್ ವೈರಲ್‌ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

  English summary
  Har Ghar Tiranga Patriotic Song Released. Know More.
  Thursday, August 4, 2022, 9:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X