»   » ಬಾಲಿವುಡ್ ಗೆ ಸಂಗೀತ ಮಾಂತ್ರಿಕ ಇಳಯರಾಜ ಪುತ್ರ

ಬಾಲಿವುಡ್ ಗೆ ಸಂಗೀತ ಮಾಂತ್ರಿಕ ಇಳಯರಾಜ ಪುತ್ರ

Posted By:
Subscribe to Filmibeat Kannada
Yuvan Shankar Raja
ಸಂಗೀತ ಮಾಂತ್ರಿಕ ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಬಾಲಿವುಡ್ ಗೆ ಅಡಿಯಿಟ್ಟಿದ್ದಾರೆ. ಇಮ್ರಾನ್ ಹಶ್ಮಿ ನಾಯಕ ನಟನಾಗಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕುನಾಲ್ ದೇಶ್ ಮುಖ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

"ಯುವನ್ ಅವರ ಸಂಗೀತದಲ್ಲಿ ಎಲ್ಲರನ್ನೂ ಆಕರ್ಷಿಸುವ ಗುಣವಿದೆ. ತಮ್ಮ ಚಿತ್ರದ ಮೂಲಕ ಅವರನ್ನು ಪರಿಚಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ" ಎಂದಿದ್ದಾರೆ ಡಿಸ್ನಿ ಯುಟಿವಿ ಹಾಗೂ ಸ್ಟುಡಿಯೋಸ್ ಕ್ರಿಯೇಟೀವ್ ಡೈರೆಕ್ಟರ್ ಮನೀಷ್ ಹರಿಪ್ರಸಾದ್.

ಇನ್ನೂ ನಿರ್ಮಾಣ ಪೂರ್ವದಲ್ಲಿರುವ ಈ ಚಿತ್ರದ ನಾಯಕಿ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ. ಇನ್ನೇನು ಯುವನ್ ಅವರು ಮುಂಬೈ ಫ್ಲೈಟ್ ಹತ್ತುವುದು ಮಾತ್ರ ಬಾಕಿ ಇದೆ. ಹಾಡುಗಳ ಸಂಗೀತ ಸಂಯೋಜನೆ ಅಲ್ಲೇ ನಡೆಯಲಿದೆ.

ಇಳಯರಾಜ ಅವರು ಹಿಂದಿಯಲ್ಲಿ ಹಲವಾರು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಅವರ ಸಂಗೀತ ಸಂಯೋಜನೆಯ ಸುಮಧುರ ಹಾಡುಗಳು ಕೇವಲ ದಕ್ಷಿಣ ಭಾರತದಲ್ಲಷ್ಟೇ ಅಲ್ಲದೆ ಉತ್ತರದಲ್ಲೂ ಮೋಡಿ ಮಾಡಿವೆ. ಈಗ ಅವರ ಪುತ್ರ ಯುವನ್ ಬಗ್ಗೆಯೂ ಅದೇ ನಂಬಿಕೆ ಇದೆ. (ಏಜೆನ್ಸೀಸ್)

English summary
Yuvan Shankar Raja, son of legendary music composer Ilayaraja, who is all set to compose the music for Kunal Deshmukh's next (untitled) starring Emraan Hashmi.
Please Wait while comments are loading...