»   » ಈ ಹಾಡುಗಳಲ್ಲಿ ನಿಮ್ಮ ಕನ್ನಡಾಭಿಮಾನವನ್ನು ಬಡಿದೆಬ್ಬಿಸುವ ಶಕ್ತಿ ಇದೆ.!

ಈ ಹಾಡುಗಳಲ್ಲಿ ನಿಮ್ಮ ಕನ್ನಡಾಭಿಮಾನವನ್ನು ಬಡಿದೆಬ್ಬಿಸುವ ಶಕ್ತಿ ಇದೆ.!

Posted By:
Subscribe to Filmibeat Kannada

'ಕನ್ನಡ..' ನಮ್ಮ ಭಾಷೆ. ಈ ಭಾಷೆ ಅಂದರೆ ನಮಗೆ ಅದೇನೋ ಅಭಿಮಾನ.. ಪ್ರೀತಿ. ಅದೇ ರೀತಿ ಸಿನಿಮಾ ಮಂದಿಗೆ ಸಹ ಕನ್ನಡದ ಬಗ್ಗೆ ಅಪಾರ ಅಭಿಮಾನ. ಅದನ್ನು ಅವರು ತಮ್ಮ ಸಿನಿಮಾಗಳಲ್ಲಿ ಅನೇಕ ಬಾರಿ ತೋರಿಸಿದ್ದಾರೆ.

ಕನ್ನಡ ಸಿನಿಮಾದ ಹಾಡುಗಳಲ್ಲಿ ಕನ್ನಡ ಭಾಷೆ ರಾರಾಜಿಸಿದೆ. ಕನ್ನಡದ ಮೇಲೆ ಇರುವ ಕೆಲವು ಹಾಡುಗಳನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ಈ ಹಾಡುಗಳಿಗೆ ನಮ್ಮ ಕನ್ನಡ ಅಭಿಮಾನವನ್ನು ಮತ್ತಷ್ಟು ಜಾಸ್ತಿ ಮಾಡುವ ಶಕ್ತಿ ಇದೆ.

ಅಂದಹಾಗೆ, ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಕನ್ನಡದ ಬಗ್ಗೆ ಇರುವ ಕೆಲವು ಹಾಡುಗಳು ಇಲ್ಲಿವೆ, ನೋಡಿ, ಕೇಳಿ...

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..

'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಈ ಹಾಡು ಕನ್ನಡಿಗರ ಮನಸ್ಸಿನಲ್ಲಿ ಬೆರೆತು ಹೋಗಿದೆ. 'ಆಕಸ್ಮಿಕ' ಸಿನಿಮಾದ ಈ ಹಾಡಿಗೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಡಾ.ರಾಜ್ ಕನ್ನಡ ಬಾವುಟ ಹಿಡಿದು ಕುಣಿದಿದ್ದಾರೆ.

ಕನ್ನಡವೇ ನಮ್ಮಮ್ಮ..

'ಮೋಜುಗಾರ ಸೊಗಸುಗಾರ' ಚಿತ್ರದ ಈ ಹಾಡಿನಲ್ಲಿ ಕನ್ನಡವನ್ನು ತಾಯಿಗೆ ಹೋಲಿಸಲಾಗಿದೆ. ಹಾಡಿನಲ್ಲಿ ವಿಷ್ಣುವರ್ಧನ್ ಕನ್ನಡದ ಕಂದನಾಗಿ ಮಿಂಚಿದ್ದಾರೆ.

ಕನ್ನಡ ಮಣ್ಣನ್ನು ಮರಿಬೇಡ..

'ಸೋಲಿಲ್ಲದ ಸರದಾರ' ಚಿತ್ರದ ಈ ಹಾಡಿನಲ್ಲಿ 'ಕನ್ನಡ ಮಣ್ಣನ್ನು ಮರಿಬೇಡ.. ಈ ಮಣ್ಣಿನ ಹೆಣ್ಣನ್ನು ಜರಿಬೇಡ..' ಎಂಬ ಅದ್ಭುತ ಮಾತುಗಳನ್ನು ಹೇಳಲಾಗಿದೆ.

ಕನ್ನಡ ಹೊನ್ನುಡಿ ದೇವಿಯನ್ನು..

'ಒಂದು ಸಿನಿಮಾ ಕಥೆ' ಚಿತ್ರದ 'ಕನ್ನಡ ಹೊನ್ನುಡಿ ದೇವಿಯನ್ನು..' ಹಾಡಿನಲ್ಲಿ ಕನ್ನಡದ ಮಹಾನ್ ಕವಿಗಳನ್ನು ನೆನೆದಿದ್ದಾರೆ.

'ಸಿಪಾಯಿ' ಚಿತ್ರದ ಹಾಡು

'ಸಿಪಾಯಿ' ಸಿನಿಮಾದ 'ರುಕ್ಕಮ್ಮ..' ಹಾಡಿನಲ್ಲಿ ರವಿಚಂದ್ರನ್ ತಮ್ಮ ಕನ್ನಡಾಭಿಮಾನವನ್ನು ತೋರಿದ್ದಾರೆ.

ಬಾರಿಸು ಕನ್ನಡ ಡಿಂಡಿಮ..

ರಾಷ್ಟ್ರಕವಿ ಕುವೆಂಪು ಅವರ 'ಬಾರಿಸು ಕನ್ನಡ ಡಿಂಡಿಮ..' ಹಾಡು ಕೇಳಿದ ಎಲ್ಲರಿಗೂ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯ ಎಂಬ ಭಾವ ಮೂಡುತ್ತದೆ.

English summary
Watch Kannada Rajyotsava Special Songs.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada