For Quick Alerts
  ALLOW NOTIFICATIONS  
  For Daily Alerts

  'ಹುತಾತ್ಮ ಉರಿ ಯೋಧ'ರಿಗಾಗಿ ಜನ್ಮಾಚರಣೆ ತ್ಯಜಿಸಿದ ಲತಾಜೀ

  By Suneetha
  |

  ಬಾಲಿವುಡ್ ಚಿತ್ರರಂಗದ ಮಧುರ ಗಾಯಕಿ ಲತಾ ಮಂಗೇಷ್ಕರ್ ಅವರಿಗೆ ಇಂದು (ಸೆಪ್ಟೆಂಬರ್ 28) 87ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಆದ್ರೆ ಎವರ್ ಗ್ರೀನ್ ಗಾಯಕಿ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲವಂತೆ. ಕಾರಣ 'ಉರಿ ಅಟ್ಯಾಕ್'ನಲ್ಲಿ ಜೀವ ತೆತ್ತ 18 ಯೋಧರು.

  ಅವರ ಆತ್ಮಕ್ಕೆ ಶಾಂತಿ ಕೋರಿರುವ ಮಧುರ ಗಾಯಕಿ ಲತಾ ಮಂಗೇಷ್ಕರ್, ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅದ್ಭುತ ಗಾಯಕಿ ಲತಾಜೀ ಅವರು, ನಮ್ಮ ದೇಶಕ್ಕಾಗಿ ಹೋರಾಡುತ್ತಿರುವ ಯೋಧರಿಗಾಗಿ ಹಾಡಿದ 'ಯೇ ಮೇರೆ ವತನ್ ಕೀ ಲೋಗೋನ್' ಹಾಡನ್ನು, ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾವು ಸ್ಮರಿಸಬಹುದು.

  ಅಂದಹಾಗೆ ಸಂಗೀತ ಲೋಕದಲ್ಲಿ ಹೊಸ ಇತಿಹಾಸ ಬರೆದಿರುವ ಗಾಯಕಿ ಲತಾ ಮಂಗೇಷ್ಕರ್ ಅವರು, ನಮ್ಮ ಕನ್ನಡದಲ್ಲಿ ಒಂದೇ ಹಾಡನ್ನು ಹಾಡಿದ್ದಾದರೂ, ಅದು ಭಾರಿ ಖ್ಯಾತಿ ಗಳಿಸಿದ್ದು ಮಾತ್ರ ನಿಜ.[ನನಗಿನ್ನೂ 18 ವರ್ಷ: ಲತಾ ಮಂಗೇಶ್ಕರ್]

  1967ರ 'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಚಿತ್ರದ 'ಬೆಳ್ಳನೆ ಬೆಳಗಾಯಿತು' ಎಂಬ ಏಕೈಕ ಮಧುರ ಗೀತೆ ಈಗಲೂ ಕೆಲವರ ಮೊಬೈಲ್ ನಲ್ಲಿ ರಿಂಗ್ ಟೋನ್ ಆದ್ರೆ, ಇನ್ನೂ ಕೆಲವರಿಗೆ ಬೆಳಗಿನ ಜಾವ ಮಧುರವಾದ ಆಲಾಪನಾ ಆಲರಾಂ ಆಗಿದೆ.

  ಯಾವುದೇ ಅಬ್ಬರ-ಆಡಂಬರ ಇಲ್ಲದೆ ಸೈಲೆಂಟ್ ಆಗಿರುವ 'ಬೆಳ್ಳನೆ ಬೆಳಗಾಯಿತು' ಎಂಬ ಹಾಡಿನಲ್ಲಿರುವ, ಲತಾಜೀ ಅವರ ಧ್ವನಿಗೆ ಯಾರೂ ಸರಿ ಸಾಟಿ ಇಲ್ಲ. ಇಂದು ಆ ಲೆಜೆಂಡರಿ ಗಾಯಕಿಯ ಜನ್ಮ ದಿನದ ನೆನಪಿನಲ್ಲಾದರೂ 'ಬೆಳ್ಳನೆ ಬೆಳಗಾಯಿತು' ಹಾಡನ್ನು ನಾವೆಲ್ಲಾ ಕೇಳಲೇಬೇಕು.[ಟ್ವಿಟ್ಟರ್ ಹಕ್ಕಿಯ ಹಿಂದೆ ಹಾಡು ಹಕ್ಕಿ ಲತಾ ಮಂಗೇಷ್ಕರ್]

  Lata Mangeshkar Celebrates Her 87th Birthday Today

  ಇದೀಗ ಲತಾಜೀ ಅವರು ಹಾಡಿರುವ ಕನ್ನಡದ ಏಕೈಕ ಹಾಡು 'ಬೆಳ್ಳನೆ ಬೆಳಗಾಯಿತು' ನಿಮಗಾಗಿ, ನಿಮ್ಮ ಫಿಲ್ಮಿಬೀಟ್ ಕನ್ನಡ ಹೊತ್ತು ತಂದಿದೆ. ಲತಾ ಮಂಗೇಷ್ಕರ್ ಅವರಿಗೆ 87ನೇ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ, ಈ ಸುಮಧುರ ಹಾಡನ್ನು ಒಂದ್ಸಾರಿ ಆಲಿಸಿ ಬಿಡಿ......[ಲತಾ ಮಂಗೇಷ್ಕರ್ ಜೊತೆ ಹಜಾರಿಕಾಗೆ ಅಫೇರ್!]

  English summary
  Melody queen Lata Mangeshkar won’t celebrate her 87th birthday today (Wednesday, September 28). The September 18 terror attack left 18 Indian soldiers dead at Uri in Jammu and Kashmir. So, this year Lata Mangeshkar won’t celebrate her birthday. Here is the song sung by Lata Mangeshkar in Kannada, the one and only song. 'Bellane Balagayitu' song from 'Krantiveera Sangolli Rayanna'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X