For Quick Alerts
  ALLOW NOTIFICATIONS  
  For Daily Alerts

  ಕದ್ದ ಟ್ಯೂನ್ ಎಂಬ ಅಪಖ್ಯಾತಿ ಪಡೆದ ಸೂಪರ್ ಹಿಟ್ ಹಾಡುಗಳಿವು

  |

  ಕೆಲವು ಹಾಡುಗಳನ್ನು ಕೇಳಿದಾಗ ಹಿಂದೆಯೇ ಎಲ್ಲೋ ಕೇಳಿದ ಹಾಗೆ ಅನಿಸುತ್ತದೆ. ಈ ಹಾಡು ಆ ಹಾಡಿದ ರೀತಿಯೇ ಇದೆಯಲ್ಲ ಎನ್ನುವ ಅನುಮಾನ ಬರುತ್ತದೆ. ಕದ್ದಿರುವುದೋ.. ಸ್ಫೂರ್ತಿಯಿಂದ ಮಾಡಿದ್ದೋ ಕನ್ನಡದ ಕೆಲವು ಹಾಡುಗಳು ಯಾವುದೋ ಭಾಷೆಯ ಯಾವುದೋ ಹಾಡುಗಳ ಕಾಪಿ ಎನಿಸಿಕೊಂಡು ಬಿಟ್ಟಿದೆ.

  ಕನ್ನಡದ ಅನೇಕ ಸೂಪರ್ ಹಾಡುಗಳು ಬೇರೆ ಬೇರೆ ಭಾಷೆಯ ಹಾಡುಗಳ ಟ್ಯೂನ್ ಗಳಿಗೆ ಹೋಲಿಕೆ ಆಗುತ್ತಿದೆ. ಅರ್ಜುನ್ ಜನ್ಯ, ಗುರುಕಿರಣ್, ವಿ ಹರಿಕೃಷ್ಣ ಅವರ ಕೆರಿಯರ್ ನ ಸೂಪರ್ ಹಿಟ್ ಹಾಡುಗಳು ಈ ಪಟ್ಟಿಯಲ್ಲಿ ಇವೆ. ಹಂಸಲೇಖ ಅವರ 'ಪ್ರೇಮಲೋಕ'ದ ಒಂದು ಹಾಡು ಕೂಡ ಬೇರೊಂದು ಹಾಡಿನ ಮಾದರಿಯಲ್ಲಿದೆ.

  Interview: 'ಮಾಯಾ ಬಜಾರ್' ಮೋಡಿಗಾರನ ಸಂಗೀತಮಯ ಪಯಣInterview: 'ಮಾಯಾ ಬಜಾರ್' ಮೋಡಿಗಾರನ ಸಂಗೀತಮಯ ಪಯಣ

  ಯಾವುದೋ ಒತ್ತಡವೋ.. ಅಥವಾ ಅನಿವಾರ್ಯತೆಯೋ.. ಕನ್ನಡದ ಖ್ಯಾತ ಸಂಗೀತ ನಿರ್ದೇಶಕರ ಕೆಲವು ಹಾಡುಗಳು ಬೇರೊಂದು ಹಾಡಿನ ನಕಲಿ ಎನ್ನುವಂತಿದೆ. ಅಂದಹಾಗೆ, ಅಂತಹ ಕೆಲವೊಂದು ಹಾಡಿನ ಉದಾಹರಣೆ ಇಲ್ಲಿದೆ...

  ಕಣ್ಣ ಮುಚ್ಚೆ ಗಾಡೆ ಗೂಡೆ..

  ಕಣ್ಣ ಮುಚ್ಚೆ ಗಾಡೆ ಗೂಡೆ..

  'ರಾಂಬೋ' ಸಿನಿಮಾದ 'ಕಣ್ಣ ಮುಚ್ಚೆ ಗಾಡೆ ಗೂಡೆ' ಹಾಡು ಮರಾಠಿಯ ಹಾಡಿದ ಟ್ಯೂನ್ ಹೊಂದಿದೆ. 'ನಟರಾಂಗ್' ಎಂಬ ಸಿನಿಮಾದ 'ಕೇಲ ಮಾಂಡಲ..' ಎಂಬ ಹಾಡಿ ಟ್ಯೂನ್ ಅನ್ನೇ ಈ ಹಾಡಿನಲ್ಲಿಯೂ ಬಳಸಲಾಗಿದೆ. ಅರ್ಜುನ್ ಜನ್ಯ 'ರಾಂಬೋ' ಸಿನಿಮಾದ ಸಂಗೀತ ನಿರ್ದೇಶಕರಾಗಿದ್ದಾರೆ. ಮರಾಠಿಯಲ್ಲಿ ಈ ಹಾಡಿಗೆ ಅಜಯ್ ಅತುಲ್ ಸಂಗೀತ ನೀಡಿದ್ದರು.

  'ಪೊಗರು' ಚಿತ್ರದ 'ಖರಾಬು...' ಹಾಡಿನ ಸಂಗೀತ ಒರಿಜಿನಲ್ ಅಲ್ಲವೇ?'ಪೊಗರು' ಚಿತ್ರದ 'ಖರಾಬು...' ಹಾಡಿನ ಸಂಗೀತ ಒರಿಜಿನಲ್ ಅಲ್ಲವೇ?

  ಉಸಿರೇ.. ಉಸಿರೇ..

  ಉಸಿರೇ.. ಉಸಿರೇ..

  'ಉಸಿರೇ.. ಉಸಿರೇ...' ಎಂಬ ಹಾಡು ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾದಲ್ಲಿ ಇದೆ. ಈ ಹಾಡು ದೊಡ್ಡ ಹಿಟ್ ಆಗಿದೆ. ಆದರೆ, ಈ ಹಾಡಿನಲ್ಲಿರುವ ಟ್ಯೂನ್ ಬೇರೊಂದು ಹಾಡಿಗೆ ಹೋಲಿಕೆ ಆಗುತ್ತಿದೆ. 'ಟೇಕ್ ಮಿ ಅವೇ..' ಎಂಬ ಇಂಗ್ಲೀಷ್ ಹಾಡಿನ ಟ್ಯೂನ್ ರೀತಿಯೇ 'ಉಸಿರೇ.. ಉಸಿರೇ...' ಹಾಡು ಇದೆ. ಈ ಹಾಡಿನ ಸಂಗೀತ ನಿರ್ದೇಶಕರು ಕೂಡ ಅರ್ಜುನ್ ಜನ್ಯ.

  ಮನ ಮುಟ್ಟುವ 'ರುದ್ರಿ' ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನಮನ ಮುಟ್ಟುವ 'ರುದ್ರಿ' ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನ

  ನೀರಿಗೆ ಬಾರೇ ಚೆನ್ನಿ..

  ನೀರಿಗೆ ಬಾರೇ ಚೆನ್ನಿ..

  'ನೀರಿಗೆ ಬಾರೆ ಚೆನ್ನಿ..' ಎಂಬ 'ಜರಾಸಂಧ' ಸಿನಿಮಾದ ಹಾಡು ಸೂಪರ್ ಹಿಟ್ ಆಗಿದೆ. ಜನಪದ ಶೈಲಿಯಲ್ಲಿ ಇರುವ ಈ ಹಾಡು ಗ್ರಾಮೀಣ ಭಾಗದಲ್ಲಿಯೂ ತುಂಬ ಫೇಮಸ್ ಆಗಿದೆ. ಆದರೆ, ಈ ಹಾಡು 'Mata Aloke' ಎಂಬ ಹಾಡಿನ ಶೈಲಿಯಲ್ಲಿ ಇದೆ. 'ಜರಾಸಂಧ' ಸಿನಿಮಾ ಸಹ ಅರ್ಜುನ್ ಜನ್ಯ ಸಂಗೀತ ಹೊಂದಿದೆ.

  'ಪೊಗರು' ಸಂಗೀತದ ಕುರಿತಾದ ಆರೋಪಕ್ಕೆ ನಿರ್ದೇಶಕ ನಂದಕಿಶೋರ್ ನೀಡಿದ ಉತ್ತರ'ಪೊಗರು' ಸಂಗೀತದ ಕುರಿತಾದ ಆರೋಪಕ್ಕೆ ನಿರ್ದೇಶಕ ನಂದಕಿಶೋರ್ ನೀಡಿದ ಉತ್ತರ

  ಕಮಾನ್ ಕಮಾನ್ ಡೈರೆಕ್ಟರ್..

  ಕಮಾನ್ ಕಮಾನ್ ಡೈರೆಕ್ಟರ್..

  'ಸೂಪರ್' ಸಿನಿಮಾದ 'ಕಮಾನ್ ಕಮಾನ್ ಡೈರೆಕ್ಟರ್..' ಹಾಡು ಕಾಫಿ ಮಾಡಿದ್ದಾರೆಯೇ ಎನ್ನುವ ಅನುಮಾನ ಮೂಡಿಸುತ್ತದೆ. ಕಾರಣ ಈ ಹಾಡು 'ಮಿಸಿರಲೌ' ಎಂಬ ಹಾಡಿನ ಹಾಡಿನ ರೀತಿಯೇ ಇದೆ. 1963ರಲ್ಲಿ ಈ ಹಾಡು ಬಂದಿದ್ದು, ಡಿಕ್ ದಲೆ ಸಂಗೀತ ಇದಾಗಿದೆ. 'ಸೂಪರ್' ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಸಿನಿಮಾ.

  ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ ಚಂದು-ಗೊಂಬೆಯ 'ಗೆಟ್ ಹೈ' ಮ್ಯೂಸಿಕ್ ವಿಡಿಯೋ.!ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ ಚಂದು-ಗೊಂಬೆಯ 'ಗೆಟ್ ಹೈ' ಮ್ಯೂಸಿಕ್ ವಿಡಿಯೋ.!

  ಆಕಾಶ ಇಷ್ಟೇ ಯಾಕಿದೆಯೋ..

  ಆಕಾಶ ಇಷ್ಟೇ ಯಾಕಿದೆಯೋ..

  'ಆಕಾಶ ಇಷ್ಟೇ ಯಾಕಿದೆಯೋ..' 'ಗಾಳಿಪಟ' ಸಿನಿಮಾದ ಹಾಡು. ವಿ ಹರಿಕೃಷ್ಣ ಈ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್. ಆದರೆ, ಈ ಹಾಡು 'ಡ್ಯಾನ್ಸ್ ವಿತ್ ದಿ ವುಲ್ಫ್' ಎಂಬ ಹಾಡಿನ ಟ್ಯೂನ್ ಗೆ ಹೋಲಿಕೆ ಆಗುತ್ತಿದೆ. ಎರಡು ಹಾಡನ್ನು ಕೇಳಿದ್ರೆ ಸೇಮ್ ಟಿ ಸೇಮ್ ಇದೆ. ಅಂದಹಾಗೆ, ಇದು 2004 ರಲ್ಲಿ ಬಂದ ಅಮೇರಿಕಾನ್ ಹಾಡು.

  ಊರಿಗೊಬ್ಬಳೆ ಪದ್ಮಾವತಿ..

  ಊರಿಗೊಬ್ಬಳೆ ಪದ್ಮಾವತಿ..

  'ಊರಿಗೊಬ್ಬಳೆ ಪದ್ಮಾವತಿ..' ರಮ್ಯಾ ಕೆರಿಯರ್ ನ ಸೂಪರ್ ಹಿಟ್ ಹಾಡು. ಈ ಹಾಡನ್ನು ನೀಡಿದ್ದು, ವಿ ಹರಿಕೃಷ್ಣ. ಈ ಹಾಡು 'ಜಾನಿ ಮೇರಾ ನಾಮ್' ಸಿನಿಮಾದಾಗಿದೆ. ಈ ಹಾಡು ಅರೇಬಿಯಾನ್ ಹಾಡಿನ ಟ್ಯೂನ್ ರೀತಿಯೇ ಇದೆ. 'ಐವಾ ಐವಾ..' ಎಂಬ ಹಾಡಿನ ಕಾಪಿ ಎನ್ನುವುದು ಹಾಡು ಕೇಳಿದ ತಕ್ಷಣ ತಿಳಿದುಬಿಡುತ್ತದೆ.

  ನಾನು ಒತ್ತಾರೆ ಎದ್ಬಿಟ್ಟು..

  ನಾನು ಒತ್ತಾರೆ ಎದ್ಬಿಟ್ಟು..

  'ರಿಷಿ' ಚಿತ್ರದ 'ನಾನು ಒತ್ತಾರೆ ಎದ್ಬಿಟ್ಟು.. ಹಾಡನ್ನು ಖ್ಯಾತ ಗಾಯಕ ರಾಜು ಅನಂತಸ್ವಾಮಿ ಹಾಡಿದ್ದರು. ಇಂತಹ ಹಾಡು ಕೂಡ ಕಾಪಿ. 'ದಿ ಗೋಸ್ಟ್ ಅಂಡ್ ದಿ ಡಾರ್ಕ್ ನೆಸ್' ಎಂಬ ಹಾಡಿನ ಮ್ಯೂಸಿಕ್ ಇಲ್ಲಿದೆ. 'ರಿಷಿ' ಸಿನಿಮಾಗೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶೇಖರ್ ರಾಜ ಸಂಗೀತ ನೀಡಿದ್ದರು.

  'ಪ್ರೇಮಲೋಕ'ದ ಹಾಡು

  'ಪ್ರೇಮಲೋಕ'ದ ಹಾಡು

  ಟ್ಯೂನ್ ಕದ್ದ ಆರೋಪ ಹಂಸಲೇಖ ಅವರನ್ನು ಬಿಟ್ಟಿಲ್ಲ. 'ಪ್ರೇಮಲೋಕದಿಂದ ಬಂದ..' ಎಂಬ ಹಾಡು 'ಪ್ರೇಮ ಲೋಕ' ಚಿತ್ರದ ಬೆಸ್ಟ್ ಹಾಡುಗಳಲ್ಲಿ ಒಂದು. ಈ ಹಾಡು 'ಇನ್ ದಿ ಶಾಡೋ..' ಎಂಬ ಹಾಡಿಗೆ ಹೋಲಿಕೆ ಆಗುತ್ತದೆ. ಇದೊಂದು ಚೀನಿ ಹಾಡಾಗಿದ್ದು, 1963ರಲ್ಲಿಯೇ ಈ ಹಾಡು ಬಂದಿತ್ತು.

  ಡಾಕ್ಟರ್ ಸತ್ಯ..

  ಡಾಕ್ಟರ್ ಸತ್ಯ..

  'ಸತ್ಯವಾನ್ ಸಾವಿತ್ರಿ' ಸಿನಿಮಾದ 'ಡಾಕ್ಟರ್ ಸತ್ಯ..' ಹಾಡು ಸಖತ್ ಫೇಮಸ್. ಗುರುಕಿರಣ್ ಈ ಹಾಡಿಗೆ ಸಂಗೀತ ನೀಡಿ ತಾವೇ ಹಾಡಿದ್ದಾರೆ. ಆದರೆ, ಈ ಹಾಡು 'ಓ ಮೈ ಡಾರ್ಲಿಂಗ್..' ಎಂಬ ಇಂಗ್ಲೀಷ್ ಹಾಡಿನ ಮಾದರಿಯಲ್ಲಿದೆ. ಈ ಹಾಡು ಮಾತ್ರವಲ್ಲದೆ, ಗುರುಕಿರಣ್ ಅವರ ಇನ್ನು ಕೆಲವು ಬೇರೆ ಬೇರೆ ಹಾಡುಗಳಿಗೆ ಹೋಲಿಕೆ ಮಾಡಬಹುದು.

  'ಗಣಪ' ಹಾಡು

  'ಗಣಪ' ಹಾಡು

  'ಗಣಪ' ಸಿನಿಮಾದ ಒಂದು ಹಾಡು ನಕಲಿ ಎನ್ನುವ ಅಪವಾದ ಪಡೆದಿದೆ. 'ಮುದ್ದಾಗಿ ನೀನು ನನ್ನ ಕೂಗಿದೆ...' ಹಾಡು, Law Bass Fe Eyne ಎಂಬ ಹಾಡಿಗೆ ಮಾದರಿಯಲ್ಲಿಯೇ ಇದೆ. ಕರಣ್ ಬಿ ಕೃಪ ಈ ಹಾಡನ್ನು ಅಲ್ಲಿಂದ ಯಗರಿಸಿದ್ದಾರೆ. ಒಂದಲ್ಲ ಎರಡಲ್ಲ.. ಈ ರೀತಿ ಹುಡುಕುತ್ತಾ ಹೋದರೆ, ಅನೇಕ ಹಾಡುಗಳು ಬೇರೊಂದು ಹಾಡಿನ ರೀತಿಯೇ ಇರುವುದು ಕಂಡು ಬರುತ್ತದೆ.

  English summary
  List of popular kannada songs which is copied.
  Friday, June 5, 2020, 12:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X