»   » 'ಪರವಶನಾದೆನು…’ ಧಾಟಿಯಲ್ಲಿ ಬಿಎಸ್ವೈ ಕರವಶನಾದೆನು!

'ಪರವಶನಾದೆನು…’ ಧಾಟಿಯಲ್ಲಿ ಬಿಎಸ್ವೈ ಕರವಶನಾದೆನು!

By: * ವಿಜಯರಾಜ್ ಕನ್ನಂತ
Subscribe to Filmibeat Kannada
Paramathma Kannada movie Song Lyrics
ಬಿ.ಜೆ.ಪಿ. ಯಿಂದ ಗುಳೆ ಹೊಂಟು ಹೋಗಿ,ಕೆ.ಜೆ.ಪಿ ಪಕ್ಷ ಕಟ್ಟಿ, 'ನಿಮ್-ಹಿಂದೆ' ನಾವಿದೀವಿ... ಅಂದೋರೆಲ್ಲಾ 'ಬೆನ್-ಹಿಂದೆ' ಚೂರಿ ಹಾಕಿ, ಕೈ ಕೊಡ್ತಾ ಇರೋದು ನೋಡಿ 'ಮಿಲನ' 'ಚಿತ್ರದ ಮಳೆ ನಿಂತು ಹೋದ ಮೇಲೆ...' ಹಾಡು ಯಡಿಯೂರಪ್ಪ ಬಾಯಲ್ಲಿ ಹಾಡಿದರೆ ಹೇಗಿರುತ್ತದೆ ಎಂಬ ಕಲ್ಪನೆಯಲ್ಲಿ ವಿಜಯರಾಜ್ ಕನ್ನಂತ್ ಅವರು ಕೆಳಗಿನ ಸಾಲುಗಳನ್ನು ಹೊಸೆದಿದ್ದರು.

ಗುಳೆ ಹೊಂಟು... ಹೋದ ಮೇಲೆ ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ ನನಗೇನು... ಕಾದಿದೆ?
ಮಾಡುವುದು... ಏನು ಉಳಿದುಹೋಗಿದೆ?...ಪೂರ್ಣ ಸಾಹಿತ್ಯ ಇಲ್ಲಿ ಓದಿ

ಈಗ ಮತ್ತೊಮ್ಮೆ ಯಡಿಯೂರಪ್ಪ ಅವರನ್ನು ಬಿಜೆಪಿ ಕರೆ ತರುವ ಪ್ರಯತ್ನಗಳು ನಡೆದಿದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನಸ್ಥಿತಿ ಹೇಗಿದೆ.. ಅವರ ಮನಸ್ಸಲ್ಲಿ ಯಾವ ರಾಗ ಗುನುಗುತ್ತಿರಬಹುದು ಎಂಬ ಊಹೆ ಮೇರೆಗೆ ಈ ಅಣಕು ಸಾಹಿತ್ಯ ರಚಿಸಲಾಗಿದೆ. ಇದು ತಮಾಷೆಗೆ ಮಾತ್ರ, ಯಾವುದೇ ವ್ಯಕ್ತಿಯ ನಿಂದನೆಗಾಗಿ ಅಲ್ಲ.

ಪರವಶನಾದೆನು...' ಧಾಟಿಯಲ್ಲಿ 'ಯಡ್ಡಿಮಾತ್ಮ'ನ ಅಣಕ 'ಕರವಶನಾದೆನು... ಚುನಾವಣೆ ಮುನ್ನವೇ

ಕರವಶನಾದೆನು... ಚುನಾವಣೆ ಮುನ್ನವೇ
ಭಾಜಪವ-ಸೇರಲೀ ಹೇಗೆ... ಕರೆಯದೆ ನನ್ನನೇ
ಬಿಡೋಕಿಂತ ಮುಂಚೆ ನನ್ನಾ... ತಡಿಬಾರದಿತ್ತೆ ನೀವು
ಹಿಂದಾದುದಾ... ಮರೆತ್ಬಿಟ್ಟು ಬಾ... ಒಂದಾಗುವಾ
ಲೋಕಸಭೆ ವಿನ್ನಿಗೆ
ಕರವಶನಾದೆನು... ಚುನಾವಣೆ ಮುನ್ನವೇ
ಭಾಜಪವ-ಸೇರಲೀ ಹೇಗೆ... ಕರೆಯದೆ ನನ್ನನೇ
ಕಾಂಗೈ ಪಾಲಿಗಂತೂ ನಾನು... ನಿರುಪಯೋಗಿಯಾದೆನು
ಇನ್ನು ನಾವು ಸೇರಬೇಕು... ಜಂಟಿಯಾಗಿ ಸಾಗಲು
ಹೂ...ಅರಳಿಸೋ ಶಕ್ತಿಯ
ಲೋಕ-ಸಭೆಯಲಿ ತುಂಬಬಲ್ಲೆ
ನನ್ನಾ...ಬಂಡಾಯವನ್ನು
ಮರ್ತುಬಿಡಿ ನಾವೀಗ... ಫ್ರೆಂ...ಡ್ಸ...ಲ್ವೇ
ಯಾರೇನೇ ಅಂದರೂನೂ... ನನಗಿಲ್ಲ ಚಿಂತೆ ಏನೂ
ಪಾರ್ಟಿಯಲ್ಲಿಯ... ಬಿಕ್ಕಟ್ಟನು... ಬದಿಗಿಟ್ಟರೇ
ಗೆಲುವದು ನಮ್ಮದೇ
ಕರವಶನಾದೆನು... ಚುನಾವಣೆ ಮುನ್ನವೇ
ಭಾಜಪವ-ಸೇರಲೀ ಹೇಗೆ... ಕರೆಯದೆ ನನ್ನನೇ
ಕಾಂಗೈಯನು ನಂಬಿ ಕೆಟ್ಟಿರುವೆನು... ನಿಮ್ಮಾತ ಕೇಳದೇ
ಪಕ್ಷವು ಸೋಲು ಕಂಡಿರಲು ಈ... ನಿರ್ಧಾರವು ಮೂಡಿದೆ
ನನ್ನಾ ಮಾತನೇ... ಇನ್ಮುಂದೆ ಕೇಳಬೇಕು
ಸೇರಿಸಿ ಬೇಗಾ.... ಫೈಟು ನಿಲ್ಸೋಣ ಸಾಕು
ಸಹವಾಸ ದೋಷದಿಂದ.... ಮನೆ ತೊರೆದು ಹೋದೆ ನಾನು
ನನಗಾಗಿಯೇ... ಕಾದಿಟ್ಟಿರಿ... ಸೀಟೊಂದನು
ಮರಳುವೆ ಗೂಡಿಗೆ
ಕರವಶನಾದೆನು... ಚುನಾವಣೆ ಮುನ್ನವೇ
ಭಾಜಪವ-ಸೇರಲೀ ಹೇಗೆ... ಕರೆಯದೆ ನನ್ನನೇ

ಮೂಲ ಹಾಡು: 'ಪರಮಾತ್ಮ' ಚಿತ್ರದ 'ಪರವಶನಾದೆನು... ಅರಿಯುವ ಮುನ್ನವೇ'

ಪರವಶನಾದೆನು... ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ... ಪ್ರಣಯಕು ಮುನ್ನವೇ
ಇದಕಿಂತ ಬೇಗ ಇನ್ನೂ... ಸಿಗಬಾರದಿತ್ತೆ ನೀನು
ಇನ್ನಾದರೂ... ಕೂಡಿಟ್ಟುಕೊ... ನೀ ನನ್ನನು
ಕಳೆಯುವ ಮುನ್ನವೇ
ಪರವಶನಾದೆನು... ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ... ಪ್ರಣಯಕು ಮುನ್ನವೇ
ನಿನ್ನ ಕಣ್ಣಿಗಂತು ನಾನು... ನಿರುಪಯೋಗಿ ಈಗಲೂ
ಇನ್ನು ಬೇರೆ ಏನು ಬೇಕು... ಪ್ರೇಮಯೋಗಿಯಾಗಲು
ಹೂ... ಅರಳುವ ಸದ್ದನು
ನಿನ್ನ ನಗೆಯಲಿ... ಕೇಳಬಲ್ಲೆ
ನನ್ನ... ಏಕಾಂತವನ್ನು
ತಿದ್ದಿಕೊಡು ನೀನೀಗ... ನಿಂ... ತ... ಲ್ಲೆ
ನಾನೇನೇ ಅಂದರೂನೂ... ನನಗಿಂತ ಚೂಟಿ ನೀನು
ತುಟಿಯಲ್ಲಿಯೇ... ಮುಚ್ಚಿಟ್ಟುಕೊ... ಮುತ್ತೊಂದನೂ
ಕದಿಯುವ ಮುನ್ನವೇ
ಪರವಶನಾದೆನು... ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ... ಪ್ರಣಯಕು ಮುನ್ನವೇ
ಕನಸಲಿ ತುಂಬ ಕೆಟ್ಟಿರುವೆನು... ನಿನ್ನನು ಕೇಳದೇ
ರೆಕ್ಕೆಯ ನೀನೆ ಕಟ್ಟಿರಲು ಈ... ಹೃದಯವು ಹಾರಿದೆ
ನನ್ನಾ ಕೌತುಕ... ಒಂದೊಂದೆ ಹೇಳಬೇಕು
ಆಲಿಸುವಾಗ... ನೋಡು ನನ್ನನ್ನೆ ಸಾಕು
ಸಹವಾಸ ದೋಷದಿಂದ... ಸರಿಹೋಗಬಹುದೆ ನಾನು
ನನಗಾಗಿಯೇ... ಕಾದಿಟ್ಟುಕೊ... ಹಟವೊಂದನೂ
ಕೆಣಕುವ ಮುನ್ನವೇ
ಪರವಶನಾದೆನು...ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ...ಪ್ರಣಯಕು ಮುನ್ನವೇ....

English summary
Paramathma Kannada movie song 'Paravashanadenu..' in political satire style by Vijayaraj Kannantha. Former CM Yeddyurappa is in dilemma whether to come back to BJP or stay back and develop KJP with Congress support the above song suites BSY's current situation
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada