»   » ಯಡಿಯೂರಪ್ಪ ಸಿಂಗ್ಸ್ 'ಮಳೆ ನಿಂತು ಹೋದ ಮೇಲೆ..'

ಯಡಿಯೂರಪ್ಪ ಸಿಂಗ್ಸ್ 'ಮಳೆ ನಿಂತು ಹೋದ ಮೇಲೆ..'

Posted By:
Subscribe to Filmibeat Kannada
Milana movie Male nintu hoda mele song satire
ಅಂದರ್ ಬಹಾರ್ ಚಿತ್ರದ ನಾಯಕಿ ಕನ್ನಡ ಚಿತ್ರರಂಗದ ಪಾಲಿಗೆ ಮನೆಮಗಳಾಗಿರುವ ಪಾರ್ವತಿ ಮೆನನ್ ಗೆ ಇಂದಿಗೂ ಮಿಲನ ಚಿತ್ರದ ಆ ಹಾಡು ಕಾಡುತ್ತಿದೆಯಂತೆ. ಸಾಹಿತ್ಯ ಬರೆದ ಜಯಂತ್ ಕಾಯ್ಕಿಣಿ ಅವರನ್ನು ಹೊಗಳುವುದನ್ನು ಎಲ್ಲಿಯೂ ತಪ್ಪಿಸಿಕೊಳ್ಳುವುದಿಲ್ಲ. 'ಮಿಲನ' 'ಚಿತ್ರದ ಮಳೆ ನಿಂತು ಹೋದ ಮೇಲೆ...' ಹಾಡೆಂದರೆ ಹಾಗೆ ಎಲ್ಲರನ್ನು ಕಾಡುತ್ತದೆ.

ಈಗ ಅದೇ ಹಾಡು ಬಿ.ಜೆ.ಪಿ. ಯಿಂದ ಗುಳೆ ಹೊಂಟು ಹೋಗಿ... ಕೆ.ಜೆ.ಪಿ ಪಕ್ಷ ಕಟ್ಟಿ... 'ನಿಮ್-ಹಿಂದೆ' ನಾವಿದೀವಿ... ಅಂದೋರೆಲ್ಲಾ 'ಬೆನ್-ಹಿಂದೆ' ಚೂರಿ ಹಾಕಿ, ಕೈ ಕೊಡ್ತಾ ಇರೋದು ನೋಡಿ 'ಮಿಲನ' 'ಚಿತ್ರದ ಮಳೆ ನಿಂತು ಹೋದ ಮೇಲೆ...' ಹಾಡು ಯಡಿಯೂರಪ್ಪ ಬಾಯಲ್ಲಿ ಹಾಡಿದರೆ ಹೇಗಿರುತ್ತದೆ ಎಂಬ ಕಲ್ಪನೆಯಲ್ಲಿ ವಿಜಯರಾಜ್ ಕನ್ನಂತ್ ಅವರು ಕೆಳಗಿನ ಸಾಲುಗಳನ್ನು ಹೊಸೆದಿದ್ದಾರೆ. ಓದಿ ಆನಂದಿಸಿ

ಗುಳೆ ಹೊಂಟು... ಹೋದ ಮೇಲೆ
ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ
ನನಗೇನು... ಕಾದಿದೆ?
ಮಾಡುವುದು... ಏನು ಉಳಿದುಹೋಗಿದೆ?
ಸಾಯಲಿ... ಏನು ತಿಳಿಯದಾಗಿದೆ
ಗುಳೆ ಹೊಂಟು... ಹೋದ ಮೇಲೆ
ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ
ನನಗೇನು... ಕಾದಿದೆ?
ಹಾವೇರೀಲಿ... ಆಣೆ ಮಾಡಿ... ಬರುವೆ ಅಂದೋರ
ನಿಲುವು ಬೇರೆ ಆಯಿತೇ... ಯಾಕೆ ನಂತರ
ನಮ್ಮ ಪಾರ್ಟಿಯಲ್ಲಿ ಇಂದು... ಸೇರುವ ಕಾತರ
ಒಂದೇ ಸಾರಿ ನೀವ್... ತೋರಿರಿ ಕನಿಕರ
ಬಿಜೆಪಿಯ ನಾಶ... ಮಾಡ ಬೇಕಿದೆ
ಮಾಡಲಿ... ಹೇಗೆ ತಿಳಿಯದಾಗಿದೆ
ಗುಳೆ ಹೊಂಟು... ಹೋದ ಮೇಲೆ
ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ
ನನಗೇನು... ಕಾದಿದೆ?
ಇನ್ನು ತಡವ ಮಾಡದೆ... ಪಾರ್ಟಿಯ ಸೇರ್ರಣ್ಣ
ನಿಮ್ಮ ಹಟವ ತೋರದೆ... ಮನಸು ಮಾಡ್ರಣ್ಣ
ಗಡುವು ದೂರವೇನಿಲ್ಲ... ಹತ್ತಿರ ಬಂತಣ್ಣ
ನೀವು ಬಾರದೆ... ಏತಕೋ ತಲ್ಲಣ
ಭರವಸೆ ಎಲ್ಲಾ... ಕಳೆದು ಹೋಗಿದೆ
ಎಲೆಕ್ಷನು ಸೋಲು... ಖಾತ್ರಿಯಾಗಿದೆ
ಗುಳೆ ಹೊಂಟು... ಹೋದ ಮೇಲೆ
ಅಳುಕೊಂದು ಮೂಡಿದೆ
ವೋಟೆಲ್ಲಾ ಮುಗಿದಾ ಮೇಲೆ
ನನಗೇನು... ಕಾದಿದೆ?
ಮಾಡುವುದು... ಏನು ಉಳಿದುಹೋಗಿದೆ?
ಸಾಯಲಿ... ಏನು ತಿಳಿಯದಾಗಿದೆ

ಮೂಲ ಹಾಡು :
ಮಳೆ ನಿಂತು ಹೋದ ಮೇಲೆ
ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದಾ ಮೇಲೆ
ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದುಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ
ನೋವಿನಲ್ಲಿ ಜೀವ ಜೀವ... ಅರಿತ ನಂತರ
ನಲಿವು ಬೇರೆ ಏನಿದೆ... ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೆ ಸಾರಿ ನೀ ಕೇಳೆಯ ಈ ಸ್ವರ
ಮನಸಲ್ಲಿ ಚೂರು... ಜಾಗ ಬೇಕಿದೆ
ಕೇಳಲಿ ಹೇಗೆ... ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ
ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದಾ ಮೇಲೆ
ದನಿಯೊಂದು ಕಾಡಿದೆ
ಕಣ್ಣು ತೆರೆದು ಕಾಣುವ... ಕನಸೇ ಜೀವನ
ಸಣ್ಣ ಹಠವ ಮಾಡಿದೆ... ಹೃದಯ ಈ ದಿನ
ಎದೆಯ ದೂರವಾಣಿಯ... ಕರೆಯ ರಿಂಗಣ
ಕೇಳು ಜೀವವೇ... ಏತಕೀ ಕಂಪನ
ಹೃದಯವು ಎಲ್ಲೋ ಕಳೆದುಹೋಗಿದೆ
ಹುಡುಕಲೇಬೇಕೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ
ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದಾ ಮೇಲೆ
ದನಿಯೊಂದು ಕಾಡಿದೆ

English summary
Milana Movie song 'Male nintu hoda mele in political satire style by Vijayaraj Kannantha. Many followers of Yeddyurappa ditched him by not joing Karnataka Janata Party and stayed in BJP. Imagine if Yeddyurappa sings Milana song based on his current situation
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada