»   » ಬಳ್ಳಾರಿಯಲ್ಲಿ ಪುನೀತ್ 'ಪವರ್ ಸ್ಟಾರ್' ಆಡಿಯೋ

ಬಳ್ಳಾರಿಯಲ್ಲಿ ಪುನೀತ್ 'ಪವರ್ ಸ್ಟಾರ್' ಆಡಿಯೋ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪವರ್ ಸ್ಟಾರ್' ಚಿತ್ರದ ಆಡಿಯೋ ಬಿಡುಗಡೆಗೆ ಭರ್ಜರಿ ವೇದಿಕೆ ಸಿದ್ಧವಾಗಿದೆ. ಇದೇ ಜೂನ್ 28ರಂದು ಬಳ್ಳಾರಿಯಲ್ಲಿ ಚಿತ್ರದ ಆಡಿಯೋ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಇದೇ ಮೊದಲ ಸಲ ಪುನೀತ್ ಗೆ ಜೋಡಿಯಾಗಿ ದಕ್ಷಿಣದ ಚೆಲುವೆ ತ್ರಿಷಾ ಕೃಷ್ಣನ್ ಅಭಿನಯಿಸುತ್ತಿದ್ದಾರೆ. 14 ರೀಲ್ ಎಂಟರ್ ಟೈನ್ ಮೆಂಟ್ ನಿರ್ಮಾಣದ ಈ ಬಿಗ್ ಬಜೆಟ್ ಚಿತ್ರದ ಆಡಿಯೋ ಬಗ್ಗೆ ಪ್ರೇಕ್ಷಕರಲ್ಲಿ ಸಖತ್ ಕ್ರೇಜ್ ಇದೆ. [ಪವರ್ ಸ್ಟಾರ್ ಸಿನಿಮಾ 'ಕೆಂಡಸಂಪಿಗೆ' ಶೂಟಿಂಗ್?]

Puneeth Rajkumar

ಚಿತ್ರದ ಹಾಡುಗಳು ಹೇಗೆ ಮೂಡಿಬಂದಿರುತ್ತವೋ, ಪುನೀತ್-ತ್ರಿಷಾ ಹೇಗೆಲ್ಲಾ ಸ್ಟೆಪ್ಸ್ ಹಾಕಿದ್ದಾರೋ ಎಂಬ ಕುತೂಹಲ ಇದ್ದೇ ಇದೆ. ತೆಲುಗಿನ ಯಶಸ್ವಿ ಚಿತ್ರ ದೂಕುಡು ಚಿತ್ರದ ರೀಮೇಕ್ ಇದಾಗಿದ್ದು ಕೆ ಮಹೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಸ್ಪೈನ್, ಹೈದರಾಬಾದ್, ಮುಂಬೈ, ಸಂಡೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಶ್ರೀನು ವೈಟ್ಲ ನಿರ್ದೇಶನದ 'ದೂಕುಡು' ಚಿತ್ರ ಬಾಕ್ಸ್ ಆಫೀಸಲ್ಲಿ ರು.100 ಕೋಟಿ ಗಳಿಸುವ ಮೂಲಕ ಟಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಹಳಿತಪ್ಪಿದ್ದ ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರವಿದು. ನಂದಿ ಪ್ರಶಸ್ತಿ ಸೇರಿದಂತೆ ಫಿಲಂಫೇರ್ ಪ್ರಶಸ್ತಿಗಳಿಗೆ ಚಿತ್ರ ಪಾತ್ರವಾಗಿದೆ.

ಈ ಹಿಂದೆ ಮಹೇಶ್ ಬಾಬು ಅಭಿನಯದ 'ಒಕ್ಕಡು' ಚಿತ್ರ 'ಅಜಯ್' ಆಗಿ ಕನ್ನಡಕ್ಕೆ ರೀಮೇಕ್ ಆಗಿತ್ತು. ತೆಲುಗಿನ ಮತ್ತೊಂದು ಚಿತ್ರ 'ರೆಡಿ' ಕನ್ನಡಕ್ಕೆ 'ರಾಮ್' ಆಗಿ ರೀಮೇಕ್ ಆಗಿತ್ತು. ಈಗ ದೂಕುಡು ಚಿತ್ರದ ಸರದಿ. ಅಂದಹಾಗೆ ಮೂಲ ಚಿತ್ರದಲ್ಲಿ ಸಮಂತಾ ನಾಯಕಿ.

ಐದು ಹಾಡುಗಳಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡುತ್ತಿದ್ದಾರೆ. ಕನ್ನಡದಲ್ಲಿ ಇದು ಅವರ ಪ್ರಥಮ ಚಿತ್ರ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಚಂಪಕಧಾಮ(ಬಾಬು), ಎಸ್.ಕುಮಾರ್ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ. (ಏಜೆನ್ಸೀಸ್)

English summary
The audio of power star Puneeth Rajakumar and Trisha starring 'Power' Kannada film releases on 28th of June in Bellary. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada