Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಬೇಷರಂ ರಂಗ್' ವಿವಾದದ ಬೆನ್ನಲ್ಲೇ 'ಪಠಾಣ್' ಹೊಸ ಸಾಂಗ್ ರಿಲೀಸ್: ಶಾರುಕ್- ಡಿಪ್ಪಿ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ
'ಬೇಷರಂ ರಂಗ್' ಸಾಂಗ್ ವಿವಾದ ತಣ್ಣಗಾಗುವ ಮೊದ್ಲೆ 'ಪಠಾಣ್' ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿದೆ. ವಿಶಾಲ್-ಶೇಖರ್ ಸಂಗೀತದಲ್ಲಿ 'ಜೋಮೆ ಜೊ ಪಠಾಣ್' ಸಾಂಗ್ ಸಕತ್ ಸದ್ದು ಮಾಡ್ತಿದೆ. ಶಾರುಕ್- ದೀಪಿಕಾ ಡ್ಯಾನ್ಸ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಪಠಾಣ್' ಸಿನಿಮಾ ಜನವರಿ 25ಕ್ಕೆ ತೆರೆಗೆ ಬರ್ತಿದೆ. ಚಿತ್ರದಲ್ಲಿ ಶಾರುಕ್- ದೀಪಿಕಾ ಜೊತೆಗೆ ಜಾನ್ ಅಬ್ರಹಾಂ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ಕಳೆದ 4 ವರ್ಷಗಳಿಂದ ಕಿಂಗ್ ಖಾನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಹಾಗಾಗಿ 'ಪಠಾಣ್' ಬಗ್ಗೆ ಭಾರೀ ನಿರೀಕ್ಷೆ ಇದೆ. ಅಳೆದು ತೂಗಿ ಈ ಚಿತ್ರದಲ್ಲಿ ಶಾರುಕ್ ಬಣ್ಣ ಹಚ್ಚಿದ್ದಾರೆ. ಮತ್ತೊಮ್ಮೆ ತಮ್ಮ ಜಬರ್ದಸ್ತ್ ಪರ್ಫಾರ್ಮೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ.
ಕೇಸರಿ
ಬಿಕಿನಿ
ವಿವಾದ:
ಕೇಂದ್ರ
ಸಚಿವೆ
ಸ್ಮೃತಿ
ಇರಾನಿಯ
ತುಂಡುಡುಗೆ
ವಿಡಿಯೋ
ವೈರಲ್!
ಕಳೆದ ಕೆಲ ದಿನಗಳಿಂದ 'ಪಠಾಣ್' ಸಿನಿಮಾ ಭಾರೀ ಸದ್ದು ಮಾಡ್ತಿದೆ. ಚಿತ್ರದ ಮೊದಲ ಸಾಂಗ್ 'ಬೇಷರಂ ರಂಗ್' ಬಗ್ಗೆ ಅಸಮಾಧಾನ ವ್ಯಕ್ತವಾಗ್ತಿದೆ. ಚಿತ್ರವನ್ನು ಬಾಯ್ಕಾಟ್ ಮಾಡುವುದಾಗಿ ಕೆಲವರು ಹೇಳುತ್ತಿದ್ದಾರೆ.

'ಜೋಮೆ ಜೊ ಪಠಾಣ್' ಸಾಂಗ್
ಮೆಲೋಡಿ ಟ್ರ್ಯಾಕ್ 'ಜೋಮೆ ಜೊ ಪಠಾಣ್' ರಿಲೀಸ್ ಆಗಿ ಸದ್ದು ಮಾಡುತ್ತಿದೆ. ವಿಶಾಲ್ ಹಾಗೂ ಶೇಖರ್ ಟ್ಯೂನ್, ಕುಮಾರ್ ಲಿರಿಕ್ಸ್, ಅರ್ಜಿತ್ ಸಿಂಗ್ ವಾಯ್ಸ್‌ಗೆ ಬಾಲಿವುಡ್ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಿಂಗ್ ಖಾನ್ ಅಭಿಮಾನಿಗಳಂತೂ ರಿಪೀಟ್ ಮೋಡ್‌ನಲ್ಲಿ ಪದೇ ಪದೇ ಸಾಂಗ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಲೈಕ್ಸ್, ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
"ದೀಪಿಕಾ
ಬಿಕಿನಿ
ಅಶ್ಲೀಲ
ಅಷ್ಟೇ
ಅಲ್ಲ..
ಪ್ರಚೋದನಕಾರಿ"
ಎಂದ
'ಶಕ್ತಿಮಾನ್'

ಶಾರುಕ್- ದೀಪಿಕಾ ಡ್ಯಾನ್ಸ್ ಸೂಪರ್
ಕಿಂಗ್ ಖಾನ್ ಶಾರುಕ್ ಹಾಗೂ ದೀಪಿಕಾ 4ನೇ ಬಾರಿಗೆ 'ಪಠಾಣ್' ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. 'ಓಂ ಶಾಂತಿ ಓಂ', 'ಚೆನ್ನೈ ಎಕ್ಸ್‌ಪ್ರೆಸ್' ಹಾಗೂ 'ಹ್ಯಾಪಿ ನ್ಯೂ ಇಯರ್' ಈ ಜೋಡಿ ಕೆಮೆಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸದ್ಯ ರಿಲೀಸ್ ಆಗಿರುವ 'ಜೋಮೆ ಜೊ ಪಠಾಣ್' ಸಾಂಗ್‌ನಲ್ಲಿ ಮತ್ತೊಮ್ಮೆ ಈ ಜೋಡಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮೆಲೋಡಿ ಟ್ಯೂನ್‌ಗೆ ಡಿಪ್ಪಿ ಡ್ಯಾನ್ಸ್ ಸಖತ್ತಾಗಿದೆ. ಇನ್ನು ಶಾರುಕ್ ಲುಕ್ ಹಾಗೂ ಎಕ್ಸ್‌ಪ್ರೆಷನ್ ನೋಡಿ ಫಿದಾ ಆಗಿದ್ದಾರೆ. ಅದ್ಭುತ ಲೊಕೇಶನ್‌ಗಳಲ್ಲಿ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ.

ವಿವಾದ ಸೃಷ್ಟಿಸಿದ 'ಬೇಷರಂ ರಂಗ್'
ಹೌದು ಕೆಲ ದಿನಗಳ ಹಿಂದೆ ಬಿಡುಗಡೆಯಾದ 'ಬೇಷರಂ ರಂಗ್' ಸಾಂಗ್‌ನಲ್ಲಿ ದೀಪಿಕಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ಆಕೆ ಕೇಸರಿ ಬಣ್ಣದ ಬಿಕಿನಿ ತೊಟ್ಟು ಕುಣಿದಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಕೇಸರಿ ಬಣ್ಣಕ್ಕೆ ಅವಮಾನ ಮಾಡಿದ್ದಾರೆ ಎಂದು ಗರಂ ಆಗಿದ್ದರು. ಇದೇ ಕಾರಣಕ್ಕೆ ದೀಪಿಕಾರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗ್ತಿದೆ. ಈ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಚಿತ್ರಕ್ಕೆ ಬಾಯ್ಕಾಟ್ ಭೀತಿ ಎದುರಾಗಿದೆ.

ಕುತೂಹಲ ಕೆರಳಿಸಿದ 'ಪಠಾಣ್'
ಆಕ್ಷನ್ ಎಂಟರ್‌ಟೈನರ್ 'ಪಠಾಣ್' ಭಾರೀ ನಿರೀಕ್ಷೆ ಮೂಡಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್‌ಗೆ ಈ ಸಿನಿಮಾ ಗೆಲುವಿನ ಸಿಹಿ ತಂದುಕೊಡುವ ನಿರೀಕ್ಷೆ ಇದೆ. 4 ವರ್ಷಗಳ ಹಿಂದೆ ಶಾರುಕ್ ನಟನೆಯ 'ಜೀರೊ' ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಆ ಸೋಲಿನ ಕಹಿ ಮರೆಸಲು ಇದೀಗ 'ಪಠಾಣ್' ಆಗಿ ಬರುತ್ತಿದ್ದಾರೆ. ಜನವರಿ 25ಕ್ಕೆ ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.