»   » ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲು

ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada
SPB hospitalised
ಬಹುಭಾಷಾ ಗಾಯಕ, ನಟ, ನಿರ್ಮಾಪಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಅಸ್ವಸ್ಥಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ಅವರನ್ನು ಚೆನ್ನೈನ ವಿಜಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜ್ವರದಿಂದ ಬಳಲುತ್ತಿದ್ದ ಅವರು ಸುಸ್ತಾಗಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಪರೀಕ್ಷಿಸಿರುವ ವೈದ್ಯರು ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರು ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅವರಿಗೆ ವಯಸ್ಸು ಅರುವತ್ತಾಗಿದ್ದರೂ ಅವರ ಕಂಠದಲ್ಲಿ ಇನ್ನೂ ಹರೆಯದ ಉತ್ಸಾಹ ಧುಮ್ಮಿಕ್ಕುತ್ತಿದೆ. ಅತ್ತ ಕ್ಲಾಸ್ ಇತ್ತ ಮಾಸ್ ಗೀತೆಗಳನ್ನು ಇಷ್ಟಪಡುವ ಕೇಳುಗರ ಮೆಚ್ಚಿನ ಗಾಯಕ ಎಸ್ಪಿಬಿ. ಅವರ ಕಂಠಸಿರಿಯಲ್ಲಿ ಎಂಥಹದ್ದೋ ಮಾಂತ್ರಿಕ ಶಕ್ತಿ ಅಡಗಿದೆ.

ಇದುವರೆಗೂ ಅವರು ಹಾಡಿದ ಹಾಡುಗಳು 50,000ಕ್ಕೂ ಅಧಿಕ. ಇತ್ತೀಚೆಗಿನ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಹಾಗೂ 'ಈ ಭೂಮಿ ಆ ಭಾನು' ಚಿತ್ರಗಳಲ್ಲೂ ಎಸ್ಪಿಬಿ ಹಾಡಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ. (ಏಜೆನ್ಸೀಸ್)

English summary
Veteran Singer S P Balasubramaniam has been admitted to a Vijaya hospital, Chennai after he complained of fever and exhaustion. He was admitted to hospital due to mild fever and exhaustion. He was under observation. But now he is doing fine and has been discharged soon said hospital sources.
Please Wait while comments are loading...