»   » ಕನ್ನಡಕ್ಕೆ ವಾಪಸ್ಸಾದ ಹಾಲುಂಡ ತವರು ಸಿತಾರಾ

ಕನ್ನಡಕ್ಕೆ ವಾಪಸ್ಸಾದ ಹಾಲುಂಡ ತವರು ಸಿತಾರಾ

Posted By:
Subscribe to Filmibeat Kannada

'ಹಾಲುಂಡ ತವರು' ಚಿತ್ರದಲ್ಲಿ ಲೀಟರ್ ಗಟ್ಟಲೆ ಕಣ್ಣ್ಣೀರು ಸುರಿಸಿ ಕನ್ನಡ ಚಿತ್ರ ಪ್ರೇಕ್ಷಕರಿಗೆ ಹತ್ತಿರವಾದ ನಟಿ ಸಿತಾರಾ. ನಂತರ ಅದೆಷ್ಟೋ ಚಿತ್ರಗಳಲ್ಲಿ ಕಣ್ಣೀರ ಕೋಡಿ ಹರಿಸಿ ಪ್ರೇಕ್ಷಕರ ಕಣ್ಣನ್ನು ಒದ್ದೆ ಮಾಡಿ ಸಿತಾರಾ ಮಾಯವಾಗಿದ್ದರು. ಇದೀಗ ಬಹಳಷ್ಟು ವರ್ಷಗಳ ನಂತರ 'ನಾನು ನನ್ನ ಕನಸು' ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

ಆದರೆ ಸಿತಾರಾ ಈಗ ಚಿತ್ರಮಂದಿರದಲ್ಲಿ ಕಣ್ಣೀರ ಮಳೆ ಸುರಿಸಲು ಬರುತ್ತಿಲ್ಲ. 'ನಾನು ನನ್ನ ಕನಸು' ಚಿತ್ರದಲ್ಲಿ ಪ್ರಕಾಶ್ ರೈಗೆ ಹೆಂಡತಿ ಪಾತ್ರ ಮಾಡುತ್ತಿದ್ದಾರೆ. ಪ್ರಕಾಶ್ ರೈ ಮಗಳಾಗಿ ನಟಿಸುತ್ತಿರುವ ನಟಿ ರಮ್ಯಾಗೆ ತಾಯಿಯಾಗಿ ನಟಿಸುವ ಅವಕಾಶ ಸಿತಾರಾ ಪಾಲಿಗೆ ಒದಗಿ ಬಂದಿದೆ.

ತಮಿಳಿನಲ್ಲಿ ಭಾರಿ ಯಶಸ್ಸು ದಾಖಲಿಸಿದ್ದ 'ಅಭಿಯುಂ ನಾನುಂ' ಕನ್ನಡಕ್ಕೆ 'ನಾನು ನನ್ನ ಕನಸು' ಆಗುತ್ತಿರುವುದು ಗೊತ್ತೇ ಇದೆ. ಸಿತಾರಾ ಪಾತ್ರವನ್ನು ತಮಿಳಿನಲ್ಲಿ ಹಿರಿಯ ನಟಿ ಲಕ್ಷ್ಮಿ ಮಗಳು ಐಶ್ವರ್ಯ ಮಾಡಿದ್ದರು. ಮೂಲ ಚಿತ್ರದಲ್ಲಿ ಪೃಥ್ವಿರಾಜ್ ಮಾಡಿದ್ದ ಪಾತ್ರ ರಮೇಶ್ ಅರವಿಂದ್ ಪಾಲಾಗಿದೆ. ಈ ಚಿತ್ರದಲ್ಲಿ ರಮೇಶ್ ಅವರದು ಸಣ್ಣ ಪಾತ್ರ.

ಪ್ರಕಾಶ್ ರೈ ಮತ್ತು ರಮೇಶ್ ಇಬ್ಬರೂ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರ ಶಿಷ್ಯರು. ಬಾಲಚಂದರ್ ಅವರ ಸಾಕಷ್ಟು ಡ್ಯುಯೆಟ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದವರು. 'ಯಾರೇ ನೀನು ಚೆಲುವೆ' ಚಿತ್ರದಲ್ಲಿ ಸಣ್ಣ ಪಾತ್ರಗಳಲ್ಲಿ ಮಿಂಚಿ ಮರೆಯಾಗಿದ್ದರು. ಇದೀಗ ಪ್ರಕಾಶ್ ರೈ ಮತ್ತು ರಮೇಶ್ ಇಬ್ಬರೂ ಪರದೆ ಹಂಚಿಕೊಳ್ಳುತ್ತಿರುವುದು ವಿಶೇಷ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada