»   » ಕ್ರೇಜಿಸ್ಟಾರ್ ರವಿಚಂದ್ರನ್ ಲಡ್ಡು ಹಂಚಿದ್ದು ನಿಜವೆ?

ಕ್ರೇಜಿಸ್ಟಾರ್ ರವಿಚಂದ್ರನ್ ಲಡ್ಡು ಹಂಚಿದ್ದು ನಿಜವೆ?

Posted By: *ಉದಯರವಿ
Subscribe to Filmibeat Kannada

ಕನಸುಗಾರ ರವಿಚಂದ್ರನ್ ಹುಟ್ಟುಹಬ್ಬವನ್ನು ಕಣ್ಣಾರೆ ನೋಡಿದವರು ಕನ್ನಡ ಚಿತ್ರರಂಗ ನಷ್ಟದಲ್ಲಿದೆ ಎಂಬ ಮಾತನ್ನು ಒಪ್ಪಲ್ಲ. ಕಾರಣ ರವಿಚಂದ್ರನ್ ಹುಟ್ಟುಹಬ್ಬ ಅಷ್ಟೊಂದು ವೈಭವಯುತವಾಗಿ ನಡೆಯಿತು. 49ಕ್ಕೆ ಅಡಿಯಿಟ್ಟ ರವಿಚಂದ್ರನ್ 49 ಕೆಜಿ ತೂಕದ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಹಾಗೆಯೇ ತಮ್ಮ ನೆಚ್ಚಿನ ಅಭಿಮಾನಿಗಳಿಗೆ ತಿರುಪತಿಯಿಂದ ಒಂದಲ್ಲ, ಎರಡಲ್ಲ ಬರೋಬ್ಬರಿ ನೂರು ಕೆಜಿ ಲಡ್ಡು ತರಿಸಿ ಹಂಚಿದ್ದಾರೆ ಎಂಬ ಸುದ್ದಿಯೂ ಇದೆ. ಇದು ನಿಜವೇ? ಅವರು ವಿತರಿಸಿದ್ದು ತಿರುಪತಿ ಲಡ್ಡುನಾ ಅಥವಾ ಬೇಸಿನ್ ಲಡ್ಡುನಾ ಎಂಬ ಅನುಮಾನ ಗಾಂಧಿನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಸಿಕ್ಕವರಿಗೆ ಮಾತ್ರ ಲಡ್ಡುವನ್ನುರುಚಿ ನೋಡುವ ಭಾಗ್ಯ ಲಭ್ಯವಾಗುತ್ತದೆ. ಅದನ್ನೆ ಪ್ರಸಾದ ರೂಪದಲ್ಲಿ ಬಂಧು ಬಾಂಧವರಿಗೆ ವಿತರಿಸಲಾಗುತ್ತದೆ. ಆದರೆ ನೂರು ಕೆಜಿ ಲಡ್ಡು ವಿತರಿಸುವುದು ಎಂದರೆ ಹೇಗೆ? ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡುಗಳಿಗೆ ಬಹಳ ಬೇಡಿಕೆ ಇದೆ. ಹಾಗೆಯೇ ಕೊರತೆಯೂ ಇದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ. ಹೀಗಿದ್ದೂ ಕನಸುಗಾರನಿಗೆ ನೂರು ಕೆಜಿ ಲಡ್ಡು ಎಲ್ಲಿಂದ ಸಿಕ್ಕಿತು?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada