»   » ಕಡೆಗೂ 'ಜೊತೆಗಾರ'ನಿಗೆ ಬಿಡುಗಡೆ ಭಾಗ್ಯ

ಕಡೆಗೂ 'ಜೊತೆಗಾರ'ನಿಗೆ ಬಿಡುಗಡೆ ಭಾಗ್ಯ

Subscribe to Filmibeat Kannada

ಐಡಿಬಿಐ ಸಾಲದ ಸುಳಿಯಲ್ಲಿ ಸಿಲುಕಿದ್ದ 'ಜೊತೆಗಾರ' ಚಿತ್ರಕ್ಕೆ ಕಡೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ರಮ್ಯಾ ಮತ್ತು ಪ್ರೇಮ್ ಕುಮಾರ್ ಜೋಡಿಯ 'ಜೊತೆಗಾರ' ಡಿಸೆಂಬರ್ ನಲ್ಲಿ ತೆರೆಗೆ ಅಪ್ಪಳಿಸಲಿದೆ. ಅಂದುಕೊಂಡಂತೆ ನಡೆದಿದ್ದರೆ 'ಜೊತೆಗಾರ'ಈ ವರ್ಷ ಜೂನ್ ತಿಂಗಳಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ.

ಈ ಚಿತ್ರಕ್ಕಾಗಿ ಐಡಿಬಿಐ ಸಾಲ ನೀಡಿತ್ತು. ಸಾಲ ತೀರಿಸದೆ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಐಡಿಬಿಐ ಪಟ್ಟುಹಿಡಿಯಿತು. ಹಾಗಾಗಿ ಜೊತೆಗಾರ ಡಬ್ಬದಲ್ಲೇ ಕೊಳೆಯುವಂತಾಯಿತು. ನಿರ್ಮಾಪಕ ಅಶ್ವಿನಿ ರಾಂ ಪ್ರಸಾದ್ ಸಂಪೂರ್ಣವಾಗಿ ದಿವಾಳಿಯಾಗಿದ್ದಾರೆ ಎಂಬ ಮಾತುಗಳು ಚಿತ್ರೋದ್ಯಮದಲ್ಲಿ ಕೇಳಿಬಂದಿದ್ದವು.

ಇದೀಗ ಅಶ್ವಿನಿ ರಾಂ ಪ್ರಸಾದ್ ತಮ್ಮ ಸಹೋದರ ಕೃಷ್ಣ ಪ್ರಸಾದ್ ಕೈಗೆ 'ಜೊತೆಗಾರ'ನನ್ನು ಕೊಟ್ಟಿದ್ದಾರೆ. ಐಡಿಬಿಐ ಸಾಲ ತೀರಿಸಲಾಗಿದ್ದು 'ಜೊತೆಗಾರ'ನಿಗೆ ಬಿಡುಗಡೆ ಭಾಗ್ಯ ಸಿಕ್ಕಂತಾಗಿದೆ. ಒಟ್ಟಿನಲ್ಲಿ ಒಂದೂವರೆ ವರ್ಷದ ಬಳಿಕ ರಮ್ಯಾರನ್ನ್ನು ಬೆಳ್ಳಿತೆರೆಯ ಮೇಲೆ ನೋಡುವ ಸೌಭಾಗ್ಯ ಪ್ರೇಕ್ಷಕರ ಪಾಲಿಗೆ ಒದಗಿಬಂದಿದೆ.

ಕನ್ನಡ ಚಿತ್ರಗಳಿಗೆ ಸಾಲ ನೀಡುತ್ತಿರುವ ಏಕೈಕ ಬ್ಯಾಂಕ್ ಎಂದರೆ ಐಡಿಬಿಐ. ಚಿತ್ರಕ್ಕೆ ಸಂಬಂಧಿಸಿದಂತೆ ಕಲಾವಿದರು, ತಂತ್ರಜ್ಞರು, ಬಿಡುಗಡೆ ದಿನಾಂಕ, ಚಿತ್ರೀಕರಣ ಸಮಯ... ಹೀಗೆ ಸಮಸ್ತ ಮಾಹಿತಿ ನೀಡಿದ ಬಳಿಕವಷ್ಟೇ ಐಡಿಬಿಐ ಸಾಲ ನೀಡುತ್ತದೆ. ಇದಕ್ಕೆಂದೇ ಐಡಿಬಿಐ ಬ್ಯಾಂಕಿನಲ್ಲಿ ಸಮಿತಿಯೂ ಇದೆ. ಪರಿಶೀಲನೆಯ ಬಳಿಕ ಯಾವುದೇ ಆಧಾರ, ಜಾಮೀನು ಪತ್ರಗಳಿಲ್ಲದೆ ಸಾಲ ನೀಡಲಾಗುತ್ತದೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ಸಾಲ ಸೆಟ್ಲ್ ಮಾಡಬೇಕು. ಇಲ್ಲದಿದ್ದರೆ 'ಜೊತೆಗಾರ' ರೀತಿ ಡಬ್ಬದಲ್ಲೇ ಕೊಳೆಯಬೇಕಾಗುತ್ತದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...