»   »  ಬುದ್ಧಿವಂತ ಯಶಸ್ಸು ದುಬೈ ಬಾಬುಗೆ ಲಾಭ

ಬುದ್ಧಿವಂತ ಯಶಸ್ಸು ದುಬೈ ಬಾಬುಗೆ ಲಾಭ

Posted By:
Subscribe to Filmibeat Kannada

ಅದ್ದೂರಿತನಕ್ಕೆ ಮತ್ತೊಂದು ಹೆಸರು ನಿರ್ಮಾಪಕ ಶೈಲೇಂದ್ರಬಾಬು. ಹಿಂದೆ ಇವರ ನಿರ್ಮಾಣದ ಕುಟುಂಬ ಹಾಗೂ ಗೌರಮ್ಮ ಚಿತ್ರಗಳು ಬಾಕ್ಸಾಫೀಸಲ್ಲಿ ಭರ್ಜರಿ ಜಯಗಳಿಸಿದ್ದವು. ಪ್ರಸ್ತುತ ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ದುಬೈ ಬಾಬು' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ.

ದುಬೈ ಬಾಬು ಚಿತ್ರಕ್ಕೆ ಶೈಲೇಂದ್ರ ಬಾಬು ಅಪಾರ ವೆಚ್ಚ ಮಾಡಿರುವ ಕಾರಣ ಈ ಚಿತ್ರ ದುಬಾರಿ ಬಾಬು ಎನ್ನಿಸಿಕೊಂಡಿದೆ. ಸೂಪರ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿರುವ ಚಿತ್ರದಲ್ಲಿ ನಿಖಿತಾ ಮತ್ತು ಸಲೋನಿ ಎಂಬ ಬೆಡಗಿಯರು ನಾಯಕಿಯರಾಗಿ ನಟಿಸಿದ್ದಾರೆ.

ನಟನೆಯಿಂದ ಹಲವು ವರ್ಷಗಳ ಕಾಲ ದೂರ ಉಳಿದಿದ್ದ ಕುಮಾರ್ ಗೋವಿಂದ್ ಈ ಚಿತ್ರದ ಮೂಲಕ ಮತ್ತೆ ಆಗಮಿಸಿದ್ದಾರೆ. ಮುಂಬೈನ ಜವೇರಿ ಛಾಯಾಗ್ರಹಣ, ನಾಗಣ್ಣ ಚಿತ್ರಕಥೆ ಮತ್ತು ವಿ.ಶ್ರೀಧರ್ ಸಂಗೀತ ದುಬೈ ಬಾಬುಗಿದೆ. ಉಪೇಂದ್ರ ಅವರ ಬುದ್ದ್ಧಿವಂತ ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದೆ. ಸಹಜವಾಗಿಯೇ ದುಬೈಬಾಬು ಚಿತ್ರದ ಮೇಲೆ ಪ್ರೇಕ್ಷಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಲ್ಲೂ ಉಪೇಂದ್ರನ ಮ್ಯಾಜಿಕ್ ಮುಂದುವರಿಯಲಿದೆ ಎಂಬ ನಂಬಿಕೆ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada