For Quick Alerts
  ALLOW NOTIFICATIONS  
  For Daily Alerts

  ಸ್ವಾಮಿ ನಿತ್ಯಾನಂದನಿಗೆ ಜೂಹಿ ಚಾವ್ಲಾ ಪಾದಪೂಜೆ

  By Rajendra
  |

  ರಾಸಲೀಲೆ ಖ್ಯಾತಿಯ ಸ್ವಾಮಿ ನಿತ್ಯಾನಂದ ಬಿಡದಿ ಆಶ್ರಮದಲ್ಲಿ ಜನವರಿ 1ರಂದು ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ನಿತ್ಯಾನಂದನ ಹುಟ್ಟುಹಬ್ಬಕ್ಕೆ ಬಾಲಿವುಡ್ ತಾರೆ ಜೂಹಿ ಚಾವ್ಲಾ ಶನಿವಾರ (ಜ.1) ಆಶ್ರಮಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಡಿಸೆಂಬರ್ 28ರಂದು ಭೇಟಿ ನೀಡಿದ ಆಕೆ ಬಿಡದಿ ಆಶ್ರಮದಲ್ಲಿ ನಾಲ್ಕು ದಿನಗಳ ಕಾಲ ಉಳಿದುಕೊಂಡಿದ್ದರು.

  ಜೂಹಿ ಚಾವ್ಲಾ ಅವರು ಸ್ವಾಮಿ ನಿತ್ಯಾನಂದ ಅವರ ಪರಮ ಭಕ್ತೆ. ಒಮ್ಮೆ ಆಕೆಯ ಸಹೋದರನೊಬ್ಬ ಕೋಮಾ ಹಂತದಲ್ಲಿದ್ದ ಸಮಯದಲ್ಲಿ ಜೂಹಿ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮಿ ನಿತ್ಯಾನಂದ ಆಶೀರ್ವಾದ ಪಡೆದಿದ್ದರು. ಬಳಿಕ ಆಕೆಯ ಸಹೋದರ ಗುಣಮುಖನಾಗಿದ್ದನಂತೆ. ಹಾಗಾಗಿ ಬಿಡದಿ ಆಶ್ರಮಕ್ಕೂ ಜೂಹಿ ಚಾವ್ಲಾ ಅವರಿಗೂ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು ಎನ್ನಲಾಗಿದೆ.

  ಜೂಹಿ ಚಾವ್ಲಾ ಕುಟುಂಬ ಸಮೇತ ಬಿಡದಿ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮೀಜಿಗೆ ಹುಟ್ಟು ಹಬ್ದದ ಶುಭಾಶಯ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ನಿತ್ಯಾನಂದನ ಹುಟ್ಟುಹಬ್ಬದ ಪ್ರಯುಕ್ತ ಜ.1ರ ಬೆಳಿಗ್ಗೆ ಮೆರವಣಿಗೆ ಮೂಲಕ ಆಶ್ರಮಕ್ಕೆ ಕರೆ ತಂದು ಪಾದಪೂಜೆ ನಡೆಸಲಾಯಿತು. ಜೂಹಿ ಚಾವ್ಲಾ ಕುಟುಂಬ ಕೂಡ ಪಾದಪೂಜೆ ನಡೆಸಿ ಆಶೀರ್ವಾದ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.

  ಸ್ವಾಮಿಗಳ ಹುಟ್ಟುಹಬ್ಬಕ್ಕೆ ರಾಜಕೀಯ ಧುರೀಣರು, ವಿದೇಶಿ ಭಕ್ತರು ಸೇರಿದಂತೆ ಹಲವಾರು ಮಂದಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ನಿತ್ಯಾನಂದ ಭವನಕ್ಕೆ ಕೊಳದ ಮಠದ ಶಾಂತವೀರ ಸ್ವಾಮೀಜಿ ಶಂಕು ಸ್ಥಾಪನೆ ನೆರವೇರಿಸಿದರು. ನಟಿ ರಂಜಿತಾ ಸಹ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮಿ ನಿತ್ಯಾನಂದ ಪಾದಪೂಜೆ ನಡೆಸಿದರು ಎಂದು ಆಶ್ರಮದ ಮೂಲಗಳು ತಿಳಿಸಿವೆ.

  ಕಳೆದ ಎರಡು ವರ್ಷಗಳಿಂದ ಆನಂದೋತ್ಸವ ಹೆಸರಿನಲ್ಲಿ ಸ್ವಾಮಿ ನಿತ್ಯಾನಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವಾರು ಪ್ರದೇಶಗಳಿಂದ ಗಣ್ಯರು ಆಗಮಿಸುತ್ತಿದ್ದರು. ಆದರೆ ಈ ಬಾರಿಯ ಆನಂದೋತ್ಸವದಲ್ಲಿ ಸಿನಿಮಾ ತಾರೆಗಳು, ರಾಜಕೀಯ ಧುರೀಣರು ಅಷ್ಟಾಗಿ ಕಂಡುಬಂದಿಲ್ಲ. [ರಂಜಿತಾ]

  English summary
  Bollywood actress Juhi Chawla attended the 34th birthday of controversial godman Swami Nithyananda on Saturday(Jan 1). She came to his Bidadi ashram on December 28 and stayed in ashram for four days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X