»   »  ಚಿತ್ರಮಂದಿರದಲ್ಲಿ ಈ ನಟಿ ನಕ್ಕಿದ್ದು ಯಾಕೆ?

ಚಿತ್ರಮಂದಿರದಲ್ಲಿ ಈ ನಟಿ ನಕ್ಕಿದ್ದು ಯಾಕೆ?

By: *ಜಯಂತಿ
Subscribe to Filmibeat Kannada

ಸಿನಿಮಾ ಮುಗಿಯಲು ಇನ್ನು ಹದಿನೈದು ನಿಮಿಷವಷ್ಟೆ ಬಾಕಿ. ಆಕೆ ಹಿಂದಿನ ಸಾಲುಗಳ ಕಡೆ ನೋಡಿದರು. ಚಿತ್ರದಲ್ಲಿ ಆಕೆಯದ್ದೂ ಪ್ರಮುಖ ಪಾತ್ರವಿತ್ತು. ಹಿಂದಿನ ಸಾಲಿನಲ್ಲಿ ಅನೇಕರು ಗೊರಕೆ ಹೊಡೆಯುತ್ತಿದ್ದರು. ಪಕ್ಕದಲ್ಲಿ ಕೂತಿದ್ದ ತನ್ನ ಬಂಧುಗಳಿಗೆ ಈ ವಿಷಯ ಹೇಳಿಕೊಂಡು ಆಕೆ ಗೊಳ್ಳನೆ ನಕ್ಕರು.

'ಮೋಸ್ಟ್ ಆಫ್ ದೆಮ್ ಆರ್ ಸ್ಲೀಪಿಂಗ್. ದಿಸ್ ಈಸ್ ದಿ ಬೆಸ್ಟ್ ರೆಸ್ಪಾನ್ಸ್ ಫಾರ್ ದಿಸ್ ಫಿಲ್ಮ್" ಅಂತ ಮೆಲುದನಿಯಲ್ಲಿ ನಟೀಮಣಿ ಹೇಳಿದರು. ತಮ್ಮ ಹಿಂದಿನ ಸಾಲಲ್ಲೇ ಪತ್ರಕರ್ತ/ಕರ್ತೆಯರು ಕೂತಿದ್ದಾರೆಂಬುದು ಆಕೆಗೆ ಗೊತ್ತಿರಲಿಲ್ಲ!

ಚಿತ್ರ ಮುಗಿದು ದೀಪಗಳೆಲ್ಲಾ ಹೊತ್ತಿಕೊಂಡವು. ಗೊರಕೆ ಹೊಡೆಯುತ್ತಿದ್ದ ಕೆಲವು ಜೀವಗಳು ಇನ್ನೂ ಹಾಗೇ ಕಣ್ಣುಮುಚ್ಚಿದ್ದವು. ಅವರನ್ನು ನೋಡಿ ಆಕೆ ಮತ್ತೊಮ್ಮೆ ನಕ್ಕರು. ಆ ನಟಿಯ ಹೆಸರು ಶಿರಿನ್. ಸಿನಿಮಾ ಹೆಸರು 'ಯೋಗಿ"!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada