»   »  ಶಾಮಿಲಿಯ ಬೆಸ್ಟ್ ಫ್ರೆಂಡ್ ಯಾರು ಅಂತ ಗೊತ್ತಾ?

ಶಾಮಿಲಿಯ ಬೆಸ್ಟ್ ಫ್ರೆಂಡ್ ಯಾರು ಅಂತ ಗೊತ್ತಾ?

Subscribe to Filmibeat Kannada

ಇತ್ತೀಚೆಗೆ ನಟಿ ಶಾಮಿಲಿ ಮಾತನಾಡುತ್ತಾ, ನನಗೆ ಬಹಳಷ್ಟು ಗೆಳೆಯರಿದ್ದಾರೆ. ಆದರೆ ಮನೆ ಒಳಗೆ ಅಥವಾ ಹೊರಗೆ ನಡೆಯುವ ಯಾವುದೆ ವಿಚಾರವಿರಲಿ ಮೊದಲು ಅಕ್ಕನಿಗೇ ಹೇಳಬೇಕೆನಿಸುತ್ತದೆ. ಶಾಲಿನಿ ನನ್ನ ಬೆಸ್ಟ್ ಫ್ರೆಂಡ್ ಎಂದು ನಟಿ ಶಾಮಿಲಿ ಅಕ್ಕನ ಬಗ್ಗೆ ಸ್ನೇಹದ ಮಳೆಗರೆದಿದ್ದಾರೆ.

''ನಾನು ಚಿಕ್ಕವಳಿದ್ದಾಗ ಆಕೆಯೇ ನನ್ನನ್ನು ಶೂಟಿಂಗ್ ಸ್ಪಾಟ್ ಗಳಿಗೆ ಕರೆದೊಯ್ಯುತ್ತ್ತಿದ್ದಳು. ಚಿತ್ರಜಗತ್ತಿನ ಬಗ್ಗೆ ಬಣ್ಣಬಣ್ಣದ ಕನಸುಗಳು ಅರಳುತ್ತಿದ್ದ ಸಮಯ. ಬಾಲಿವುಡ್ ನಟ ಶಾರುಖ್ ಖಾನ್ ಎಂದರೆ ಪಂಚಪ್ರಾಣ. ಅವರನ್ನು ಒಮ್ಮೆಯಾದರೂ ಭೇಟಿಯಾಗಬೇಕೆಂದು ಅಕ್ಕನೊಂದಿಗೆ ಹೇಳುತ್ತಿದ್ದೆ.'' ಎನ್ನುತ್ತಾರೆ ಶಾಮಿಲಿ.

ಚಿಕ್ಕವಳಿದ್ದಾಗ ಹೇಳಿದ ಈ ಘಟನೆಯನ್ನು ಅಕ್ಕ ಮದುವೆಯಾದ ನಂತರವೂ ಜ್ಞಾಪಕದಲ್ಲಿಟ್ಟುಕೊಂಡಿದ್ದರು. ಭಾವನವರಾದ ಅಜಿತ್ ರೊಂದಿಗೆ ಮಾತನಾಡಿ ನನ್ನನ್ನು ಮುಂಬೈಗೆ ಕರೆದುಕೊಂಡು ಹೋದಳು. ಶಾರುಕ್ ರೊಂದಿಗೆ ಪರಿಚಯ ಮಾಡಿಸಿದಳು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ ಎಂದು ತಮ್ಮ್ಮ ನೆನಪುಗಳನ್ನು ಶಾಮಿಲಿ ಬಿಚ್ಚಿಟ್ಟಿದ್ದಾರೆ.

ಒಮ್ಮೆ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಲು ಸಿಂಗಪುರಕ್ಕೆ ಹೋಗಬೇಕು ಎಂದು ತೀರ್ಮಾನಿಸಿದ್ದೆ. ನೇರವಾಗಿ ಅಕ್ಕನೊಂದಿಗೆ ಈ ವಿಷಯ ಪ್ರಸ್ತಾಪಿಸಿದೆ. ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ಅಕ್ಕ ಎಲ್ಲರನ್ನೂ ಒಪ್ಪಿಸಿ ನನ್ನನ್ನು ಸಿಂಗಪುರ್ ಗೆ ಕಳುಹಿಸಿದರು. ನಾಳೆ ನಾನು ಯಾರನ್ನಾದರೂ ಲವ್ ಮಾಡಬೇಕೆಂದರೂ ಮೊದಲು ಅಕ್ಕನ ಬಳಿಯೇ ಹೇಳುತ್ತೇನೆ. ಆಕೆಗಿಂತಲೂ ನನಗೆ ಬೆಸ್ಟ್ ಫ್ರೆಂಡ್ ಇನ್ಯಾರೂ ಇಲ್ಲ ಎನ್ನುತ್ತಾರೆ ಶಾಮಿಲಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada