For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬಂದ ತಮಿಳು ಮೈನಾ ಅಮಲಾ ಪೌಲ್

  By Rajendra
  |

  ಚಿತ್ರೋದ್ಯಮದಲ್ಲಿ ಅಂದುಕೊಂಡಷ್ಟು ಯಶಸ್ಸು ಕಾಣದಿದ್ದರೂ ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ನಿರ್ಮಿಸುವ ಕಲೆ ಕೊಬ್ಬರಿ ಮಂಜು ಅವರಿಗೆ ಸಿದ್ಧಿಸಿದೆ. ಈಗಾಗಲೆ ಅವರ ಮೂರು ಚಿತ್ರಗಳು ಸೆಟ್ಟೇರಿವೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಗಾಡ್ ಫಾದರ್ ಸೇರಿದಂತೆ ಹ್ಯಾಪಿ, ಶಿಕಾರಿ, ಜಾಲಿಬಾಯ್ ಚಿತ್ರಗಳು ನಾನಾ ಹಂತಗಳ ಚಿತ್ರೀಕರಣದಲ್ಲಿವೆ.

  ಈಗ ಮತ್ತೊಂದು ರೀಮೇಕ್ ಚಿತ್ರವನ್ನು ನಿರ್ಮಿಸುವ ಸಾಹಸಕ್ಕೆ ಕೈಹಾಕಿದ್ದಾರೆ ಕೆ ಮಂಜು. ಇದು ತಮಿಳಿನ ಮೈನಾ ಚಿತ್ರ. ಮೂಲ ಚಿತ್ರದಲ್ಲಿ ಅಮಲಾ ಪೌಲ್ ಎಂಬ ಬೆಡಗಿ ಅಭಿನಯಿಸಿದ್ದರು. ಈಗ ಆಕೆಯನ್ನೇ ಕನ್ನಡಕ್ಕೆ ಕರೆತರುತ್ತಿದ್ದಾರೆ ಮಂಜು. ಚಿತ್ರದ ನಾಯಕನಟ ಗೋಲ್ಡನ್ ಸ್ಟಾರ್ ಗಣೇಶ್. ಮೇ.23ರಂದು ಈ ಚಿತ್ರ ಬೆಂಗಳೂರಿನಲ್ಲಿ ಸೆಟ್ಟೇರಲಿದ್ದು ಬಳಿಕ ಮೈಸೂರಿನಲ್ಲಿ ಚಿತ್ರೀಕರಣ ನಡೆಸಲಿದೆ.

  ಈ ಹಿಂದೆಯೇ ಈಕೆಯನ್ನು ಸಂಪರ್ಕಿಸಲಾಗಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಒಲ್ಲೆ ಎಂದಿದ್ದಳು. ಈಗ ಸಮಯ ಹೊಂದಿಸಿಕೊಂಡು ಕನ್ನಡಕ್ಕೆ ಅಡಿಯುತ್ತಿದ್ದಾಳೆ ಅಮಲಾ. ತಮಿಳು ಚಿತ್ರರಂಗದಲ್ಲಿ ಮೈನಾ ಚಿತ್ರ ಹೊಸ ದಾಖಲೆಯನ್ನು ನಿರ್ಮಿಸಿತ್ತು. ಮೂಲ ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದ್ದ ಪ್ರಭು ಸೋಲೋಮನ್ ಕನ್ನಡ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

  English summary
  Tamil Mynaa fame actress Amala Paul is all set to work with Golden Star Ganesh in the Kannada remake of Mynaa. The movie is producing by produced by K. Manju and directed by Prabhu Solomon. The film will be launched on May 23 in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X