Just In
Don't Miss!
- Sports
ದೀಪಕ್ ಕೂಡಾಗೆ ಅಮಾನತಿನ ಬಿಸಿ ಮುಟ್ಟಿಸಿದ ಬರೋಡಾ ಕ್ರಿಕೆಟ್ ಮಂಡಳಿ
- Finance
ಕೊಟಕ್ ಮಹೀಂದ್ರಾದಿಂದ ತಕ್ಷಣವೇ ಹೋಮ್ ಲೋನ್ ಮಂಜೂರು ಸ್ಕೀಮ್
- News
ಅರ್ನಬ್ ವಾಟ್ಸಾಪ್ ಚಾಟ್ ಸೋರಿಕೆ: ಸರ್ಕಾರದ ಮೌನದ ಕುರಿತು ಸೋನಿಯಾ ಗಾಂಧಿ ತರಾಟೆ
- Lifestyle
ಪದೇ ಪದೇ ಬದಲಾಗುವ ನಿಮ್ಮ ಸಂಗಾತಿಯ ಭಾವನೆಗಳನ್ನು ಈ ರೀತಿ ಸರಿ ಮಾಡಿ
- Automobiles
ಅನಾವರಣವಾಯ್ತು 2021ರ ಕೆಟಿಎಂ 890 ಡ್ಯೂಕ್ ಬೈಕ್
- Education
KIOCL Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡ ಚಿತ್ರರಂಗದಲ್ಲೊಂದು ಖತರ್ನಾಕ್ ಚಿತ್ರ
ಒಂದು ವಿಭಿನ್ನ ಚಿತ್ರಕತೆಯನ್ನು ನಿರ್ದೇಶಕ ಹ ಸು ರಾಜಶೇಖರ್ ಕೈಗೆತ್ತಿಕೊಂಡಿದ್ದಾರೆ. ನಾಲ್ಕು ಮಂದಿ ಹೀರೋಗಳನ್ನು ಹಾಕಿಕೊಂಡು ಬಹುತಾರಾಗಣದ ಚಿತ್ರವೊಂದಕ್ಕೆ ಆಕ್ಷನ್, ಕಟ್ ಹೇಳಲು ಹೊರಟಿದ್ದಾರೆ. ಚಿತ್ರದ ಹೆಸರು ಖತರ್ನಾಕ್! ಆದರೆ ಇದು ತೆಲುಗಿನ 'ಖತರ್ನಾಕ್' ಅಲ್ಲ.
'ಶಿಷ್ಯ' ದೀಪ, 'ಗಂಡ ಹೆಂಡತಿ' ತಿಲಕ್, 'ಲೋಕವೆ ಹೇಳಿದ ಮಾತಿದು' ರವಿತೇಜ, 'ಕಾಳಿದಾಸ ಲವಲ್ಲಿ ಬಿದ್ದ' ಅಮಿತ್, 'ಟೆನ್ತ್ ಕ್ಲಾಸ್' ಪ್ರವೀಣ್ ಚಿತ್ರದ ನಾಯಕ ನಟರು. ಈ ನಾಲ್ಕು ಮಂದಿ ಹೀರೋಗಳಿಗೆ ಖಳ ನಾಯಕ ಒಬ್ಬನೇ ಆದಿ ಲೋಕೇಶ್. ಅವರದು ಚಿತ್ರದಲ್ಲಿ ಖತರ್ನಾಕ್ ರೋಲ್ ಅಂತೆ.
ಇತ್ತೀಚೆಗೆ ಹ ಸು ರಾಜಶೇಖರ್ ನಿರ್ದೇಶಿಸಿದ್ದ 'ಶಾಕ್' ಚಿತ್ರ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿತ್ತು. ಹಿಂದಿ ಚಿತ್ರ 'ಕೌನ್' ರೀಮೇಕ್ ಆಗಿದ್ದ ಈ ಚಿತ್ರದ ಸೋಲು ರಾಜಶೇಖರ್ ಅವರನ್ನು ಮೂಲೆಗುಂಪು ಮಾಡಿತ್ತು. ವಿಷಯ ಹೀಗಿದ್ದರೂ ಚಿತ್ರಕ್ಕೆ ಬಂಡವಾಳ ಹೂಡಲು ಇಬ್ಬರು ನಿರ್ಮಾಪಕರು ಮುಂದಾಗಿದ್ದಾರೆ. ಅವರ ಭಂಡ ಧೈರ್ಯವನ್ನು ಮೆಚ್ಚಲೇಬೇಕು.
ಆ ಇಬ್ಬರು ನಿರ್ಮಾಪಕರ ಹೆಸರು ಅಮರಚಂದ್ ಜೈನ್ ಮತ್ತು ವಿಜಯ್ ಸುರಾನಾ. ನಿರಂಜನ್ ಬಾಬು ಅವರ ಛಾಯಾಗ್ರಹಣ ಎಚ್ ಎಸ್ ಮಾರುತಿ ಅವರ ಸಂಗೀತ ಚಿತ್ರಕ್ಕಿರುತ್ತದೆ. ಸುಮಾ ಗುಹಾ ಚಿತ್ರದ ನಾಯಕಿ. ಸಂಜಯ್ ದತ್ ಮುಖ್ಯಭೂಮಿಕೆಯಲ್ಲಿರುವ 'ಪ್ಲಾನ್' ಚಿತ್ರದ ರೀಮೇಕ್ ಇದು ಎನ್ನುತ್ತವೆ ಮೂಲಗಳು.
ಚಿತ್ರದ ನಾಯಕಿ ಬಗ್ಗೆ ಹೇಳಬೇಕು ಎಂದರೆ ಈಕೆ ಈಗಾಗಲೆ ಎರಡು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಪ್ರೀತಿಯಿಂದ ರಮೇಶ್' ಮತ್ತು 'ಶಾಕ್' ಚಿತ್ರಗಳಲ್ಲಿ ನಟಿಸಿದ್ದರು. ಶೋಭಾರಾಜ್, ಬ್ಯಾಂಕ್ ಜನಾರ್ದನ್, ಕುರಿಗಳು ಪ್ರತಾಪ್ ಚಿತ್ರದ ಪೋಷಕ ಪಾತ್ರಗಳಲ್ಲಿದ್ದಾರೆ.