»   » ಈ ರಂಜಿತಾ ಯಾರು ಏನು ಎತ್ತ?

ಈ ರಂಜಿತಾ ಯಾರು ಏನು ಎತ್ತ?

Posted By:
Subscribe to Filmibeat Kannada

ಸ್ವಾಮಿ ನಿತ್ಯಾನಂದ ಲೈಂಗಿಕ ಹಗರಣದ ವಿಡಿಯೋ ಜೊತೆ ತೇಲಿಬಂದ ಪ್ರಮುಖ ಹೆಸರು ನಟಿ ರಂಜಿತಾ. ಇಷ್ಟಕ್ಕೂ ಈಕೆ ಯಾರು? ಎಂಬ ಬಗ್ಗೆ ಕಲವು ವಿವರಗಳು ಇಲ್ಲಿವೆ. ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ರಂಜಿತಾ ನಟಿಸಿದ್ದಾರೆ. 'ನಾಡೋಡಿ ಥೇರಂಡ್ರಲ್' ಚಿತ್ರದ ಮೂಲಕ ತಮಿಳಿನ ಖ್ಯಾತ ನಿರ್ದೇಶಕ ಭಾರತಿ ರಾಜಾ ಈಕೆಯನ್ನು ಬೆಳ್ಳಿತೆರೆಗೆ ಪರಿಚಯಿಸಿದರು. ನಂತರ ಈಕೆ ತಮಿಳಿನ ಹಲವಾರು ಚಿತ್ರಗಳಲ್ಲಿ ನಟಿಸಿದರು.

ಸೇನೆಯಲ್ಲಿ ಅಧಿಕಾರಿಯಾಗಿರುವ ರಾಕೇಶ್ ಮೆನನ್ ಅವರನ್ನು ಮದುವೆಯಾದ ಬಳಿಕ ರಂಜಿತಾ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಕೆಲ ವರ್ಷಗಳ ಬಳಿಕ ಮತ್ತೆ ರಂಜಿತಾ ಚಿತ್ರರಂಗಕ್ಕೆ ಹಿಂತಿರುಗುತ್ತಿರುವುದಾಗಿ ಘೋಷಿಸಿದ್ದರು. ಆಗ ರಂಜಿತಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಕೇಳಿಬಂದಿದ್ದವು. ಬಳಿಕ ಆಕೆ ತಮಿಳಿನ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.

ತಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆಯಿಲ್ಲ. ಇದೆಲ್ಲಾ ಕೇವಲ ವದಂತಿ ಅಷ್ಟೆ ಎಂದು ರಂಜಿತಾ ಸ್ಪಷ್ಟಪಡಿಸಿದ್ದರು. ಚಿತ್ರರಂಗದಲ್ಲಿ ಅವಕಾಶಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿರುವ ಕಾರಣ ನಟಿಸಲು ಒಪ್ಪಿಕೊಂಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದರು. ನೆಗಟೀವ್ ಶೇಡ್ಸ್ ಇರುವ ಪಾತ್ರಗಳಲ್ಲೂ ನಟಿಸಲಿದ್ದೇನೆ ಎಂದು ರಂಜಿತಾ ಹೇಳಿದ್ದರು.

ಮದುವೆಯಾದ ಬಳಿಕ ರಂಜಿತಾ ಹಣಕಾಸು ತೊಂದರೆಗೆ ಸಿಲುಕಿದ್ದಾರೆ. ಹಾಗಾಗಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇದು ನಿಜವಲ್ಲ. ನನ್ನ ಸಂಸಾರದಲ್ಲಿ ಯಾವುದೇ ಜಗಳ, ಭಿನ್ನಾಭಿಪ್ರಾಯವಿಲ್ಲ. ತಮ್ಮ ಪತಿಯ ಸಲಹೆಯ ಮೇರೆಗೆ ನಾನು ಚಿತ್ರರಂಗಕ್ಕೆ ಬರುತ್ತಿದ್ದೇನೆ ಎಂದು ಹೇಳಿ ರಂಜಿತಾ ಎಲ್ಲಾರ ಬಾಯಿ ಮುಚ್ಚಿಸಿದ್ದರು.

ಆಕೆ ನಟಿಸಿದ ತೀರಾ ಇತ್ತೀಚಿನ ಚಿತ್ರ ಎಂದರೆ 'ಆಂಜನೇಯಲು'. ತೆಲುಗಿನ ಕುಬೇರುಲು, ಮೈಸಮ್ಮ ಐಪಿಎಸ್, ಸುವರ್ಣ ಸಿಂಹಾಸನಂ, ಮಾವಿ ಚಿಗುರು, ಸ್ವಪ್ನ ಸುಂದರಿ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ರಂಜಿತಾ ಅಭಿನಯಿಸಿದ್ದಾರೆ. ಇದೀಗ ರಂಜಿತಾ ಹೆಸರು ಸ್ವಾಮಿ ನಿತ್ಯಾನಂದನ ಜೊತೆ ಥಳುಕು ಹಾಕಿಕೊಂಡು ಸುದ್ದಿಯಾಗಿದ್ದಾರೆ.

ರಂಜಿತಾ ಕನ್ನಡ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಸಾಯಿ ಕುಮಾರ್ ಅಭಿನಯದ ಅಗ್ನಿ ಐ ಪಿ ಎಸ್ ಚಿತ್ರದಲ್ಲಿ ರಂಜಿತಾ ಅಭಿನಯಿಸಿದ್ದರು. ಈಕೆ ನಟಿಸಿರುವ ಮತ್ತೊಂದು ಚಿತ್ರ 'ಮುಗಿಲ ಮಲ್ಲಿಗೆಯೋ' ತೆರೆಕಾಣಬೇಕಾಗಿದೆ. 1996ರಲ್ಲಿ ತೆರೆಕಂಡ ಪೊಲೀಸ್ ಸ್ಟೋರಿ ಚಿತ್ರ ತೆಲುಗು, ತಮಿಳು ಮತ್ತು ಹಿಂದಿಗೆ ಡಬ್ ಆಗಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada