For Quick Alerts
  ALLOW NOTIFICATIONS  
  For Daily Alerts

  ವಿಜಯ್ ರಾಘವೇಂದ್ರನಲ್ಲಿ ಮೃತ ನನ್ನ ಮಗನನ್ನು ಕಂಡೆ, ಸಿಎಂ

  |
  ಆರು ವರ್ಷಗಳ ಕೆಳಗೆ ಬೈಕ್ ಅಪಘಾತದಲ್ಲಿ ಮೃತಪಟ್ಟ ನಮ್ಮ ಮೊದಲ ಮಗ ಕೌಶಿಕ್ ನನ್ನು ಈಗಾಲೂ ವಿಜಯ್ ರಾಘವೇಂದ್ರರಲ್ಲಿ ಕಂಡಂತಾಗುತ್ತದೆ ಎಂದು ಮುಖ್ಯಮಂತ್ರಿ ಸದಾನಂದ ಗೌಡ ದಂಪತಿಗಳು ಭಾವುಕರಾಗಿ ಹೇಳಿಕೆ ನೀಡಿದ್ದಾರೆ.

  ಆರು ವರ್ಷದ ಹಿಂದೆ ನಡೆದ ಈ ದುರ್ಘಟನೆ ಬಳಿಕ ಚಿನ್ನಾರಿ ಮುತ್ತದಿಂದ ಇಂದಿನ ತನಕ ಟಿವಿಯಲ್ಲಿ ವಿಜಯ್ ರಾಘವೇಂದ್ರ ಮುಖ ಕಂಡರೆ ನನ್ನ ಮಗನದ್ದೇ ನೆನಪಾಗುತ್ತದೆ, ಮತ್ತದೇ ನೆನಪಿಗೆ ಜಾರುತ್ತೇವೆ ಎಂದು ಸಿಎಂ ಪತ್ನಿ ಡಾಟಿ ತೀವ್ರ ಬೇಸರ ವ್ಯಕ್ತ ಪಡಿಸುತ್ತಾರೆ.

  ವಿಜಯ್ ಸಿನಿಮಾ ಖಾಸಾಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಾಗ ಪತಿ ಸದಾನಂದ ಗೌಡ ಅವರ ಬಳಿ ಈ ವಿಷಯ ಹೇಳಿದ್ದೇನೆ. ಅದಕ್ಕೆ ಮೌನವೇ ಅವರ ಉತ್ತರವಾಗಿತ್ತು. ನಮ್ಮ ಮನಸಿನ ದುಗುಡ ದುಮ್ಮಾನ ನೀಗಿಸಿದ್ದು ಸಿನಿಮಾದ ಹಾಡುಗಳೇ ಎಂದು ಡಾಟಿ ಎರಡೆರಡು ಬಾರಿ ಬಾರಿ ಭಾವುಕರಾಗಿ ನೆನಪಿಸಿಕೊಳ್ಳುತ್ತಾರೆ.

  ಪತಿಯೊಂದಿಗೆ ಮಂಗಳೂರು, ಮೈಸೂರು ಮತ್ತು ಬೆಂಗಳೂರಿನಲ್ಲಿ ಬಹಳಷ್ಟು ಸಿನಿಮಾಗಳನ್ನು ನೋಡಿದ್ದೇನೆ. ರಂಗನಾಯಕಿ ಚಿತ್ರದಲ್ಲಿ ಆರತಿ ಮತ್ತು ಅಶೋಕ್ ಪಾತ್ರವನ್ನು ಎಂದಿಗೂ ನಾನು ಮರೆಯುವುದಿಲ್ಲ. ಎರಡು ಕನಸು ಚಿತ್ರದ 'ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೆ' ನನ್ನ ಫೇವರೆಟ್ ಹಾಡು ಎಂದು ಡಾಟಿ ಸದಾನಂದ ಗೌಡ ಸಿನಿಗಂಧ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

  English summary
  In an interview with Cinegandha magazine, CM and his spouse said six years back my first son died by road accident. From that day onwards we are seeing our son in Vijay Raghavendra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X