»   » ಧೋನಿ ಸಾಗಲಿ ಮುಂದೆ ಹೋಗಲಿ ಬಾಳ ತೀರ ಸೇರಲಿ

ಧೋನಿ ಸಾಗಲಿ ಮುಂದೆ ಹೋಗಲಿ ಬಾಳ ತೀರ ಸೇರಲಿ

Posted By:
Subscribe to Filmibeat Kannada

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಭಾನುವಾರ ರಾತ್ರಿ ಗೃಹಸ್ಥಾಶ್ರಮ ಪ್ರವೇಶಿಸಿದರು. ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರಾವತ್ ಅವರೊಂದಿಗೆ ಧೋನಿ ಮದುವೆ ಗೌಪ್ಯವಾಗಿ ನೆರವೇರಿತು. ಹೊಟೇಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿನಿ ಸಾಕ್ಷಿ ಕೈ ಹಿಡಿಯುವ ಮೂಲಕ ಧೋನಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಡೆಹ್ರಡೂನ್ ನಿಂದ 40 ಕಿ.ಮೀ ದೂರದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಇವರಿಬ್ಬರ ಮದುವೆ ತೀರಾ ಖಾಸಗಿಯಾಗಿ ನೆರವೇರಿತು. ಶನಿವಾರ ರಾತ್ರಿಯಷ್ಟೆ ಇಬರಿಬ್ಬರ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಜುಲೈ.7ರಂದು ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಅಂದು ಧೋನಿ 29ರ ಹರೆಯಕ್ಕೆ ಕಾಲಿಡಲಿದ್ದಾರೆ.

ಔರಂಗಬಾದ್ ಮೂಲದವರಾದ ಧೋನಿ ಮತ್ತು ಸಾಕ್ಷಿ ರಾಂಚಿ ಶಾಲೆಯಲ್ಲಿ ಸ್ನೇಹಿತರಾಗಿದ್ದರು. ಇವರಿಬ್ಬರ ತಂದೆಯರು ರಾಂಚಿಯ ಮೆಕಾನ್ ಕಂಪೆನಿಯಲ್ಲಿ ಸಹೋದ್ಯೋಗಿಗಳಾಗಿದ್ದರು. ಬಾಲಿವುಡ್ ನಟಿ ಬಿಪಾಶಾ ಬಸು ಅವರ ಮನೆಯಲ್ಲಿ ಧೋನಿ ಮತ್ತು ಸಾಕ್ಷಿ ಅವರ ಭೇಟಿಯಾಗಿತ್ತು. ಆಗಲೆ ಇವರಿಬ್ಬರ ನಡುವೆ ಪ್ರೇಮ ಅರಳಿತ್ತು.

ಟೀಂ ಇಂಡಿಯಾದ ಆಟಗಾರರಾದ ಹರ್ಭಜನ್ ಸಿಂಗ್, ಆಶಿಷ್ ನೆಹ್ರ ಮತ್ತಿತರು ಪಾಲ್ಗೊಂಡಿದ್ದರು. ಅಕ್ಟೋಬರ್ ನಲ್ಲಿ ನಡೆಯಬೇಕಾಗಿದ್ದ ಇವರಿಬ್ಬರ ಮದುವೆ ತರಾತುರಿಯಾಗಿ ನಡೆದುಹೋಗಿದೆ. ಮುಂದಿನ ದಿನಗಳಲ್ಲಿ ಬಿಡುವಿಲ್ಲದ ಕ್ರಿಕೆಟ್ ಪಂದ್ಯಾವಳಿಗಳಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ಧೋನಿ ಸಾಗಲಿ ಮುಂದೆ ಹೋಗಲಿ ಬಾಳ ತೀರ ಸೇರಲಿ...ಎಂಬುದೇ ನಮ್ಮ ಹಾರೈಕೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada