»   » ವಿಶಾಖಪಟ್ಟಣದಲ್ಲಿ ಕೋಕಿಲಾಮೋಹನ್ ಅಶೋಕವನ

ವಿಶಾಖಪಟ್ಟಣದಲ್ಲಿ ಕೋಕಿಲಾಮೋಹನ್ ಅಶೋಕವನ

Posted By:
Subscribe to Filmibeat Kannada

ಕನ್ನಡದ 'ಕೋಕಿಲಾ' ಚಿತ್ರದಲ್ಲಿ ಅಭಿನಯಿಸಿ ತಮಿಳು ಚಿತ್ರರಂಗದಲ್ಲಿ ಪ್ರಸಿದ್ದರಾಗಿರುವ ಕೋಕಿಲಾ ಮೋಹನ್ ಕಳೆದವರ್ಷ ತೆರೆಕಂಡ 'ಗೌತಮ್' ಚಿತ್ರದ ನಂತರ ಈಗ ಕನ್ನಡದ 'ಅಶೋಕವನ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ವಿಶಾಖಪಟ್ಟಣದಲ್ಲಿ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಮಾಸಾಂತ್ಯಕ್ಕೆ ಚಿತ್ರತಂಡ ಬೆಂಗಳೂರಿಗೆ ಮರಳಲಿದೆ.

ಕೌಟುಂಬಿಕ ಹಿನ್ನೆಲೆಯಲ್ಲಿ ಕೌತುಕಮಯ ಘಟ್ಟಗಳನ್ನೊಳಗೊಂಡಿರುವ ಈ ಚಿತ್ರವನ್ನು ಸ್ಯಾಮ್ ಜೆ ಚೈತನ್ಯ ನಿರ್ದೇಶಿಸುತ್ತಿದ್ದಾರೆ. ಕೇವಲ ಒಂದು ಗಂಟೆಯಲ್ಲಿ ಕಥೆ ತಯಾರಾಯಿತು. ಆದರೆ ಚಿತ್ರಕಥೆ ಬರೆಯಲು ಒಂದು ವರ್ಷವೇ ಬೇಕಾಯಿತು ಎಂದಿರುವ ನಿರ್ದೇಶಕರು ಇದೊಂದು ಸಂಪೂರ್ಣ ತಂತ್ರಜ್ಞರ ಸಿನಿಮಾ ಎನ್ನುತ್ತಾರೆ.

ರೆಡ್ ಕಾರ್ಪೆಟ್ ರೀಲ್ಸ್ ಸಂಸ್ಥೆಯ ಲಾಂಛನದಲ್ಲಿ ಗೌರಿಮೋಹನ್, ಎಸ್.ಎಲ್.ಸರವಣನ್ ಹಾಗೂ ಜೆ.ಸಾಮ್‌ಸನ್ ಬಾಬು ಅವರು ನಿರ್ಮಿಸುತ್ತಿರುವ ಈ ಚಿತ್ರದ ಛಾಯಾಗ್ರಾಹಕರು ಎಸ್.ಎಲ್.ಆರ್ಯನ್‌ಸಾರೋ. ಸೂರ್ಯ ಸಂಕಲನ, ರಿಷಲ್ ಸಾಯಿ ಎ.ಕೆ ಸಂಗೀತ ನೀಡಿರುವ ಈ ಚಿತ್ರದ ಉಳಿದ ತಾರಾಬಳಗದಲ್ಲಿ ಹರ್ಷವರ್ಧನ್, ತೇಜಸ್ವಿನಿ, ಕೋಮಲ್ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada