»   »  ಪ್ರೇಮ,ಕುಟುಂಬಗಳ ಸಂಕಲನವೇ ಪ್ರೇಮಿಸಂ

ಪ್ರೇಮ,ಕುಟುಂಬಗಳ ಸಂಕಲನವೇ ಪ್ರೇಮಿಸಂ

Subscribe to Filmibeat Kannada

'ಹೊಂಗನಸು' ಚಿತ್ರದ ಸೋಲಿನ ಬಳಿಕ ನಿರ್ದೇಶಕ ರತ್ನಜ 'ಪ್ರೇಮಿಸಂ' ಚಿತ್ರದ ಮೂಲಕ ಹಿಂತಿರುಗುತ್ತಿದ್ದಾರೆ. 'ಹೊಂಗನಸು' ರೀಮೇಕ್ ಅಲ್ಲದಿದ್ದರೂ ಈ ಚಿತ್ರ ಸೋತಿದ್ದು ನನ್ನನ್ನು ಬಹಳಷ್ಟು ಡಿಸ್ಟರ್ಬ್ ಮಾಡಿತು ಎನ್ನುತ್ತಾರೆ ರತ್ನಜ. ತಮ್ಮ ಬಹುನಿರೀಕ್ಷಿತ ಪ್ರೇಮಿಸಂ ಬಗ್ಗೆ ರತ್ನಜ ವಿವರ ನೀಡಿದ್ದಾರೆ.

''ಪ್ರೇಮಿಸಂ ಒಂದು ಅಪ್ಪಟ ಪ್ರೇಮಕಥೆ. ಕುಟುಂಬ ಮತ್ತು ಸಂಬಂಧಗಳ ಬಗೆಗಿನ ಕಥಾಹಂದರವನ್ನು ಒಳಗೊಂಡಿದೆ. 33 ದಿನಗಳ ಕಾಲ ಚಿತ್ರೀಕರಣವನ್ನು ಮುಗಿಸಿದ್ದೇವೆ. ಸವಾಲಿನಂತೆ ಸ್ವೀಕರಿಸಿ ಮೈಸೂರಿನಲ್ಲಿ ಚಿತ್ರೀಕರಿಸಿದ್ದೇವೆ. 'ನೆನಪಿರಲಿ' ಚಿತ್ರವನ್ನು ಮೈಸೂರಿನಲ್ಲಿ ಚಿತ್ರೀಕರಿಸಿದಾಗ ಕೆಲವೊಂದು ಕಡೆ ಅನುಮತಿ ನೀಡಿರಲಿಲ್ಲ. ಇದರಿಂದ ನಿಜಕ್ಕೂ ಅಸಮಾಧಾನವಾಗಿತ್ತು '' ಎಂದು ರತ್ನಜಾ ತಿಳಿಸಿದರು.

ಬೇಲೂರು ಮತ್ತು ಸೋಮನಾಥಪುರದಲ್ಲಿ ಚಿತ್ರೀಕರಿಸಲು ಪುರಾತತ್ವ ಇಲಾಖೆ ನಿರಾಕರಿಸಿತ್ತು. ಆದರೆ ರಜನಿಕಾಂತ್ ಚಿತ್ರವನ್ನು ಚಿತ್ರೀಕರಿಸಲು ಅನುಮತಿ ನೀಡಲಾಗಿತ್ತು ಎಂದು ಮತ್ತೊಮ್ಮೆ ಪುನರುಚ್ಚರಿಸಿದರು. ಪ್ರೇಮಿಸಂ ಚಿತ್ರದ ನಾಯಕಿ ಮಾತನಾಡುತ್ತಾ, ಬೆಳಗಾವಿಯಲ್ಲಿ ನನ್ನ ಅಭಿಮಾನಿಗಳ ಉತ್ಸಾಹವನ್ನು ನೋಡಿದಾಗ ನಿಜಕ್ಕೂ ಖುಷಿಯಾಯಿತು ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada