For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಸಾರಥಿ'ಗೆ ಬಿಡುಗಡೆ ಭಾಗ್ಯ ಯಾವಾಗ?

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಸಾರಥಿ' ಚಿತ್ರಕ್ಕೆ ಬಿಡುಗಡೆ ಭಾಗ್ಯ ಯಾವಾಗ ಗುರು ಎಂದು ಪ್ರೇಕ್ಷಕರು ಕೇಳುತ್ತಿದ್ದಾರೆ. ಆದರೆ ಚಿತ್ರ ತೆರೆಗೆ ಯಾವಾಗ ಬರುತ್ತದೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುತ್ತಿಲ್ಲ. ಕೆ ಸಿ ಎನ್ ಚಂದ್ರಶೇಖರ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

  ಚಿತ್ರ ಯಾಕಿಷ್ಟು ತಡವಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟವಾದ ಕಾರಣ ಯಾವುದೂ ಇಲ್ಲ. ಚಿತ್ರದ ನಿರ್ದೇಶಕ ದಿನಕರ್ ತೂಗುದೀಪ ಅವರನ್ನು ಕೇಳಿದರೂ ಅವರಿಂದಲೂ ಸಕಾರಾತ್ಮಕ ಉತ್ತರ ಸಿಗಲ್ಲ. ಕೆಲ ತಿಂಗಳ ಹಿಂದೆ ಪಾಂಡಿಚೆರಿಯಲ್ಲಿ ಚಿತ್ರದ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗಿತ್ತ್ತು. ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ತಮಿಳು ನಟ ಶರತ್ ಕುಮಾರ್ ಗಾಯಗೊಂಡಿದ್ದರು.

  ಶರತ್ ಕುಮಾರ್ ಗಾಯಗೊಂಡ ಸುದ್ದಿ ಹೊರತುಪಡಿಸಿದರೆ 'ಸಾರಥಿ' ಬಗ್ಗೆ ಸುಳಿವಿಲ್ಲ. ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ರವಿವರ್ಮ, ಪಳನಿರಾಜ್ ಸಾಹಸ, ಮದನ್ ಹರಿಣಿ, ಹರ್ಷ ಹಾಗೂ ರಾಮು ನೃತ್ಯ ಸಂಯೋಜನೆ ಮಾಡಿದ್ದಾರೆ.

  ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ದೀಪಾ ಸನ್ನಿಧಿ ಎಂಬ ಬೆಡಗಿಯ ಎರಡನೇ ಚಿತ್ರ 'ಪರಮಾತ್ಮ' ಸೆಟ್ಟೇರಲು ಸಿದ್ಧತೆ ನಡೆಸಿದೆ. ದರ್ಶನ್ ಅವರ 'ಬಾಸ್' ಚಿತ್ರವೂ ಬಿಡುಗಡೆಯಾಗಿದೆ. ಈಗ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ದರ್ಶನ್ ಬಿಜಿಯಾಗಿರುವ ಕಾರಣ 'ಸಾರಥಿ' ತಡವಾಗುತ್ತಿದೆ ಎನ್ನಲಾಗಿದೆ.

  English summary
  Kannada actor Darshan lead movie Sarathi release getting delayed. The real reason for the delay is yet to be known. Rangayana Raghu, Bullet Prakash, Tamil actor Sarath Kumar, Sitara are in cast. The movie is directing by Dinakar Toogudeepa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X