For Quick Alerts
  ALLOW NOTIFICATIONS  
  For Daily Alerts

  ನಿಂಬೆ ಹುಳಿ ನಿಂಬೆ ಹುಳಿ ಟೈಂ ಪಾಸ್ ನಿಂಬೆ ಹುಳಿ ಚಿತ್ರ

  By * ಚಿತ್ರಗುಪ್ತ
  |

  ಹೇಮಂತ್ ಹೆಗಡೆ ನಿರ್ದೇಶನದ ಹೊಸ ಚಿತ್ರದ ಹೆಸರು ಬದಲಾಗಿದೆ. ಈಗಾಗಲೇ ಅಂದುಕೊಂಡಿರುವಂತೇ ಆಗಿದ್ದರು ಅದು 'ಬಯ್ಯೋ ಭಾಮಾ, ಅಯ್ಯೋ ರಾಮಾ' ಎಂದು ಆಗಬೇಕಿತ್ತು. ಅದಕ್ಕೂ ಮುನ್ನ ನಿರ್ದೇಶಕ ಹೇಮಂತ್ ಹೆಗಡೆ ಅದಕ್ಕೆ 'ರಾಮ ರಾಮ ಶ್ರೀರಾಮ' ಎಂದು ಹೆಸರಿಡಬೇಕು ಎಂದುಕೊಂಡಿದ್ದರು.

  ಹೆಗಡೆ ಹೀಗೆ ಅಂದುಕೊಂಡಿದ್ದು ಆರು ತಿಂಗಳ ಹಿಂದೆ. ಆದರೆ, ನಿರ್ದೇಶಕ ರಘುರಾಜ್ ರಾಮ ರಾಮ ರಘುರಾಮ ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸಿ, ಇದೇ ವಾರ ತೆರೆಗೂ ತಂದುಬಿಟ್ಟರು. ಹೀಗಾಗಿ ಒಂದು ಹೆಸರಿನ ಅರ್ಧ ಭಾಗ ಬೇರೆಯವರ ಹತ್ತಿರ ಇದ್ದರೂ ಆ ಹೆಸರನ್ನು ಕೊಡಲಾಗುವುದಿಲ್ಲ ಎನ್ನುವುದು ಟೈಟಲ್ ಕೊಡುವ ಕಮೀಟಿಯ ರೂಲ್ಸು. ಹೀಗಾಗಿ ಹೆಗಡೆ ಅದೇ ಹೆಸರನ್ನು ಬಯ್ಯೋ ಭಾಮ, ಅಯ್ಯೋ ರಾಮ ಎಂದು ಬದಲಾಯಿಸಿದರು. ಕೊನೆಗೆ ಅದೂ ಯಾಕೋ ಅವರಿಗೆ ಇಷ್ಟವಾಗಿಲ್ಲ.

  ಕೊನೆಯದಾಗಿ ಅವರು ಚಿತ್ರಕ್ಕೆ 'ನಿಂಬೆಹುಳಿ' ಎಂಬ ಹೆಸರು ಇಟ್ಟಿದ್ದಾರೆ. ಹೆಸರು ಕೇಳಲು ಒಂಥರಾ ಹುಳಿ ಹುಳಿ ಎನಿಸಿದರೂ ಕಾಮಿಡಿ ಚಿತ್ರಕ್ಕೆ ಒಂಥರಾ ಮಜಾ ಇದೆ ಅಲ್ವಾ?!ಅಂದಹಾಗೇ ನಿಂಬೆ ಹುಳಿ, ನಿಂಬೆಹುಳಿ ಎಂಬ ಹಾಡು 'ತಾಕತ್' ಚಿತ್ರದಲ್ಲಿದೆ. ಮಂಡ್ಯ ರಮೇಶ್ ಅವರು "ಜಿಂಗೀ-ಚಕ್ಕಾ" ಎನ್ನುತ್ತಾ ಬಸ್ಸಿನಲ್ಲಿ ಚಾಕಲೇಟ್ ಮಾರುವಾಗ ನಿಂಬೆ ಹುಳೀ.. ನಿಂಬೆ ಹುಳೀ ಎಂದು ರಾಗ ಎಳೆಯುತ್ತಾರೆ!

  English summary
  Kannada film maker Hemanth Hegde has initially given the title for his film Bayyo Bhama Ayyo Rama. According to sources, the title is now being changed and 'Nimbe Huli' is being actively considered. The director is said to have believed that the title Bayyo Bhama Ayyo Rama may not correctly reflect the theme of the film and hence the change in title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X