For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಬಾಯ್ ಫ್ರೆಂಡ್ ಪೋರ್ಚುಗಲ್ ಉದ್ಯಮಿ

  By Rajendra
  |

  ರಮ್ಯಾ ಮತ್ತು 'ದಂಡಂ ದಶಗುಣಂ' ವಿವಾದ ತಣ್ಣಗಾಗಿದೆ. ಮಳೆ ನಿಂತ ಮೇಲೂ ಮರದ ಹನಿಯಂತೆ ರಮ್ಯಾ ಬಗ್ಗೆ ಹಲವಾರು ರೋಚಕ ಸಂಗತಿಗಳು ಗಾಂಧಿನಗರದಲ್ಲಿ ಸರಿದಾಡುತ್ತಿವೆ. ರಮ್ಯಾಗೆ ಒಬ್ಬ ಬಾಯ್ ಫ್ರೆಂಡ್ ಇರುವುದು. ಇಷ್ಟು ದಿನ ಆ ರಹಸ್ಯವನ್ನು ಗೌಪ್ಯವಾಗಿ ಕಾಪಾಡಿಕೊಂಡು ಬಂದಿರುವುದು ಈಗ ಸುದ್ದಿಯಾಗಿದೆ.

  ಕೆಲ ದಿನಗಳ ಹಿಂದೆ ರಮ್ಯಾ ಯೂರೋಪ್ ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಆಗಲೇ ಈ ಗುಸುಗುಸು ಸುದ್ದಿ ದಟ್ಟವಾಗಿ ಹಬ್ಬಿದ್ದು. ರಮ್ಯಾ ಒಂದು ತಿಂಗಳು ಯೂರೋಪ್ ಟೂರ್ ಮುಗಿಸಿಕೊಂಡು ಬರುವ ಹೊತ್ತಿಗೆ ಗಾಂಧಿನಗರದಲ್ಲಿ ಆಕೆಯ ಬಾಯ್ ಫ್ರೆಂಡ್ ಗಾಳಿ ಸಮಾಚಾರ ಹಬ್ಬಿದೆ. ಆದರೆ ಇದು ನಿಜ ಎನ್ನುತ್ತಿದ್ದಾರೆ ಸ್ವತಃ ರಮ್ಯಾ.

  ಪೋರ್ಚುಗಲ್ ಮೂಲದ ಈತ ಭಾರಿ ಉದ್ಯಮಿಯಾಗಿದ್ದು ಐಪಿಎಲ್ ಪಂದ್ಯಾವಳಿ ವೀಕ್ಷಿಸಲು ಏಪ್ರಿಲ್ 12ರಂದು ಬೆಂಗಳೂರಿಗೆ ಬರುತ್ತಿರುವುದಾಗಿ ರಮ್ಯಾ ಹೇಳಿಕೊಂಡಿದ್ದಾರೆ. ಈತನೇ ತನ್ನ ಬಾಯ್ ಫ್ರೆಂಡ್ ಎಂಬ ಸುಳಿವನ್ನು ರಮ್ಯಾ ನೀಡಿದ್ದಾರೆ. ಈಗ ಆತನ ನಿರೀಕ್ಷೆಯಲ್ಲಿದ್ದಾರೆ ರಮ್ಯಾ.

  ತನ್ನ ಬಾಯ್ ಫ್ರೆಂಡ್ ಬಗ್ಗೆ ರಮ್ಯಾ ಹೇಳಿರುವುದಿಷ್ಟು,"ಈತ ಒಬ್ಬ ಉದ್ಯಮಿ.ಇವರ ಪೋಷಕರು ಯೂರೋಪಿನ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ ಅತ್ಯಧಿಕ ಷೇರುಗಳನ್ನು ಹೊಂದಿದ್ದಾರೆ. ಇವರ ತಂದೆ ಪೋರ್ಚುಗಲ್‌ನಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು ಅಲ್ಲಿನ ಆರ್ಥಿಕ ತೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ " ಎಂದಿದ್ದಾರೆ.

  ಪೋರ್ಚುಗೀಸ್ ಭಾಷೆಯನ್ನು ಕಲಿಯಲು ಯೂರೋಪ್ ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾಗಿ ರಮ್ಯಾ ಹೇಳಿದ್ದಾರೆ. ಈಗ ತನ್ನ ಬಾಯ್ ಫ್ರೆಂಡ್ ಬೆಂಗಳೂರಿಗೆ ಬರುತ್ತಿರುವ ಬಗ್ಗೆ ರಮ್ಯಾ ಎಕ್ಸೈಟ್ ಆಗಿದ್ದಾರೆ. ಸಂಕೋಚ ಸ್ವಭಾವದಅವರು ಸದಾ ಮಾಧ್ಯಮಗಳಿಂದ ದೂರ ಇರುತ್ತಾರೆ ಎಂದೂ ರಮ್ಯಾ ಆತನ ಬಗ್ಗೆ ವಿವರ ನೀಡಿದ್ದಾರೆ.

  English summary
  After Sanju Weds Geetha release, Kannada actress Ramya has opened up about her secret boyfriend. She revealed that she is in love with Portugal-based entrepreneur, who is now coming Bangalore to watch the IPL-4 match.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X