»   » ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ನವರಸ ನಾಯಕ ಅಧ್ಯಕ್ಷ?

ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ನವರಸ ನಾಯಕ ಅಧ್ಯಕ್ಷ?

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ನವರಸ ನಾಯಕ ಜಗ್ಗೇಶ್ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಏಪ್ರಿಲ್ 30ರಂದು ಚುನಾವಣೆ ನಡೆಯಲಿದ್ದು, ಚಿತ್ರರಂಗದ ಘಟಾನು ಘಟಿ ನಿರ್ಮಾಪಕರೆಲ್ಲಾ ಜಗ್ಗೇಶ್ ಬೆನ್ನಿಗಿದ್ದಾರೆ ಎಂಬ ಖಚಿತ ಮಾಹಿತಿ ಗಾಂಧಿನಗರದಿಂದ ಬಂದಿದೆ. ಜಗ್ಗೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎಂಬ ಮಾತುಗಳು ಕೇಳಿಬಂದಿವೆ.

ಗೋಲ್ಡನ್ ಗರ್ಲ್ ರಮ್ಯಾ ಅವರ 'ದಂಡಂ ದಶಗುಣಂ' ಘಟನೆ ನಿರ್ಮಾಪಕರ ಸಂಘದಲ್ಲಿ ಬದಲಾವಣೆ ಗಾಳಿ ಬೀಸುವಂತೆ ಮಾಡಿದೆ. ನಟ ಹಾಗೂ ನಿರ್ಮಾಪಕರೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಅತ್ತ ನಿರ್ಮಾಪಕರ ಇತ್ತ ಕಲಾವಿದರ ಸಮಸ್ಯೆಗಳು ಸುಲಭ ಪರಿಹಾರ ಕಾಣುತ್ತವೆ ಎಂಬ ಲೆಕ್ಕಾಚಾರದಲ್ಲಿ ಜಗ್ಗೇಶ್ ಅವರನ್ನು ಆಯ್ಕೆ ಮಾಡಲಾಗುತ್ತಿದೆ.

ಈಗಾಗಲೆ ರಾಜಕೀಯದಲ್ಲೂ ಒಂದಷ್ಟು ಏಳುಬೀಳುಗಳನ್ನು ಕಂಡಿರುವ ಜಗ್ಗೇಶ್ ಅವರಿಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಪಟ್ಟ ಅಷ್ಟೋನು ಕಷ್ಟವಾಗಲಾರದು. ಕೇವಲ ಬೆರಳೆಣಿಕೆಯಷ್ಟು ಚಿತ್ರಗಳನ್ನು ನಿರ್ಮಿಸಿರುವ ಜಗ್ಗೇಶ್ ಅವರಿಗೆ ಅನುಭವ ಸಾಲದು ಎಂಬ ಮಾತುಗಳು ಕೇಳಿಬಂದಿವೆ. ಆದಾಗ್ಯೂ ಸಂಘದಲ್ಲಿ ಹೊಸಬರಿಗೆ ಮಣೆ ಹಾಕೋಣ ಎಂಬ ಬದಲಾವಣೆಯ ಪರ್ವ ಶುರುವಾಗಿದೆ.

English summary
Actor and producer Jaggesh is likely to become the President of the Karnataka Film Producers Association (KFPA). The elections are to be held on April 30. Sources says that most of the producers are supporting Jaggesh for the post.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada