»   » ಧೋನಿ ಮಧುಚಂದ್ರಕೆ ನ್ಯೂಜಿಲ್ಯಾಂಡ್ ಆಹ್ವಾನ

ಧೋನಿ ಮಧುಚಂದ್ರಕೆ ನ್ಯೂಜಿಲ್ಯಾಂಡ್ ಆಹ್ವಾನ

Posted By:
Subscribe to Filmibeat Kannada

ನೂತನ ದಾಂಪತ್ಯಕ್ಕೆ ಅಡಿಯಿಟ್ಟಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಧುಚಂದ್ರಕೆ ಸಿದ್ಧತೆ ನಡೆಸಿದ್ದಾರೆ. ಹನಿಮೂನ್ ಗಾಗಿ ನಮ್ಮ ದೇಶಕ್ಕೆ ಬನ್ನಿ ಎಂದು ಕ್ವೀನ್ಸ್ ಟೌನ್ ಪ್ರವಾಸೋದ್ಯಮ ಇಲಾಖೆ ಧೋನಿ ದಂಪತಿಗಳನ್ನು ಆಹ್ವಾನಿಸಿದೆ. ತನ್ನ ಬಾಳ ಸಂಗಾತಿ ಸಾಕ್ಷಿ ಸಿಂಗ್ ರಾವತ್ ಹಾಗೂ ಧೋನಿ ಕೈಕೈ ಹಿಡಿದು ಮಧುಚಂದ್ರಕೆ ಹೊರಡುವುದೊಂದು ಬಾಕಿ ಇದೆ.

ಮಧುಚಂದ್ರ ಆಚರಿಸಿಕೊಳ್ಳಲು ನ್ಯೂಜಿಲ್ಯಾಂಡ್ ಹೇಳಿ ಮಾಡಿಸಿದಂತಂಹ ಸ್ಥಳ ಎಂಬ ಮಾತನ್ನು ಧೋನಿ ಸಹ ಒಪ್ಪುತ್ತಾರೆ. ಕಳೆದ ವರ್ಷ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಧೋನಿಗೆ ಅಲ್ಲಿನ ಅಂದಚೆಂದಗಳನ್ನು ಕಣ್ಣಾರೆ ಕಂಡು ಸ್ವಪ್ನಲೋಕದಲ್ಲಿ ಒಂದು ಸುತ್ತು ಹಾಕಿಕೊಂಡು ಬಂದಿದ್ದರಂತೆ. ಇದನ್ನು ಮನಗಂಡಿರುವ ಅಲ್ಲಿನ ಪ್ರವಾಸೋದ್ಯಮ ಇಲಾಖೆ ಧೋನಿಗೆ ಆಹ್ವಾನ ನೀಡಿದೆ.

ಗಾಲ್ಫ್, ಫಿಶಿಂಗ್, ಸ್ವಾದಿಷ್ಟ ಆಹಾರ, ವಿನೂತನ ರೀತಿಯ ವೈನ್ ಗಳು, ಮಂಜುನಿಂದ ಕೂಡಿದ ಬೆಟ್ಟಗುಡ್ಡಗಳಿಗೆ ಕ್ವೀನ್ಸ್ ಟೌನ್ ಹೆಸರುವಾಸಿ. ಚಾರಣಿಗರ ರಾಜಧಾನಿ ಎನ್ನಬಹುದು. ನ್ಯೂಜಿಲ್ಯಾಂಡ್ ನಿಂದ ಧೋನಿ ದಂಪತಿಗಳಿಗೆ ಆಹ್ವಾನವೇನು ಬಂದಿದೆ. ಆದರೆ ಈ ಬಗ್ಗೆ ಧೋನಿ ಮಾತ್ರ ಇನ್ನೂ ಮೀನಾಮೇಷ ಎಣಿಸುತ್ತಿದ್ದಾನೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada