»   » ತುಮಕೂರಿನಲ್ಲಿ ಹುಲಿ ಆರ್ಭಟ

ತುಮಕೂರಿನಲ್ಲಿ ಹುಲಿ ಆರ್ಭಟ

Posted By:
Subscribe to Filmibeat Kannada

ಕಳೆದ ವಾರ ಅದ್ದೂರಿ ಮುಹೂರ್ತ ಸಮಾರಂಭದೊಂದಿಗೆ ಆರಂಭವಾದ 'ಹುಲಿ ಚಿತ್ರದ ಚಿತ್ರೀಕರಣ ಈಗ ತುಮಕೂರಿನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಆ ನಗರದಲ್ಲೊಬ್ಬ ಪ್ರತಿಷ್ಠಿತ ವ್ಯಕ್ತಿ. ಆತನಿಗೊಬ್ಬ ತಮ್ಮ. ತಮ್ಮನಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಹಂಬಲ. ಈತನ ಸ್ಪರ್ಧೆಗೆ ಅಡ್ಡ ಬರುವ ಪೊಲೀಸ್ ಅಧಿಕಾರಿ. ಈ ವಿಷಯ ತಿಳಿದು ಆವೇಶಗೊಂಡ ಸ್ಪರ್ಧಾಕಾಂಕ್ಷಿಯ ಕಡೆಯವರಿಂದ ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನ. ತನ್ನ ಮೇಲೆ ಹಲ್ಲೆ ನಡೆಸಲು ಮುಂದಾದವರ ಮೇಲೆ ಅಧಿಕಾರಿಯಿಂದ ತಕ್ಕ ಶಾಸ್ತಿ.

ಈ ಸನ್ನಿವೇಶವನ್ನು 'ಹುಲಿ ಚಿತ್ರಕ್ಕಾಗಿ ನಿರ್ದೇಶಕ ಓಂಪ್ರಕಾಶ್‌ರಾವ್ ತುಮಕೂರಿನಲ್ಲಿ ಚಿತ್ರೀಕರಿಸಿಕೊಂಡರು. ಪ್ರತಿಷ್ಠಿತ ವ್ಯಕ್ತಿ ಪಾತ್ರದಲ್ಲಿ ಶೋಭ್‌ರಾಜ್. ಅವರ ತಮ್ಮನಾಗಿ ಪ್ರೇಮ್, ಪೊಲೀಸ್ ಅಧಿಕಾರಿಯಾಗಿ ಕಿಶೋರ್ ಅಭಿನಯಿಸಿದ ಈ ದೃಶ್ಯದಲ್ಲಿ ಆದಿಲೋಕೇಶ್, ನಟರಾಜ್ ಹಾಗೂ ಸಹಕಲಾವಿದರು ಭಾಗವಹಿಸಿದ್ದರು.ಶಿವು ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿ.ಎಸ್.ಸುಧೀಂದ್ರ ಹಾಗೂ ಶಿವಪ್ರಕಾಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮನೋಹರ್ ಅವರ ಛಾಯಾಗ್ರಹಣವಿದೆ.

ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಅಭಿಮಾನ್‌ರಾಯ್ ಸಂಗೀತ, ಡೆನ್ನಿಸಾ ಪ್ರಕಾಶ್ ಕಥೆ, ಡಿ.ಮನೋಹರ್ ಚಿತ್ರಕಥೆ, ಪಳನಿರಾಜ್ ಸಾಹಸ ಹಾಗೂ ಇಸ್ಮಾಯಿಲ್ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಕಿಶೋರ್, ಜನ್ನಿಫರ್, ಸ್ವಸ್ತಿಕ್‌ಶಂಕರ್, ಆದಿಲೋಕೇಶ್, ಪ್ರೇಮ್, ಶೋಭ್‌ರಾಜ್, ಶ್ರೀನಿವಾಸಮೂರ್ತಿ, ಅವಿನಾಶ್, ಮಾಳವಿಕಾ, ಸುಮಿತ್ರಾ, ಚಿತ್ರಾಶೆಣೈ ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada