»   » 'ಮದುವೆ ಮನೆ'ಯ ಮದುಮಗಳು ಶ್ರದ್ಧಾ ಆರ್ಯ

'ಮದುವೆ ಮನೆ'ಯ ಮದುಮಗಳು ಶ್ರದ್ಧಾ ಆರ್ಯ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಗೆ ಕಡೆಗೂ ಹೊಸ ಬೆಡಗಿ ಸಿಕ್ಕಿದ್ದಾಳೆ, ಹೆಸರು ಶ್ರದ್ಧಾ ಆರ್ಯಾ! ಹಿಂದಿ, ತೆಲುಗು, ತಮಿಳಿನ ಅನೇಕ ಚಿತ್ರಗಳಲ್ಲಿ ಶ್ರದ್ಧಾ ಆರ್ಯ ಅಭಿನಯಿಸಿದ್ದಾರೆ. ಈ ಹಿಂದೆಯೇ ಗಣೇಶ್ ಜೊತೆ 'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ನಟಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆಕೆಯ ಸ್ಥಾನಕ್ಕೆ ಯಾಮಿ ಗೌತಮ್ ಬಂದಿದ್ದರು.

'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ತಪ್ಪಿದ ಅವಕಾಶ 'ಮದುವೆ ಮನೆ'ಯಲ್ಲಿ ಕೈಹಿಡಿದಿದೆ. ಏ.12ರಿಂದ ಚಿತ್ರೀಕರಣ ಆರಂಭಿಸಲಿರುವ ಗಣೇಶರ ಹೊಸ ಚಿತ್ರ 'ಮದುವೆ ಮನೆ'ಯ ಮದುಮಗಳು ಈಕೆ. 'ಯಜಮಾನ', 'ಹುಚ್ಚ' ತರಹದ ಹಿಟ್ ಚಿತ್ರಗಳ ನಿರ್ಮಾಪಕ ಎಚ್ ಎ ರಹಮಾನ್ ಮತ್ತು ರುಹಿನಾ ರಹಮಾನ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

'ಮದುವೆ ಮನೆ'ಗೆ ಆಕ್ಷನ್, ಕಟ್ ಹೇಳುತ್ತಿರುವವರು ಸುನೀಲ್ ಕುಮಾರ್ ಸಿಂಗ್. ಶೇಖರ್ ಚಂದ್ರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ಚಿತ್ರಕ್ಕಿದೆ. ಸದ್ಯಕ್ಕೆ ಗಣೇಶರ ಹೊಸ ಚಿತ್ರದ ನಾಯಕಿ ಯಾರು ಎಂಬ ಬಗ್ಗೆ ಇದ್ದ ಕುತೂಹಲಕ್ಕೆ ತೆರೆಬಿದ್ದಿದೆ. ಒಟ್ಟಾರೆಯಾಗಿ ಉಲ್ಲಾಸ ಉತ್ಸಾಹದಿಂದ ಶ್ರದ್ಧಾ ಆರ್ಯರನ್ನು ಗಣೇಶ್ ಮದುವೆ ಮನೆಗೆ ಕರೆತಂದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada