»   » ಗುರುಪ್ರಸಾದ್ 'ಡೈರೆಕ್ಟರ್ಸ್ ಸ್ಪೆಷಲ್'ಗೆ ಉಪೇಂದ್ರ

ಗುರುಪ್ರಸಾದ್ 'ಡೈರೆಕ್ಟರ್ಸ್ ಸ್ಪೆಷಲ್'ಗೆ ಉಪೇಂದ್ರ

Posted By:
Subscribe to Filmibeat Kannada

ಕೋಮಲ್ ಗೆ ಬೇಡವಾಗಿದ್ದ 'ಡೈರೆಕ್ಟರ್ಸ್ ಸ್ಪೆಷಲ್' ಉಪೇಂದ್ರನಿಗೆ ಒಲಿಯಿತೆ? ಈ ಬಗ್ಗೆ ಗಾಂಧಿನಗರದಲ್ಲಿ ಹೊಸ ಸುದ್ದಿ ಹಬ್ಬಿದೆ. 'ಡೈರೆಕ್ಟರ್ಸ್ ಸ್ಪೆಷಲ್' ಎಂಬ ಹೊಸ ಚಿತ್ರವನ್ನು 'ಮಠ' ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಕೈಗೆತ್ತಿಕೊಂಡಿರುವುದು ಗೊತ್ತೆ ಇದೆಯಲ್ಲಾ. ಕತೆ ಹಳೆಯದು ಎಂಬ ಕಾರಣ ನೀಡಿ 'ಡೈರೆಕ್ಟರ್ಸ್ ಸ್ಪೆಷಲ್'ನಿಂದ ಕೋಮಲ್ ಹೊರಬಿದ್ದ ಸುದ್ದಿಯೂ ಗಾಂಧಿನಗರದಲ್ಲಿ ಗುಲ್ಲೆಬ್ಬಿಸಿತ್ತು.

ಕೋಮಲ್ ನಿರಾಕರಿಸಿದ ಪಾತ್ರಕ್ಕೆ ಸೂಕ್ತ ನಾಯಕನನ್ನು ತರಲು ಗುರುಪ್ರಸಾದ್ ತೀವ್ರ ಪ್ರಯತ್ನದಲ್ಲಿದ್ದಾರೆ. ಗಾಂಧಿನಗರ ಮೂಲಗಳ ಪ್ರಕಾರ, ಆ ಸ್ಥಾನವನ್ನು ರಿಯಲ್ ಸ್ಟಾರ್ ಉಪೇಂದ್ರ ತುಂಬಲಿದ್ದಾನೆ. ಕತೆ, ಚಿತ್ರಕತೆ, ಪಾತ್ರದ ಬಗ್ಗೆ ಉಪೇಂದ್ರ ಬಳಿ ಗುರು ಗಹನವಾದ ಚರ್ಚೆಯಲ್ಲಿ ಮುಳುಗಿದ್ದಾರೆ ಎನ್ನುತ್ತವೆ ಮೂಲಗಳು.

ಗುರು ಪ್ರಯತ್ನ ಫಲಿಸಿದ್ದೇ ಆದರೆ 'ಡೈರೆಕ್ಟರ್ಸ್ ಸ್ಪೆಷಲ್' ಉಪೇಂದ್ರನಿಗೆ ಒಲಿಯುವ ದಿನಗಳು ದೂರದಲ್ಲಿಲ್ಲ. ವಿಭಿನ್ನ ಪಾತ್ರಗಳೆಂದರೆ ಉಪೇಂದ್ರ ಸದಾ ಮುಂದು. ಇದನ್ನ್ನು ಅರ್ಥ ಮಾಡಿಕೊಂಡೆ ಉಪೇಂದ್ರ ಜತೆಗೆ ಮಾತುಕತೆಗೆ ಕೂತಿದ್ದಾರೆ ಗುರುಪ್ರಸಾದ್. ಒಂದು ವೇಳೆ ಉಪೇಂದ್ರ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದರೆ 'ಎ' ಚಿತ್ರದ ಬಳಿಕ ನಿರ್ದೇಶಕನಾಗಿ ಅವರ ನಟನೆಯ ಎರಡನೇ ಚಿತ್ರವಾಗಲಿದೆ 'ಡೈರೆಕ್ಟರ್ಸ್ ಸ್ಪೆಷಲ್'!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada