»   »  ಆತ್ಮಕತೆ ಬರೆಯಲು ಹೊರಟ ನಟಿ ಭುವನೇಶ್ವರಿ!

ಆತ್ಮಕತೆ ಬರೆಯಲು ಹೊರಟ ನಟಿ ಭುವನೇಶ್ವರಿ!

Subscribe to Filmibeat Kannada

ಇತ್ತೀಚೆಗಷ್ಟೇ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಕೊಂಡಿದ್ದ ಖ್ಯಾತ ನಟಿ ಭುವನೇಶ್ವರಿ ಆತ್ಮಕತೆ ಬರೆಯಲು ಹೊರಟಿದ್ದಾರೆ. ತಮ್ಮ ಆತ್ಮಕತೆಯಲ್ಲಿ ರಹಸ್ಯ ಸಂಗತಿಗಳನ್ನು ಬಹಿರಂಗಪಡಿಸುವುದಾಗಿ ಭುವನೇಶ್ವರಿ ಹೇಳಿದ್ದಾರೆ. ಕೈಗೆ ಪೆನ್ನು ಎತ್ತಿಕೊಂಡಿರುವ ಭುವನೇಶ್ವರಿಯನ್ನು ತಮಿಳು ಚಿತ್ರೋದ್ಯಮ ಗಂಭೀರವಾಗಿ ಪರಿಗಣಿಸಿದೆ.

ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸರು ಆಕೆಯನ್ನು ದಸ್ತಗಿರಿ ಮಾಡಿದ್ದರು. ಚೆನ್ನೈನ ಅಡ್ಯಾರ್ ನಗರದ ಮನೆಯ ಮೇಲೆ ದಾಳಿ ಮಾಡಿದಾಗ ಇಬ್ಬರು ಹುಡುಗಿಯರೊಂದಿಗೆ ಭುವನೇಶ್ವರಿ ಪೊಲೀಸರಿಗೆ ಸೆರೆ ಸಿಕ್ಕಿದ್ದರು.

ವೇಶ್ಯಾವಾಟಿಕೆ ದಂಧೆಯಲ್ಲಿ ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಹಲವಾರು ನಟಿಯರು ಶಾಮೀಲಾಗಿದ್ದಾರೆ ಎಂದು ತಮಿಳಿನ ಜನಪ್ರಿಯ ದೈನಿಕಕ್ಕೆ ಭುವನೇಶ್ವರಿ ತಿಳಿಸಿದ್ದರು. ಹಾಗೆಯೇ ತಮ್ಮ ಮೇಲೆ ಮಾಡಿರುವ ಅರೋಪಗಳಲ್ಲಿ ಹುರುಳಿಲ್ಲ.ತಾವು ಯಾವುದೇ ದಂಧೆಯಲ್ಲಿ ಶಾಮೀಲಾಗಿಲ್ಲ. ಸಾಕ್ಷ್ಯಾಧಾರಗಳಿದ್ದರೆ ಋಜುವಾತು ಮಾಡಿ ಎಂದು ಭುವನೇಶ್ವರಿ ಸವಾಲೆಸಿದ್ದಾರೆ. ಚೆನ್ನೈ ಪೊಲೀಸರ ತನಿಖೆ ಮುಂದುವರಿದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada