»   »  ಬಿಜೆಪಿ ಪರ ಪ್ರಚಾರಕ್ಕೆ ನಟ ದರ್ಶನ್, ರಕ್ಷಿತಾ, ಶ್ರುತಿ

ಬಿಜೆಪಿ ಪರ ಪ್ರಚಾರಕ್ಕೆ ನಟ ದರ್ಶನ್, ರಕ್ಷಿತಾ, ಶ್ರುತಿ

Posted By:
Subscribe to Filmibeat Kannada
Darshan
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕೀಯ ವಲಯದಲ್ಲಿ ತಾಪಮಾನ ಏರುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ವಿಭಿನ್ನ ರೀತಿಯ ಪ್ರಚಾರ ಕಾರ್ಯಕ್ಕೆ ಸಜ್ಜಾಗುತ್ತಿದ್ದರೆ ಭಾರತೀಯ ಜನತಾ ಪಕ್ಷ ಕನ್ನಡ ಚಿತ್ರರಂಗದ ತಾರೆಗಳಿಗೆ ಗಾಳ ಹಾಕಿದೆ.

ಬಿಜೆಪಿ ಮೂಲಗಳ ಪ್ರಕಾರ, ನಟ ದರ್ಶನ್, ಶ್ರುತಿ ಮಹೇಂದರ್ ಮತ್ತು ರಕ್ಷಿತಾರನ್ನು ಚುನಾವಣೆ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಂತೆ. ಪ್ರಚಾರ ಕಾರ್ಯಕ್ಕೆ ಮತ್ತಷ್ಟು ತಾರೆಗಳನ್ನು ಕರೆತರಲು ಬಿಜೆಪಿ ಕಸರತ್ತು ಮುಂದುವರಿದಿದೆ. ಮುಖ್ಯವಾಗಿ ಈ ತಾರೆಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ಮತಗಳನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಬಹುದು ಎಂಬುದು ಬಿಜೆಪಿ ಪಕ್ಷದ ಯೋಜನೆ.

ಪ್ರಚಾರ ಕಾರ್ಯಕ್ಕಾಗಿ ಈಗಾಗಲೇ ಬಿಜೆಪಿ ಅನಿಮೇಶನ್ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಅದರಲ್ಲಿನ ಎಲ್ ಕೆ ಅಡ್ವಾಣಿ, ಕಾರ್ಗಿಲ್ ಯುದ್ಧದ ಜಯ ಮುಂತಾದ ಅಸ್ತ್ರಗಳು ಪ್ರಯೋಗಕ್ಕೆ ಸಿದ್ಧವಾಗಿವೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್ ಕೆ ಅದ್ವಾಣಿಯನ್ನು ಸರ್ದಾರ್ ವಲ್ಲಭಬಾಯಿ ಪಟೇಲ್ ಎಂದೇ ಬಿಂಬಿಸಲಾಗಿದೆ. ಏತನ್ಮಧ್ಯೆ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರಿಗೂ ಬಿಜೆಪಿ ಗಾಳ ಬೀಸಿದ್ದು, ಬಹುತೇಕ ಅವರು ಬಲೆಗೆ ಬಿದ್ದಿದ್ದು ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೊರ್ಕಿಯಾಗಿ ದರ್ಶನ್,ಏಪ್ರಿಲ್‌ನಿಂದ ಚಿತ್ರೀಕರಣ
ನಗೆದೋಣಿಯೇರಿದ ಅಳುಮುಂಜಿ ಶ್ರುತಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada