»   » ಇದೇ ತಿಂಗಳಲ್ಲಿ ಪುನೀತ್ 'ರಾಮ್' ತೆರೆಗೆ

ಇದೇ ತಿಂಗಳಲ್ಲಿ ಪುನೀತ್ 'ರಾಮ್' ತೆರೆಗೆ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ನಾಯಕನಾಗಿ ನಟಿಸಿರುವ 'ರಾಮ್' ಚಿತ್ರಕ್ಕೆ ಪ್ರಥಮಪ್ರತಿ ಸಿದ್ದವಾಗಿದ್ದು, ಇದೇ ತಿಂಗಳಲ್ಲಿ ತೆರೆಗೆ ಬರಲಿದೆ. ಆದಿತ್ಯಬಾಬು 'ಅಂತು ಇಂತು ಪ್ರೀತಿ ಬಂತು' ಚಿತ್ರವನ್ನು ನಿರ್ಮಿಸಿ, ನಾಯಕನಾಗಿ ನಟಿಸುವುದರೊಂದಿಗೆ ಕನ್ನಡ ಚಿತ್ರರಸಿಕರಿಗೆ ಚಿರಪರಿಚಿತರಾದವರು. ಈಗ ಅವರ ಸಂಸ್ಥೆಯ ದ್ವಿತೀಯ ಕಾಣಿಕೆ 'ರಾಮ್ 'ಕೂಡ ಬಿಡುಗಡೆಗೆ ಸಿದ್ದವಾಗಿದೆ. ಆದಿತ್ಯ ಆರ್ಟ್ಸ್ ಎಮ್.ಸಿ.ಎಲ್ ಲಾಂಛನದಲ್ಲಿ ಆದಿತ್ಯಬಾಬು ರಾಮ್ ಚಿತ್ರವನ್ನು ನಿರ್ಮಿಸಿದ್ದಾರೆ.

ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಪುನೀತ್‌ರಾಜಕುಮಾರ್ ನಾಯಕಿಯಾಗಿ ಖ್ಯಾತ ಅಭಿನೇತ್ರಿ ಪ್ರಿಯಾಮಣಿ ಅಭಿನಯಿಸಿದ್ದಾರೆ. ಪ್ರಿಯಾಮಣಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದ ಖ್ಯಾತಿ ಆದಿತ್ಯಬಾಬು ಅವರದು. 'ಗಜ' ಖ್ಯಾತಿಯ ಕೆ.ಮಾದೇಶ್ 'ರಾಮ್' ನಿರ್ದೇಶಿಸಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಸಿಡಿಗಳು ಭರದಿಂದ ಮಾರಾಟವಾಗುತ್ತಿದೆ.

ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ದೀಪು.ಎಸ್.ಕುಮಾರ್ ಸಂಕಲನ, ಪಳನಿರಾಜ್, ರವಿವರ್ಮ ಸಾಹಸ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಪುನೀತ್‌ರಾಜಕುಮಾರ್, ಪ್ರಿಯಾಮಣಿ, ರಂಗಾಯಣ ರಘು, ಸಾಧುಕೋಕಿಲಾ, ಶ್ರೀನಾಥ್, ಸಂಗೀತಾ, ಚಿತ್ರಾಶೆಣೈ, ಜ್ಯೋತಿ, ದೊಡ್ಡಣ್ಣ, ಪದ್ಮಾವಾಸಂತಿ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada