»   »  ಕೆಂಗೇರಿ ಗಾಂಧಿ ಆಶ್ರಮಕ್ಕೆ ರಾವಣನ ಭೇಟಿ

ಕೆಂಗೇರಿ ಗಾಂಧಿ ಆಶ್ರಮಕ್ಕೆ ರಾವಣನ ಭೇಟಿ

Posted By:
Subscribe to Filmibeat Kannada
yogish
ರಾವಣ ಪದ ಕೇಳಿದ ಕ್ಷಣ ಯಾವುದೋ ಐತಿಹಾಸಿಕ ಸಿನೆಮಾ ಅನಿಸುವುದು ಸಹಜ. ಆದರೆ ಈ ರಾವಣ ಇತಿಹಾಸದ ವ್ಯಕ್ತಿ ಅಲ್ಲ. ಆಧುನಿಕ. ರಾಮಾಯಣದ ರಾವಣ ಅಸುರ ಕುಲದ ಪ್ರತೀಕನಾದರೂ ಅವನಲ್ಲೂ ಪ್ರೀತಿ ಎಂಬುದಿತ್ತು. ಆತನಲ್ಲಿದ್ದ ಪ್ರೀತಿಯನ್ನು ಬಿಂಬಿಸುವ ಸಲುವಾಗಿ ನಮ್ಮ ಚಿತ್ರಕ್ಕೆ ಈ ಹೆಸರನ್ನು ಸೂಚಿಸಿಕೊಳ್ಳಲಾಗಿದೆ ಎಂದು ನಿರ್ದೇಶಕ ಯೋಗೀಶ್‌ಹುಣಸೂರು ತಿಳಿಸಿದ್ದಾರೆ. ಪ್ರಸ್ತುತ ರಾವಣನಿಗೆ ಭರದ ಚಿತ್ರೀಕರಣ ನಡೆಯುತ್ತಿದೆ.

ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ಯೋಗೀಶ್ ಹಳ್ಳಿಯಲ್ಲಿನ ಅನಾಥಾಶ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ದ್ವಿತೀಯ ಪಿ.ಯು.ಸಿವರೆಗೂ ವ್ಯಾಸಂಗ ಮಾಡಲು ಅನುಕೂಲವಿರುವ ಹಳ್ಳಿಯದು. ಅಲ್ಲಿ ದ್ವಿತೀಯ ಪಿ.ಯು.ಸಿ ಮುಗಿಸಿದ ಯೋಗೀಶ್‌ಗೆ ನಗರದಲ್ಲಿ ಇಂಜಿನಿಯರಿಂಗ್ ಸೀಟು ದೊರಕುತ್ತದೆ. ಆದರೆ ನಗರ ಜೀವನ ನಾಯಕನಿಗೆ ಹಿಡಿಸದ ಕಾರಣ ಸಿಕ್ಕ ಅವಕಾಶ ಕಳೆದುಕೊಳ್ಳಲು ಮುಂದಾಗುತ್ತಾನೆ. ಆ ಸಮಯಕ್ಕೆ ಅಲ್ಲಿಗೆ ಅಗಮಿಸಿದ ಆಶ್ರಮದ ಪಾಲಕ ದ್ವಾರಕೀಶ್ ಯೋಗಿಗೆ ಧೈರ್ಯ ತುಂಬಿ ನಗರಕ್ಕೆ ಕಳುಹಿಸುವ ಸನ್ನಿವೇಶವನ್ನು ಕೆಂಗೇರಿ ಬಳಿಯಿರುವ ಗಾಂಧಿ ಆಶ್ರಮದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ನಾಯಕ ಯೋಗೀಶ್ ಹಾಗೂ ದ್ವಾರಕೀಶ್ ಅವರೊಂದಿಗೆ ನೂರಾರು ಮಕ್ಕಳು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಹಾಗೂ ಮೋಹನ್.ಜಿ.ನಾಯಕ್ ನಿರ್ಮಿಸುತ್ತಿರುವ ರಾವಣ ಚಿತ್ರಕ್ಕೆ ನಿರ್ದೇಶಕ ಯೋಗೀಶ್ ಹುಣಸೂರು ಅವರೇ ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಭಿಮಾನ್ ಸಂಗೀತ, ಆರ್.ಗಿರಿ ಛಾಯಾಗ್ರಹಣ, ದಿನೇಶ್‌ಮಂಗಳೂರ್ ಕಲೆ, ರವಿವರ್ಮ ಸಾಹಸ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಚಂಪಕಧಾಮಬಾಬು ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಸಂಚಿತಾ ಪಡುಕೋಣೆ, ಸಂತೋಷ್, ಶ್ರೀನಿವಾಸಮೂರ್ತಿ, ದ್ವಾರಕೀಶ್, ನೀನಾಸಂಅಶ್ವತ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಸಿನಿಸುದ್ದಿ)
ಸೈಕಲ್ ಮೇಲೆ ಅಂಬಾರಿ ಹೊತ್ತ ಯೋಗೀಶ್!
ರಾವಣನಿಗೆ ಜೊತೆಯಾದ ಪಡುಕೋಣೆ ಬೆಡಗಿ
ಸಂಚಿತಾ ಪಡುಕೋಣೆ ಮೋಹಕ ಚಿತ್ರಪಟಗಳು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada