»   »  ಬಲಗಾಲಿಟ್ಟು ಒಳಗೆ ಬಾಮ್ಮಾ ಪ್ರಿಯಾಮಣಿ!

ಬಲಗಾಲಿಟ್ಟು ಒಳಗೆ ಬಾಮ್ಮಾ ಪ್ರಿಯಾಮಣಿ!

Posted By:
Subscribe to Filmibeat Kannada
ಕಡೆಗೂ ಬೆಂಗಳೂರು ಬೆಡಗಿ ಪ್ರಿಯಾಮಣಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಕಳೆದೊಂದು ವರ್ಷದಿಂದ ಆಕೆಯ ಕಾಲ್ ಶೀಟ್ ಗಾಗಿ ನಮ್ಮ ನಿರ್ಮಾಪಕರು ಅಲೆದು ಅಲೆದು ಹೈರಾಣಾಗಿದ್ದರು. ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ 'ರಾಮ್' ಚಿತ್ರದ ಮೂಲಕ ಕನ್ನಡಕ್ಕೆ ಪ್ರಿಯಾಮಣಿ ಆಗಮನವಾಗುತ್ತಿದೆ.

ಆದಿತ್ಯ ಬಾಬು ನಿರ್ಮಿಸುತ್ತಿರುವ ರಾಮ್ ಚಿತ್ರ ಹತ್ತು ದಿನಗಳ ಶೂಟಿಂಗ್ ಮುಗಿಸಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ. ನಲವತ್ತ್ತಕ್ಕೂ ಹೆಚ್ಚು ಕಲಾವಿದರಿರುವ ರಾಮ್ ಚಿತ್ರದ ತಾರಾಗಣಕ್ಕೆ ಈಗ ಹೊಸದಾಗಿ ಪ್ರಿಯಾಮಣಿ ಸೇರ್ಪಡೆಯಾಗಿದ್ದಾರೆ. ಕಳೆದೊಂದು ವರ್ಷದಿಂದ ಆಕೆಯನ್ನು ಕನ್ನಡಕ್ಕೆ ಕರೆತರುವ ಕಸರತ್ತು ತೆರೆಮರೆಯಲ್ಲಿ ನಡೆಯುತ್ತ್ತಿತ್ತು. ನಿರ್ಮಾಪಕ ಆದಿತ್ಯ ಬಾಬು ಮೂಲಕ ಆ ಕನಸು ನೆರವೇರಿದೆ.

ಓದಿದ್ದು ಬಿ.ಎ ಮನಃಶಾಸ್ತ್ರ, ನಂತರ ರೂಪದರ್ಶಿಯಾಗಿ ವೃತ್ತಿಜೀವನ ಪ್ರಾರಂಭಿಸಿದ ಪ್ರಿಯಾಮಣಿ ಕಡೆಗೆ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡರು. ಇಂಗ್ಲಿಷ್, ಹಿಂದಿ ಸೇರಿದಂತೆ ದಕ್ಷಿಣದ ಎಲ್ಲ ಭಾಷೆಗಳೂ ಗೊತ್ತು. ಹಾಗಾಗಿ ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಕನ್ನಡಕ್ಕೂ ಅಡಿಯಿಟ್ಟಿದ್ದಾರೆ. ಗ್ಲಾಮರಸ್ ಪಾತ್ರಗಳನ್ನೇ ಹೆಚ್ಚಾಗಿ ಇಷ್ಟಪಡುತ್ತೇನೆ ಎನ್ನುವ ಪ್ರಿಯಾಮಣಿಗೆ ಹಿಂದಿಯ ಕಾಜೊಲ್ ಮತ್ತು ಶ್ರೀದೇವಿಯ ಕಟ್ಟಾ ಅಭಿಮಾನಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕನ್ನಡಕ್ಕೆ ಶೂರ್ಪನಖಿಯಾದ ಪ್ರಿಯಾಮಣಿ
ಬಳೆ ತೊಡಲು ಕನ್ನಡಕ್ಕೆ ಬರುವರೆ ಪ್ರಿಯಾಮಣಿ?
ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada