ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದ ಸುದೀಪ್
ಬಿಡುಗಡೆಗೂ ಮುನ್ನವೇ ಕಿಚ್ಚ ಸುದೀಪ್ ಹೊಸ ಚಿತ್ರವೊಂದು ಯೂಟ್ಯೂಬ್‌ನಲ್ಲಿ ಭಾರಿ ಗದ್ದಲ ಎಬ್ಬಿಸಿದೆ. ಈ ಚಿತ್ರದ ಟ್ರೇಲರನ್ನು ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದು ಹೊಸ ದಾಖಲೆ ನಿರ್ಮಿಸಿದೆ. ಟಾಲಿವುಡ್‌ನಲ್ಲಿ ಸುದೀಪ್‌ಗೆ ಇಷ್ಟೊಂದು ಅಭಿಮಾನಿ ಬಳಗವಿರುವುದು ನಿಜಕ್ಕೂ ಅಚ್ಚರಿ ಸಂಗತಿ.
ಎಸ್.ಎಸ್. ರಾಜಮೌಳಿ ನಿರ್ದೇಶನದ 'ಈಗ' ಚಿತ್ರದ ಟ್ರೇಲರ್ ಯೂಟ್ಯೂಬ್‍ಗೆ ಹಾಕಲಾಗಿದೆ. ಒಂದೇ ವಾರದಲ್ಲಿ ಆ ಟ್ರೇಲರ್‌ಗೆ 5,63,000 ಹಿಟ್ಸ್ ಬಂದಿದೆ. ವಿಶೇಷ ಎಂದರೆ ತೆಲುಗಿನ ರಾಮ್ ಚರಣ್ ತೇಜ, ಜೂನಿಯರ್ ಎನ್ಟಿಆರ್, ಪವನ್ ಕಲ್ಯಾಣ್ ಚಿತ್ರದ ಟ್ರೇಲರ್‌ಗಳಿಗೆ ಯೂಟ್ಯೂಬ್‌ನಲ್ಲಿ ಈ ಮಟ್ಟದ ಯಶಸ್ಸು ಪಡೆದಿರಲಿಲ್ಲ.
'ಈಗ' ಚಿತ್ರಕ್ಕೆ ಇಷ್ಟೊಂದು ಹಿಟ್ಸ್ ಬರಲು ರಾಜಮೌಳಿ ಚಿತ್ರ ಎಂಬ ಕಾರಣವೂ ಒಂದಾಗಿರಬಹುದು. ಒಟ್ಟಿನಲ್ಲಿ ಈ ಬೆಳವಣಿಗೆಯಿಂದ ಕಿಚ್ಚ ಸುದೀಪ್‌ಗೂ ಸಾಕಷ್ಟು ಲಾಭವಾಗಿದೆ. ಇಡೀ ತೆಲುಗು ಚಿತ್ರೋದ್ಯಮ 'ಈಗ' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು ಟಾಲಿವುಡ್‌ನಲ್ಲಿ ಸುದೀಪ್ ವೃತ್ತಿಜೀವನಕ್ಕೂ ಹೊಸ ತಿರುವು ನೀಡುವ ನಿರೀಕ್ಷೆಯಿದೆ. (ಏಜೆನ್ಸೀಸ್)


Click it and Unblock the Notifications











