»   »  ಭೀಮೂಸ್ ಬ್ಯಾಂಗ್ ಬ್ಯಾಂಗ್ ಗೆ ಬಿಡುಗಡೆ ಭಾಗ್ಯ

ಭೀಮೂಸ್ ಬ್ಯಾಂಗ್ ಬ್ಯಾಂಗ್ ಗೆ ಬಿಡುಗಡೆ ಭಾಗ್ಯ

Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಮ್ಯಾ ಮುಖ್ಯ ಭೂಮಿಕೆಯಲ್ಲಿರುವ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಈ ತಿಂಗಳಲ್ಲಿ ಬಿಡುಗಡೆ ಕಾಣಲಿದೆ. ಚಿತ್ರ ಸೆನ್ಸಾರ್ ವೀಕ್ಷಣೆಗೆ ಹೋಗಲಿದ್ದು ಸೆನ್ಸಾರ್ ಮಂಡಳಿಯಿಂದ ಅರ್ಹತಾಪತ್ರ ಬಂದ ನಂತರ ಚಿತ್ರ ಬಿಡುಗಡೆ ದಿನಾಂಕವನ್ನು ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಘೋಷಿಸಲಿದ್ದಾರೆ ಎನ್ನುತ್ತದೆ ಚಿತ್ರತಂಡ.

ಬಹುಕೋಟಿ ವೆಚ್ಚದ ಮತ್ತು ದೊಡ್ಡ ಸ್ಟಾರ್ ಗಳು ಇರುವ ಚಿತ್ರವಾಗಿರುವುದರಿಂದ ಚಿತ್ರ ಬಿಡುಗಡೆಗೆ ಕೆಲವೊಂದು ಅಡ್ಡಿ ಆತಂಕಗಳು ಇರುತ್ತದೆ ಎಂದು ಬಾಬು ಸಬೂಬು ನೀಡಿದರೂ ಐಡಿಬಿಐ ಬ್ಯಾಂಕ್ ನ ಸಾಲದ ಸುಳಿಗೆ ಸಿಕ್ಕು ಬಿಡುಗಡೆ ಕಾಣಲು ಪರದಾಡುವಂತಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಉಪೇಂದ್ರ, ರಮ್ಯಾ ಹಾಗೂ ನಾಲ್ವರು ಬಾಲ ಕಲಾವಿದರನ್ನು ಒಳಗೊಂಡ ಈ ಚಿತ್ರದಲ್ಲಿ ಅನಿಮೇಷನ್ ಮತ್ತು ವಿಜುವಲ್ ಎಫೆಕ್ಟ್ ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಒಂದು ಅನಿಮೇಟೆಡ್ ಪಾತ್ರವನ್ನು ಕೂಡ ಸೃಷ್ಟಿಸಸಲಾಗಿರುವ ಈ ಚಿತ್ರ ಭಯೋತ್ಪಾದಕರೊಂದಿಗಿನ ಹೋರಾಟವನ್ನು ಬಿಂಬಿಸುತ್ತದೆ. ಭೀಮೂಸ್ ಚಿತ್ರ ಈ ತಿಂಗಳು ಬಿಡುಗಡೆ ಕಂಡರೆ ಬಹು ನಿರೀಕ್ಷಿತ 'ರಾಜ್' ಮತ್ತು 'ಪ್ರೇಮ್ ಕಹಾನಿ' ಗೆ ಯಾವ ರೀತಿ ಪೈಪೋಟಿ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada