»   » ದಿಲ್ಲಿ ರೇಪ್: BTS ಬಸ್ಸಿನಲ್ಲಿ ನಟ ರಮೇಶ್ ಹೇಳಿದ್ದೇನು?

ದಿಲ್ಲಿ ರೇಪ್: BTS ಬಸ್ಸಿನಲ್ಲಿ ನಟ ರಮೇಶ್ ಹೇಳಿದ್ದೇನು?

Posted By:
Subscribe to Filmibeat Kannada
11-delhi-molest-actor-ramesh-aravind-bus-journey-reply
ಏನೂ ಇಲ್ಲ... ಕತ್ರಿಗುಪ್ಪೆಯಲ್ಲಿ ನಿಂತು ತಮ್ಮ ನೆನಪಿನ ಬಂಡಿಯನ್ನು 30 ವರ್ಷಗಳ ಹಿಂದಕ್ಕೆ ತಿರುಗಿಸುತ್ತಾರೆ. 'ಛೇ, ಈ 30 ವರ್ಷಗಳಲ್ಲಿ ಏನಾಗಿಬಿಟ್ಟಿತು!' ಎಂದು ಮ್ಲಾನವದನರಾಗಿ ಪಿಚ್ಚೆನ್ನುತ್ತಾರೆ.

ಆ ಕರಾಳ ಭಾನುವಾರ ರಾತ್ರಿ ದೆಹಲಿ ಬಸ್ಸಿನಲ್ಲಿ ನಡೆದ ಹೇಯ ಘಟನೆಯ ಬಗ್ಗೆ, ತಾವು ಓಡಾಡುತ್ತಿದ್ದ ಬಸ್ಸಿನಲ್ಲಿದ್ದ ವಾತಾವರಣವನ್ನು ಸುಮ್ಮನೆ ಮೆಲುಕು ಹಾಕುವ ಮೂಲಕ ಇಡೀ ಮೂವತ್ತು ವರ್ಷಗಳಲ್ಲಿ ನಿಯಂತ್ರಣ ತಪ್ಪಿದ ಬದುಕೆಂಬ ಬಸ್ಸಿನ ಪಯಣವನ್ನು ಡಾಕ್ಯುಮೆಂಟರಿ ತರಹ, ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ.

'ಅದು, ಬಸ್ ನಂಬರ್ 3B. ಪ್ರತಿದಿನ ಬೆಳಗ್ಗೆ ನಾವು ಇದೇ ಬಸ್ಸಿಗೆ ಕುತೂಹಲದಿಂದಲೇ ಕಾಯುತ್ತಿದ್ದೆವು. ಅದು ಬ್ಯಾಂಕ್ ಕಾಲನಿಯಿಂದ ಸಿಟಿಗೆ ನಮ್ಮನ್ನು ಕರೆದೊಯ್ಯುತ್ತಿತ್ತು. ಅದೇ ಬಸ್ಸು ನಮ್ಮನ್ನು ಕಾಲೇಜಿಗೂ ಕರೆದುಕೊಂಡು ಹೋಗುತ್ತಿತ್ತು.

ಆ ಬಸ್ಸಿನ ಚಾಲಕ ಎಷ್ಟು ದಯಾಳುವಾಗಿದ್ದನೆಂದರೆ, ನಾವೇನಾದರೂ ಬರೋದು ಸ್ವಲ್ಪವೇ ತಡವಾಗಿದ್ದರೆ, ಕೆಲ ನಿಮಿಷ ಅಲ್ಲೇ ನಮ್ಮ ಗುಂಪಿಗಾಗಿ ಕಾಯುತ್ತಿದ್ದ! ಕಂಡಕ್ಟರ್ ಕೂಡ ಒಳ್ಳೆಯವನೇ.

ಫುಟ್‌ ಬೋರ್ಡ್‌ ನಲ್ಲಿ ಬಸ್ಸೊಳಗೆ ಬರಲು ಕಷ್ಟ ಪಡುವ ಯಾವುದೇ ಮಹಿಳೆಗಾದರೂ ಆತ ಸಹೋದರನಂತೆ ಕೈಹಿಡಿದು ಸಂತೋಷದಿಂದಲೇ ಸಹಾಯ ಮಾಡುತ್ತಿದ್ದ. ಸಾರಿಗೆ ಸಂಚಾರಕ್ಕಾಗಿಯೇ ಮೀಸಲಾಗಿದ್ದ ಈ ಬಸ್ಸನ್ನು ಬಳಸುತ್ತಿರುವ, ಒಳಗಿರೋ ಪ್ರಯಾಣಿಕರೆಲ್ಲರೂ ಸಭ್ಯರೇ'.

ಎಂದು ಒಂದೇ ಉಸುರಿನಲ್ಲಿ ಹೇಳುವ ರಮೇಶ್, 30 ವರ್ಷಗಳ ನಂತರದ ಬಸ್ ಪ್ರಯಾಣಕ್ಕೆ ಗಕ್ಕನೇ ಬ್ರೇಕ್ ಹಾಕಿ, ಫಾಸ್ಟ್ ಫಾರ್ವರ್ಡ್ ಮಾಡಿ ನೋಡುತ್ತಾರೆ ...

'ಅಂಥದ್ದೇ ಒಂದು ಬಸ್ಸು ದೆಹಲಿಯ ರಸ್ತೆಯಲ್ಲಿ... ಒಬ್ಬ ಡ್ರೈವರ್, ಒಬ್ಬ ಕಂಡಕ್ಟರ್, ಬಸ್ಸೊಳಗಿರುವವರು... ಲಕ್ಷಾಂತರ ಮಂದಿಯ ಸಂಚಾರಕ್ಕಾಗಿ ಉಪಯೋಗವಾಗುತ್ತಿದ್ದ ಒಂದು ಬಸ್ಸು... ಊಹಿಸಲೂ ಸಾಧ್ಯವಿಲ್ಲದ ಪಾತಕವೊಂದು ಅಲ್ಲಿ ನಡೆದುಹೋಗುತ್ತದೆ!' ಎಂದು ನಿಟ್ಟುಸಿರು ಬಿಟ್ಟರು.

ತಾವು ಸಂಚರಿಸುತ್ತಿದ್ದ ಬಸ್ಸೇ ಅಪಘಾತಕ್ಕೀಡಾಯಿತೇನೋ ಎಂಬಂತೆ ದುಃಸ್ವಪ್ನದಿಂದ ಎದ್ದ 'ನಾವು ಮಕ್ಕಳಾಗಿದ್ದಾಗ ಬಸ್ಸು ಪ್ರಯಾಣವೆಂದರೆ ಅದರಲ್ಲಿದ್ದ ಮಜಾನೇ ಬೇರೆ. ಹಾಗಿದ್ದರೆ ಈ ಮೂವತ್ತು ವರ್ಷಗಳ ಅಂತರದಲ್ಲಿ ಏನಾಯಿತು?' ಎಂದು ಮತ್ತೆ ಮ್ಲಾನವದನರಾಗಿ ಕೇಳುತ್ತಾರೆ. ಹೀಗೆ, ತಮ್ಮ ಗತಕಾಲದ ಬಸ್ ಪ್ರಮಾಣದ ಮೂಲಕ ಅತ್ಯಾಚಾರದ ಬಗ್ಗೆ ಮಾರ್ಮಿಕವಾಗಿ ನುಡಿದ ರಮೇಶ್ ಗೆ ಒಂದು ಥ್ಯಾಂಕ್ಸ್.

English summary
Delhi Molestation: Actor-Director Ramesh Aravind BMTC bus journey reply. 
Please Wait while comments are loading...