»   »  ಗಿರೀಶ್ ಕಾಸರವಳ್ಳಿ ಪುಟಾಣಿ ಸಂದರ್ಶನ

ಗಿರೀಶ್ ಕಾಸರವಳ್ಳಿ ಪುಟಾಣಿ ಸಂದರ್ಶನ

By: *ಜಯಂತಿ
Subscribe to Filmibeat Kannada
Girish Kasaravalli
ಹೊಸ ಸಿನಿಮಾ ಎಲ್ಲಿಗೆ ಬಂತು?
ಕಾಸರವಳ್ಳಿ: ಚಿತ್ರಕಥೆ ಸಿದ್ಧವಾಗಿದೆ. ಸಿನಿಮಾ ಇನ್ನೂ ಸೆಟ್ಟೇರಬೇಕಿದೆ. ನಿರ್ಮಾಪಕರು ಇನ್ನೂ ಪಕ್ಕಾ ಆಗಿಲ್ಲ.

ಆ ಚಿತ್ರವನ್ನು ರಿಲಯನ್ಸ್ ಸಂಸ್ಥೆ ನಿರ್ಮಿಸಬೇಕಿತ್ತು ಅಲ್ಲವಾ?
ಹೌದು. ಆದರೆ, ಆರ್ಥಿಕ ಹಿಂಜರಿತದ ಕಾರಣ ರಿಲಯನ್ಸ್ ಸಂಸ್ಥೆ ಈಗ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದೆ. ಹಾಗಾಗಿಯೇ ಈ ವಿಳಂಬ.

ಸಿನಿಮಾದ ಕಥೆ?

ಅಮರೇಶ ನುಗಡೋಣಿ ಅವರ ಸವಾರಿ ಕಥೆಯನ್ನು ಆಧರಿಸಿ ಚಿತ್ರಕಥೆ ಮಾಡಿದ್ದೇನೆ. ಈಚಿನ ದಿನಗಳಲ್ಲಿ ನನ್ನನ್ನು ತುಂಬಾ ಕಾಡಿದ ಕಥೆಯಿದು. ಅನಂತಮೂರ್ತಿ ಅವರಿಗೆ ಕೂಡ ಈ ಕಥೆ ತುಂಬಾ ಇಷ್ಟವಾಗಿದೆ. ಇದು ಕನ್ನಡದ ಗಟ್ಟಿ ಕಥೆ ಕಣಯ್ಯ ಎಂದು ಫೋನ್ ಮಾಡಿದ್ದರು.

ಗುಲಾಬಿ ಟಾಕೀಸ್ ಸಮಾಚಾರ?
ಕಾಸರವಳ್ಳಿ: ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಗುಲಾಬಿ ಟಾಕೀಸ್ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ಕುಂದಾಪುರದಲ್ಲಿ ಪ್ರದರ್ಶನ ನಡೆಯಿತು. ಕೋಲಾರದಲ್ಲೂ ಪ್ರದರ್ಶನ ನಡೆದಿದೆ. ಬೈಂದೂರಿನಲ್ಲಿ ಚುನಾವಣೆ ಕಾರಣಕ್ಕೆ ಪ್ರದರ್ಶನ ಮುಂದೆ ಹೋಗಿದೆ. ಚಿತ್ರೋತ್ಸವಗಳಲ್ಲಿ ಭಾಗವಹಿಸುವುದು ಇದ್ದೇ ಇದೆ.

ಕೋಲಾರದಲ್ಲಿ ಗುಲಾಬಿ ಟಾಕೀಸ್ ಘಮಲು
ಚಿತ್ರ ವಿಮರ್ಶೆ: ಕಾಸರವಳ್ಳಿಯ ಕಲಾತ್ಮಕತೆಯ ಗುಲಾಬಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada