»   » ಕೋಮಲ್ ಗೆ 'ಗುರು'ಬಲ ತಂದ ಕಷ್ಟ

ಕೋಮಲ್ ಗೆ 'ಗುರು'ಬಲ ತಂದ ಕಷ್ಟ

Subscribe to Filmibeat Kannada

ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್‌ರ ಹೊಸಚಿತ್ರದಲ್ಲಿ ನಟಿಸುತ್ತಿರುವುದು ಕೋಮಲ್‌ಗೆ ಖುಷಿ ತಂದಿದೆ. ಆದರೆ ಇದೇ ಸಮಯದಲ್ಲಿ ಅವರು ಕಾಲ್‌ಷೀಟ್ ಹೊಂದಾಣಿಕೆಯ ಸಮಸ್ಯೆಗೆ ಸಿಕ್ಕಿಕೊಂಡಿದ್ದಾರೆ.

ಎದ್ದೇಳು ಮಂಜುನಾಥಾ ತೆರೆಕಂಡ ಸಂದರ್ಭದಲ್ಲಿ ಕೋಮಲ್ ಅವರು ಗುರು ನಿರ್ದೇಶನದ ಚಿತ್ರಕ್ಕೆ ಕಮಿಟ್ ಆಗಿದ್ದರು. ಅದಕ್ಕಾಗಿಯೇ ಮೂರು ತಿಂಗಳು ಯಾವ ಹೊಸ ಚಿತ್ರವನ್ನೂ ಅವರು ಒಪ್ಪಿಕೊಂಡಿರಲಿಲ್ಲ. ಇನ್ನೂ ಕಾದರೆ ಕಷ್ಟ ಎಂದು ಒಂದಷ್ಟು ಅವಕಾಶಗಳನ್ನು ಕೋಮಲ್ ಒಪ್ಪಿಕೊಂಡರು. ಹೀಗೆ ಒಪ್ಪಿಕೊಂಡ ಬೆನ್ನಿಗೇ ಗುರು ಸಿನಿಮಾ ಶುರುವಾಗುವ ಸೂಚನೆ ಹೊರಬಿದ್ದಿದೆ. ಜನವರಿಯಲ್ಲಿ ಡೈರೆಕ್ಟರ್‍ಸ್ ಸ್ಪೆಷಲ್ ಸೆಟ್ಟೇರುವ ನಿರೀಕ್ಷೆಯಿದೆ.

ಡೇಟ್ಸ್ ಹೊಂದಿಸುವುದು ಕಷ್ಟವಾಗ್ತಿದೆ. ಐದು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ವಿಧಿಯಿಲ್ಲ, ಎಲ್ಲವನ್ನೂ ತೂಗಿಸಿಕೊಂಡು ಹೋಗಲೇಬೇಕು ಎನ್ನುವುದು ಕೋಮಲ್ ಮಾತು. ಸದ್ಯಕ್ಕೆ ಕೋಮಲ್ ಅಶೋಕ್ ಕಶ್ಯಪ್ ನಿರ್ದೇಶನದ 'ಲಿಫ್ಟ್ ಕೊಡ್ಲಾ" ಚಿತ್ರೀಕರಣದಲ್ಲಿ ಬ್ಯುಸಿ. ಅಂದಹಾಗೆ, ಗುರುಪ್ರಸಾದ್ ಚಿತ್ರದ ತಾಂತ್ರಿಕ ವರ್ಗ ಹಾಗೂ ತಾರಾಬಳಗ ಇನ್ನೂ ಪಕ್ಕಾ ಆಗಬೇಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada