»   » 'ಮಳೆಯಲಿ ಜೊತೆಯಲಿ' ಪ್ರಪಂಚ ಪರ್ಯಟನೆ

'ಮಳೆಯಲಿ ಜೊತೆಯಲಿ' ಪ್ರಪಂಚ ಪರ್ಯಟನೆ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರ ಪ್ರಪಂಚ ಪರ್ಯಟನೆಗೆ ಹೊರಡಲು ಅಣಿಯಾಗಿದೆ. ಜನವರಿ 16ರಂದು 'ಮಳೆಯಲಿ ಜೊತೆಯಲಿ' ಚಿತ್ರ ವಿದೇಶಗಳಲ್ಲಿ ತೆರೆಕಾಣಲಿದೆ. ಮೊದಲು ಯುಎಸ್ ಎಯಲ್ಲಿ ತೆರೆಕಾಣಲಿರುವ ಈ ಚಿತ್ರ ನಂತರ ಉಳಿದ ದೇಶಗಳ ಕಡೆಗೆ ಪ್ರಯಾಣ ಬೆಳೆಸಲಿದೆ.

ಆಸ್ಟ್ರೇಲಿಯಾ, ಸಿಂಗಪುರ, ನ್ಯೂಜಿಲ್ಯಾಂಡ್, ಜರ್ಮನಿ, ಯುಕೆ, ಹಾಂಗ್ ಕಾಂಗ್, ದುಬೈ, ಹಾಲೆಂಡ್ ದೇಶಗಳಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ಬೆವಿನ್ ಎಕ್ಸ್ ಫೋರ್ಟ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ನ ಸುಮಂತ್ ರಾಜ್. ಗೋಲ್ಡನ್ ಮೂವೀಸ್ ಜೊತೆಗೆ ಇವರು ಒಪ್ಪಂದ ಮಾಡಿಕೊಂಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಬರುವ ಲಾಭಾಂಶವನ್ನು ಇಬ್ಬರೂ ಸಮವಾಗಿ ಹಂಚಿಕೊಳ್ಳಲಿದ್ದಾರೆ.

ವಿದೇಶಗಳಲ್ಲಿ ಚಿತ್ರ ಬಿಡುಗಡೆ ಮಾಡುವುದೆಂದರೆ ಸಾಮಾನ್ಯದ ಮಾತಲ್ಲ. ಪ್ರಿಂಟ್ ಗಳನ್ನು ಬೆಂಗಳೂರಿನಿಂದ ಮಂಡ್ಯಕ್ಕೆ ಸಾಗಿಸಿದಷ್ಟು ಕೆಲಸ ಸಲೀಸಲ್ಲ. ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಬೆವಿನ್ ಎಕ್ಸ್ ಫೋರ್ಟ್ ನ ನಿರ್ದೇಶಕ ಸುಮಂತ್ ರಾಜ್. ಈ ಹಿಂದೆ ಅಭಿ, ಆಕಾಶ್, ಅಜಯ್, ರಾಮ ಶಾಮ ಭಾಮ, ಸತ್ಯವಾನ್ ಸಾವಿತ್ರಿ, ಮುಂಗಾರು ಮಳೆ ಹಾಗೂ ರಾಜ್ ದ ಶೋಮ್ಯಾನ್ ಚಿತ್ರಗಳನ್ನು ಬೆವಿನ್ ಎಕ್ಸ್ ಫೋರ್ಟ್ ವಿದೇಶಗಳಲ್ಲಿ ಬಿಡುಗಡೆ ಮಾಡಿತ್ತು.

ತಮ್ಮ ನಿರ್ಮಾಣದ ಮಳೆಯಲ್ಲಿ ಜೊತೆಯಲಿ ಚಿತ್ರ ವಿದೇಶಗಳಿಗೆ ರಫ್ತಾಗುತ್ತಿರುವ ಬಗ್ಗೆ ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ವಿದೇಶಗಳಲ್ಲಿ ಗಣೇಶ್ ಚಿತ್ರಗಳನ್ನು ನೋಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಮಳೆಯಲಿ ಜೊತೆಯಲಿ ಚಿತ್ರಕ್ಕೆ ಇದುವರೆಗೂ ಯಾವುದೇ ನಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎನ್ನುತ್ತಾರೆ ಶಿಲ್ಪಾ ಗಣೇಶ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada