»   » ಅದೃಷ್ಟದ ಬಾಗಿಲು ತಟ್ಟಿದ ದಿಗಂತ್ ಮಂಚಲೆ

ಅದೃಷ್ಟದ ಬಾಗಿಲು ತಟ್ಟಿದ ದಿಗಂತ್ ಮಂಚಲೆ

Subscribe to Filmibeat Kannada

ಹುಡುಗಿಯ ಪಾಲಿನ ಧೂದ್ ಪೇಡಾ, ಗುಳಿ ಕೆನ್ನೆಯ ಹುಡುಗ ದಿಗಂತ್ ಗೆ ಅವಕಾಶಗಳ ಬಾಗಿಲು ತೆರೆದಿದೆ. ದಿಗಂತ್ ಅಭಿನಯದ ಬಿಸಿಲೇ, ತಾರೆ ಮತ್ತು ಸ್ವಯಂವರ ಚಿತ್ರಗಳು ತೆರೆಗೆ ಬರಲು ಹವಣಿಸುತ್ತಿವೆ. 'ಪುತ್ರ' ಚಿತ್ರ ಸಹ ಶರವೇಗದಲ್ಲಿ ಚಿತ್ರೀಕರಣ ಮುಗಿಸಿಕೊಳ್ಳುತ್ತ್ತಿದೆ.

'ಮನಸಾರೆ' ಚಿತ್ರದ ಯಶಸ್ಸಿನ ನಂತರ ದಿಗಂತ್ ಚಿತ್ರಗಳ ಬಗ್ಗೆ ಪ್ರೇಕ್ಷಕರಿಗೆ ಸಹಜವಾಗಿ ಕುತೂಹಲ ಇದ್ದೇ ಇದೆ. ಈ ನಡುವೆ ನಿರ್ಮಾಪಕ ಕೆ ಮಂಜು ಸಹ ದಿಗಂತ್ ಮನೆಯ ಬಾಗಿಲು ತಟ್ಟಿದ್ದಾರೆ. ಹಿಂದಿ ಚಿತ್ರ ಸೂಪರ್ ಹಿಟ್ ಚಿತ್ರ 'Wake Up Sid" ನ್ನು ಕನ್ನಡಕ್ಕೆ ತರುವ ಚಿಂತನೆ ಕೆ ಮಂಜು ಅವರದು.

ಮೂಲದಲ್ಲಿ ರಣಬೀರ್ ಕಪೂರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ದಿಗಂತ್ ಜತೆ ಕೆ ಮಂಜು ಮಾತುಕತೆ ನಡೆಯುತ್ತಿದೆ. ಕನ್ನಡದಲ್ಲಿ 'ಸೋಮಾರಿ ಸಿದ್ಧ' ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ಅಭಿನಯಕ್ಕೆ ಹೆಚ್ಚು ಒತ್ತು ನೀಡುವ ಚಿತ್ರ ಇದಾಗಿದೆ ದಿಗಂತ್ ಓಕೆ ಎನ್ನುವುದೊಂದೇ ಬಾಕಿ ಇದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada