»   » ಜ.15ಕ್ಕೆ ಶಾಹಿದ್, ಜೆನಿಲಿಯಾ ಛಾನ್ಸೆ ಪೆ ಡಾನ್ಸ್

ಜ.15ಕ್ಕೆ ಶಾಹಿದ್, ಜೆನಿಲಿಯಾ ಛಾನ್ಸೆ ಪೆ ಡಾನ್ಸ್

Subscribe to Filmibeat Kannada

ಶಾಹಿದ್ ಕಪೂರ್, ಜೆನಿಲಿಯಾರ ಜೊತೆಯಾಗಿ ನಟಿಸಿದ ಹಿಂದಿ ಚಿತ್ರ'ಛಾನ್ಸ್ ಪೆ ಡಾನ್ಸ್'.ಈ ಚಿತ್ರ ಜನವರಿ 15ರಂದು ಬಿಡುಗಡೆಯಾಗಲಿದೆ. ಕೆನ್ ಘೋಶ್ ಚಿತ್ರವನ್ನು ನಿರ್ದೇಶಿಸಿದ್ದು ಯುಟಿವಿ ಮೋಷನ್ ಪಿಕ್ಚರ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ.

'ಛಾನ್ಸ್ ಪೆ ಡಾನ್ಸ್ 'ಕತೆಯ ವಿಚಾರಕ್ಕೆ ಬಂದರೆ...ಸಮೀರ್ ಎಂಬ ಪ್ರತಿಭಾವಂತ ಯುವಕ ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಲು ಏನು ಮಾಡುತ್ತಾನೆ? ಬೆಳ್ಳಿತೆರೆಯ ಮೇಲೆ ಕಾಣಿಸಬೇಕೆಂಬ ಆತನ ಆಶಯ ಫಲಿಸುತ್ತದೆಯೇ? ಎಂಬ ಕೋನದಲ್ಲಿ ಚಿತ್ರಕತೆ ಸಾಗುತ್ತದೆ.

ಕತೆ ಹೀಗೆ ಸಾಗುತ್ತಿರಬೇಕಾದರೆ ಆತನ ಜೀವನದಲ್ಲಿ ಸುಂದರವಾದ ನೃತ್ಯ ನಿರ್ದೇಶಕಿ ಟೀನಾ ಅಡಿಯಿಡುತ್ತಾಳೆ. ಆಕೆ ಅಡಿಯಿಟ್ಟ ಮೇಲೆ ಚಿತ್ರಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಆ ತಿರುವು ಏನು ಎಂಬುದನ್ನು ಬೆಳ್ಳಿತೆರೆಯ ಮೇಲೆ ನೋಡಬೇಕು. ಅದ್ನಾನ್ ಸಮಿ, ಸಂದೀಪ್ ಶಿರೋಡ್ಕರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada