»   »  ಕನ್ನಡದಲ್ಲಿ ಹೊಸ ಪ್ರಯತ್ನ ಕಬಡ್ಡಿ: ಸೆನ್ಸಾರ್

ಕನ್ನಡದಲ್ಲಿ ಹೊಸ ಪ್ರಯತ್ನ ಕಬಡ್ಡಿ: ಸೆನ್ಸಾರ್

Subscribe to Filmibeat Kannada
Kabaddi movie still
ಬಾಲಿವುಡ್‌ನಲ್ಲಿ ಲಗಾನ್, ಚಕ್‌ದೇ ಇಂಡಿಯಾ, ವಿಕ್ಟರಿಯಂಥ ಕ್ರೀಡೆಗಳನ್ನು ಕುರಿತು ನಿರ್ಮಾಣವಾದ ಚಿತ್ರಗಳ ಯಶಸ್ಸು ಇನ್ನೂ ಇಂಥ ಅನೇಕ ಚಿತ್ರಗಳ ನಿರ್ಮಾಣಕ್ಕೆ ಸ್ಫೂರ್ತಿಯಾಯಿತು. ಅದೇ ರೀತಿ ಈಗ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆ ಇರುವಂಥ ಚಿತ್ರವೊಂದು ಇದೀಗ ಕನ್ನಡದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ನಿರ್ದೇಶಕ ನರೇಂದ್ರಬಾಬು, ಕಿಶೋರ್, ಹರ್ಷ ಹಾಗೂ ರಾಜು ಸೇರಿ ಕಬಡ್ಡಿ ಚಿತ್ರವನ್ನು ತಯಾರಿಸಿದ್ದಾರೆ. ರಾಘವೇಂದ್ರ ಹಾಗೂ ರವಿ ಅವರೂ ಜೊತೆಯಲ್ಲಿದ್ದಾರೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಹೊರಬಂದು, ಕಳೆದ ವಾರ ಸೆನ್ಸಾರ್ ಮುಂದೆ ಪ್ರದರ್ಶನಗೊಂಡಿತ್ತು. ಕನ್ನಡದಲ್ಲಿ ಹೊಸದೊಂದು ಪ್ರಯತ್ನ ಆಟವನ್ನು ಮೂಲವಾಗಿಟ್ಟುಕೊಂಡು ಚಿತ್ರವೊಂದನ್ನು ನಿರ್ಮಿಸಿದ್ದೀರಿ. ಇದನ್ನು ಹೊಸಬರ ಚಿತ್ರವೆಂದು ಹೇಳಲು ಸಾಧ್ಯವೇ ಇಲ್ಲ ಎಂದು ಸೆನ್ಸಾರ್ ಮಂಡಳಿ ಮೆಚ್ಚುಗೆ ಸೂಚಿಸಿದೆ.

ಅನಂತ್ ಅರಸ್ ಅವರ ಛಾಯಾಗ್ರಹಣ, ರಂಗಭೂಮಿ ಹಿನ್ನೆಲೆಯಿಂದ ಬಂದ ಹೂ ಪಟ್ಟಣಶೆಟ್ಟಿಯವರ ಸಂಭಾಷಣೆ ಈ ಚಿತ್ರಕ್ಕಿದ್ದು, ನಶಿಸಿಹೋಗುತ್ತಿರುವ ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಜನಪ್ರಿಯಗೊಳಿಸುವುದು ಈ ತಂಡದ ಮುಖ್ಯ ಉದ್ದೇಶ. ಪ್ರವೀಣ್ ಹಾಗೂ ಪ್ರಿಯಾಂಕ ಚಿತ್ರದ ಪ್ರಮುಖ ಪಾತ್ರದಲ್ಲಿದ್ದ್ದು, ಕಿಶೋರ್, ಶ್ರೀರಕ್ಷಾ, ಅವಿನಾಶ್, ಶೋಭಾ, ಮಂಜು ಹಾಗೂ ಸಿ.ಜಿ.ಕೆ. ಕಿರಣ್ ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕಬಡ್ಡಿಗೆ ಕೈಕೊಟ್ಟ ಪ್ರಬುದ್ಧ ವಿಲನ್ ಕಿಶೋರ್?
ಮರುಕಳುಹಿಸಿದ ಮಿನುಗು ತಾರೆ ಕಲ್ಪನಾ ನೆನಪು
ನೆನಪಿರಲಿ ಪ್ರೇಮ್ ಜತೆ ಅಮೂಲ್ಯ 'ಪ್ರೇಮಿಸಮ್'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada