For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೂ ಮುನ್ನವೇ 'ಮೈಲಾರಿ' ಫುಲ್ ಸೇಫ್

  By Rajendra
  |

  ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಮೈಲಾರಿ'. ಈ ಚಿತ್ರ ಸಾಕಷ್ಟು ಭರವಸೆಯನ್ನು ಹುಟ್ಟಿಸಿದ್ದು ಬಿಡುಗಡೆಗೂ ಮುನ್ನವೇ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ಜೇಬನ್ನು ಭರ್ತಿ ಮಾಡಿದೆ ಎಂಬ ಕನ್ಫರ್ಮ್ ಸುದ್ದಿ ಬಂದಿದೆ.

  'ಜಾಕಿ' ಮತ್ತು 'ಸೂಪರ್' ಚಿತ್ರಗಳ ಅಭೂತಪೂರ್ವ ಯಶಸ್ಸಿನಿಂದ ಕನ್ನಡಚಿತ್ರರಂಗದಲ್ಲಿ ಮತ್ತೆ ಹೊಸ ಶಕೆ ಆರಂಭವಾಗಿದೆ ಎಂದರೆ ತಪ್ಪಾಗಲಾರದು. 'ಮೈಲಾರಿ' ಚಿತ್ರ ಕೂಡಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂಬ ಟಾಕ್ ಗಾಂಧಿನಗರದಿಂದ ಕೇಳಿಬರುತ್ತಿದೆ.

  ಶಿವಣ್ಣ ಅಭಿನಯದ 99ನೇ ಚಿತ್ರ ಇದಾಗಿರುವುದರಿಂದ 99 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಬೇಕೆನ್ನುವುದು ನಿರ್ದೇಶಕ ಮತ್ತು ನಿರ್ಮಾಪಕರ ಯೋಚನೆ. ಆದರೆ 'ಜಾಕಿ' ಮತ್ತು 'ಸೂಪರ್' ಚಿತ್ರ ಪ್ರದರ್ಶನ ಕಾಣುತ್ತಿರುವ ಎಷ್ಟು ಚಿತ್ರಮಂದಿರಗಳು ಸದ್ಯ 'ಮೈಲಾರಿ' ದಾರಿ ಮಾಡಿಕೊಡುತ್ತದೆ ಎನ್ನುವುದು ಗ್ಯಾರಂಟಿ ಇಲ್ಲ. ಎಲ್ಲವೂ ಅಂದುಕೊಂಡಂತಾದರೆ ಈ ವಾರ (ಡಿ.17) ವೈಕುಂಠ ಚತುರ್ದಶಿಯ ಪುಣ್ಯ ದಿನದಂದು 'ಮೈಲಾರಿ' ತೆರೆಕಾಣುತ್ತಿದ್ದಾನೆ.

  ಮೂಲಗಳ ಪ್ರಕಾರ ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಸೆಂಟರ್ ಗಳ ರೈಟ್ಸ್ ಗಳು ಅತ್ಯುತ್ತಮ ಬೆಲೆಗೆ ಮಾರಾಟವಾಗಿವೆ. ಹೈದರಾಬಾದ್ ಕರ್ನಾಟಕ , ಕರಾವಳಿ ಮತ್ತು ಮೈಸೂರು ಪ್ರಾಂತ್ಯದ ಕೇಂದ್ರಗಳು ಉತ್ತಮ ಬೆಲೆ ನೀಡಿ ರೈಟ್ಸ್ ಪಡೆದುಕೊಂಡಿದೆ ಎನ್ನಲಾಗಿದೆ. ಬಿಕೆಟಿ (ಬೆಂಗಳೂರು, ಕೋಲಾರ, ತುಮಕೂರು) ಹಕ್ಕು ಗಳನ್ನು ನಿರ್ಮಾಪಕರು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

  English summary
  Kannada movie Mylari makes profit before release. Sources says that the producer Kanakapura Srinivas has financially in full safe position. Meanwhile Hat Trick Hero Shivarajkumar, Sada and Sanjana lead movie is releasing on Dec 17.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X