»   » ತಮಿಳು ರೀಮೇಕ್ ನಲ್ಲಿ ಪುನೀತ್ ರಾಜ್ ಕುಮಾರ್

ತಮಿಳು ರೀಮೇಕ್ ನಲ್ಲಿ ಪುನೀತ್ ರಾಜ್ ಕುಮಾರ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೊಂದು ರೀಮೇಕ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ತಮಿಳಿನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಕನಗವೇಲ್ ಕಾಗ್ಗ' ಎಂಬ ಚಿತ್ರ ಕನ್ನಡಕ್ಕೆ ರೀಮೇಕ್ ಆಗಲಿದೆ. ಮೂಲಚಿತ್ರದಲ್ಲಿ ಕರಣ್, ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ಚಿತ್ರ.

ಕನಗವೇಲು ಕಾಗ್ಗ ಚಿತ್ರವನ್ನು ಆಕರ್ಷಿಣಿ ಫಿಲಂಸ್ ಲಾಂಛನದಲ್ಲಿ ಶರವಣನ್ ನಿರ್ಮಿಸಿದ್ದರು. ಕವಿನ್ ಬಾಲಾ ಆಕ್ಷನ್, ಕಟ್ ಹೇಳಿದ್ದ ಚಿತ್ರ ಇದಾಗಿತ್ತು. ಕನ್ನಡಕ್ಕೂ ಸಹ ಅವರೇ ಆಕ್ಷನ್, ಕಟ್ ಹೇಳಲಿದ್ದಾರೆ. ವೈರಮುತ್ತು ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಕವಿನ್ ಬಾಲಾ ಅವರದು.

ಪುನೀತ್ ರಾಜ್ ಕುಮಾರ್ ಜೊತೆ ಅನುಷ್ಕಾ ನಟಿಸಲಿದ್ದಾರೆ ಎಂಬುದು ತಾಜಾ ವರ್ತಮಾನ. ಉಳಿದ ತಾರಾಬಳಗ ಸೇರಿದಂತೆ ತಂತ್ರಜ್ಞರ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ಸಹಇಟ್ಟಿಲ್ಲ. ವರದಿಗಾರನೊಬ್ಬನ ಸುತ್ತ ಸುತ್ತುವ ಕಥೆ ಇದಾಗಿದ್ದು, ಕಮರ್ಷಿಯಲ್ ಧಾಟಿಯ ಮನರಂಜನಾತ್ಮಕ ಚಿತ್ರವಿದು. ವಿಜಯ್ ಆಂಟೋನಿ ಅವರ ಸಂಗೀತ ಚಿತ್ರಕ್ಕಿರುತ್ತದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada